ನಾಡೋಜ ಸಾರಾ ಅಬೂಬಕರ್: ನುಡಿನಮನ ಕಾರ್ಯಕ್ರಮ

ರಾಯಚೂರು,ಜ.೧೪- ಇತ್ತೀಚಿಗೆ ನಿಧನರಾದ ಹಿರಿಯ ಖ್ಯಾತ ಸಾಹಿತಿ ನಾಡೋಜ ಸಾ.ರಾ ಅಬೂಬಕರ್ ಅವರಿಗೆ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೀರ ಹನುಮಾನ್ ಮಾತನಾಡಿ, ನಡೋಜ ಸಾ.ರಾ ಅಬೂಬಕರ್ ಅವರು ನಮ್ಮ ಸಾಹಿತ್ಯ ಲೋಕಕ್ಕೆ ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಿ ಅವರು ಹೆಣ್ಣು ಮಕ್ಕಳಲ್ಲಿ ಸಾಹಿತ್ಯ ಬೆಳೆಸಲು ಸಾಕಷ್ಟು ಕೃಷಿಯನ್ನು ಮಾಡಿದ್ದರು. ಅವರ ನಿಧನದಿಂದಾಗಿ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಇದೇ ವೇಳೆ ಭಗತ್ ರಾಜ್ ನಿಜಾಮಕಾರಿ, ಹಿರಿಯ ಪತ್ರಕರ್ತ ಭೀಮರಾಯ ಹದ್ದಿನಾಳ, ಜಿಲ್ಲಾ ಸಹಕಾರಿದರ್ಶಿ ದಂಡಪ್ಪ ಬಿರಾದಾರ್, ಖಾನ್ ಸಾಬ್ ಮೋಮಿನ್, ದೇವೇಂದ್ರಮ್ಮ ಸೇರಿದಂತೆ ಅನೇಕರು ತಮ್ಮನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕಟೇಶ್ ಬೇವಿನ ಬೆಂಚಿ ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ರಾವುತರಾವ್ ಬರೂರ, ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ್, ಕೋಶಾಧ್ಯಕ್ಷ ಬಿ. ವಿಜಯರಾಜೇಂದ್ರ, ರುದ್ರಯ್ಯ ಗುಣಾರಿ, ಅಯ್ಯಪ್ಪಯ್ಯ ಪಿಕಳಿಹಾಳ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು ಈ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.