ನಾಡು ನುಡಿ ಸಂರಕ್ಷಣೆಗೆ ಸದಾ ಬದ್ದ ನಿರಂತರ ಹೋರಾಟ : ದೇವಿಂದ್ರ ಮುದನೂರ

ಹುಣಸಗಿ:ನ.15: ಭಾರತ ಮಾತೆಯ ಸೇವೆಮಾಡಲು ತಮಗೆ ಅವಕಾಶ ನೀಡಲಾಗಿದೆ ಸೇವೆಯೊಂದಿಗೆ ಸಂಘ ಮುನ್ನಡೆಸಿಕೊಂಡು ಹೋಗಬೇಕಾಗಿದ್ದು ತಮ್ಮೆಲ್ಲರ ಕರ್ತವ್ಯ ಎಂದು ದೇವಿಂದ್ರ ಮುದನೂರ ಹೇಳಿದರು. ನೂತನ ಹುಣಸಗಿ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ಕರುನಾಡು ವಿಜಯಸೇನೆ ಘಟಕ ರಚಿಸಿ ಪದಾಧಿಕಾರಿಗಳನ್ನು ನೇಮಕಗೊಳಿಸಿ ಮಾತನಾಡಿ, ಪ್ರೀತಿ ವಿಶ್ವಾಸದಿಂದ ಸಾಮಾಜೀಕವಾಗಿ ಒಳ್ಳೆಯ ಕಾರ್ಯ ಮಾಡಬೇಕು. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಲ್ಲಬೇಕು, ನೋವಿನ ಪರವಾಗಿ ಹೋರಾಟಾತ್ಮಕವಾಗಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.
ನೂತನ ಪದಾಧಿಕಾರಿಗಳ ಆಯ್ಕೆ: ಕರುನಾಡು ವಿಜಯಸೇನೆ ಕೂಡಲಗಿ ಗ್ರಾಮ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಂಬರೀಶ್ ಕುಂಬಾರ (ಗೌರವ ಅಧ್ಯಕ್ಷ), ಭಾಗ್ಯವಂತ ಪಾಟೀಲ್,(ಅಧ್ಯಕ್ಷ), ಪರಶುರಾಮ ನಾಯಕ,(ಉಪಾಧ್ಯಕ್ಷ), ಗಣೇಶ್ ಕುಂಟಗೋಳ,( ಖಜಾಂಚಿ ),ಸಂಗನಗೌಡ ಪಾಟೀಲ್ ( ಪ್ರಧಾನ ಕಾರ್ಯದರ್ಶಿ ), ಸಿದ್ದು ನಾಯಕ (ಕಾರ್ಯದರ್ಶಿ) ರೇವಣಸಿದ್ದಪ್ಪ ಪೂಜಾರಿ, ( ಸಂಚಾಲಕ) ಬಸಪ್ಪ ಮಲ್ಲಪ್ಪ ( ಸಹ ಸಂಚಾಲಕರ) ಇವರನ್ನು ನೇಮಕಮಾಡಿ ಆದೇಶಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಭೀಮರೆಡ್ಡಿ ಬೇಕಿನಾಳ, ಜಿಲ್ಲಾ ಸಂಚಾಲಕ ಅಂಬು ದೇಸಾಯಿ, ತಾಲೂಕು ಅಧ್ಯಕ್ಷರಾದ ರವಿ ಬಿರಾದಾರ ಹಗರಟಗಿ, ತಾಲೂಕು ಯುವ ಘಟಕ ಅಧ್ಯಕ್ಷ ಶಶಿಕುಮಾರ್ ಮುದನೂರ್, ತಾಲೂಕು ಸಹ ಸಂಚಾಲಕ ಆನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.