ನಾಡು, ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ಸೋಂಪೂರ


ಶಿರಹಟ್ಟಿ,ನ.10-ಕನ್ನಡ ನಾಡು, ನುಡಿ, ಗಡಿ ಭಾಗದ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಕರ್ನಾಟಕ ಗತಕಾಲದ ವೈಭವವನ್ನು ಸ್ಮರಿಸುವ ಮೂಲಕ ಮಾತೃ ಭಾಷೆಯ ಅಭಿವೃದ್ಧಿಗೆ ಎಲ್ಲರೂ ಕೈಜೊಡಿಸಬೇಕು. ಅಂದಾಗ ಕನ್ನಡ ಉಳಿಯಲು ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಹೆಚ್ ಎಸ್. ಸೋಂಪೂರ ಹೇಳಿದರು.
ಅವರು ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕರವೇ (ನಾರಾಯಣಗೌಡ ಬಣ) ಗ್ರಾಮ ಘಟಕ ಹಾಗೂ ಯುವ ಘಟಕ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಷ್ಟು ಇತಿಹಾಸವಿದೆ. ದೇಶಕ್ಕೆ ಅನೇಕ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ನಾಡಿನಲ್ಲಿ ಕನ್ನಡ ಉಳಿಸಿಕೊಳ್ಳುವದಕ್ಕಾಗಿ ಪರದಾಡುವಂತಾಗಿದೆ. ಮಾತೃಭಾಷೆಯನ್ನು ಪೋಷಿಸುವ ಹೊಣೆ ಎಲ್ಲರ ಮೇಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹೆಬ್ಬಾಳದ ಗುರುಪಾದೇವರಮಠದ ಸಣ್ಣ ಹಾಲಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸಿದ್ದರು.
ಈ ವೇಳೆ ಗದಗ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಮುತ್ತುರಾಜ ಭಾವಿಮನಿ, ತಾಲೂಕಾ ಅಧ್ಯಕ್ಷ ಬಸವರಾಜ ವಡವಿ, ಶಂಭುಲಿಂಗನಗೌಡ್ರ ಪುಟ್ಟಮಲ್ಲಪ್ಪನವರ, ಪ್ರಕಾಶಗೌಡ್ರ ತೆಗ್ಗಿನಮನಿ, ಸಿ ಟಿ. ಮುಂಡವಾಡ, ಸಂಜಯ ಚವಡಾಳ, ಶರಣಬಸವ ಪಾಟೀಲ, ಶಿವಣ್ಣ ಕಂಠಿಗೌಡ್ರ, ಮಹೇಂದ್ರ ಉಡಚ್ಚಣ್ಣವರ, ವಿ ಪಿ. ಮನ್ಸೂರ, ಎಸ್ ಎಸ್. ಪಾಟೀಲ, ಮಾಜಿ ಸೈನಿಕರಾದ ಸುರೇಶ ಪಾಟೀಲ, ಮಲ್ಲಿಕಾರ್ಜುನ ವಾಲಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.