ನಾಡು-ನುಡಿ ರಕ್ಷಣೆ ನಮ್ಮೆಲ್ಲರ ಹೊಣೆ

ಪಾವಗಡ, ನ. ೨೪- ನಮ್ಮ ಭಾಷೆ, ನೆಲ, ಜಲ, ಸಂಸ್ಕೃತಿ, ಸಾಹಿತ್ಯ, ಸಂಗೀತ ಉಳಿಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.
ತಾಲ್ಲೂಕಿನ ಯರ್ರಮ್ಮನಹಳ್ಳಿ ಗ್ರಾಮದಲ್ಲಿ ವೀರ ಮದಕರಿ ಜಾನಪದ ಕಲಾ ಸಂಫದ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವತಿಯಿಂದ ಏರ್ಪಡಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಹಾಗೂ ಗಡಿನಾಡು ಜಾನಪದ ಕಲಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ತಂದೆ ತಾಯಿ ತಮ್ಮ ಮನೆಯಲ್ಲಿ ಕನ್ನಡ ಮಾತನಾಡಿ ನಿಮ್ಮ ಮಕ್ಕಳಿಗೂ ಕನ್ನಡ ಕಲಿಸಿಕೊಟ್ಟಾಗ ಮಾತ್ರ ಕನ್ನಡ ಭಾಷೆ ಉಳಿವಿಗೆ ಶ್ರಮಿಸಿದಂತಾಗುತ್ತದೆ ಎಂದರು.
ನಮ್ಮ ತಾಲ್ಲೂಕು ರಾಜ್ಯದ ಗಡಿ ತಾಲ್ಲೂಕು, ನಾವು ನಮ್ಮ ಗಡಿಯಲ್ಲಿ ನಾಡು-ನುಡಿ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ತೋರಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬೂದಿಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪ ಆನಂದಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ರಾಮಾಂಜಿ, ಪ್ರಭಾಕರ್ ರೆಡ್ಡಿ, ಕಲ್ಪನಾ ವಿರೂಪಾಕ್ಷಪ್ಪ, ಮಂಜುನಾಥ್, ರಾಮಮೂರ್ತಿ, ಕುರಿ ಮಲ್ಲಪ್ಪ, ಓಂಕಾರ ನಾಯಕ, ಆರ್.ಎನ್. ಲಿಂಗಪ್ಪ, ನಾರಾಯಣಪ್ಪ, ಹೋಮ ನಾಗರಾಜ, ನವೀನ್ ಕಿಲಾರ್ಲಹಳ್ಳಿ, ಉಪನ್ಯಾಸಕ ಮಲ್ಲಿಕಾರ್ಜುನ್, ಅನಿತ, ಮುತ್ಯಾಲಪ್ಪ, ಗೋವಿಂದರಾಜು, ರಾಜಣ್ಣ, ಸುಬ್ಬರಾಯಪ್ಪ, ಬೆಳ್ಳಿಬಟ್ಲು ಬಲರಾಮ, ಅಂಜನರೆಡ್ಡಿ, ನಾಗಭೂಷಣ್, ರಾಮಾಂಜಪ್ಪ, ಈರಪ್ಪ, ಲಿಂಗಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.