
ಶಹಾಬಾದ:ನ.9:ಕನ್ನಡ ನಾಡು, ನುಡಿ ರಕ್ಷಣೆಗೆ ಮುಂದಾಗಬೇಕು, ಹಾಗೂ ಕನ್ನಡವನ್ನು ಬೆಳೆಸಲು ಪ್ರಯೊಬ್ಬರು ಆಸಕ್ತಿತೋರಬೇಕು ಎಂದು ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಹೇಳಿದರು.
ಅವರು ನಗರದ ಪಾರ್ವತಿ ಸಭಾಗೃಹದಲ್ಲಿ ಸುವರ್ಣ ರಾಜ್ಯೋತ್ಸವ ನಿಮಿತ್ತ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ಕನ್ನಡ ಗೀತೆಗಳ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ದೇಶದಲ್ಲಿಯೇ ಉನ್ನತ ಸಂಸ್ಕøತಿ, ಅಧ್ಯಾತ್ಮ, ರಾಜಕೀಯ ಶಕ್ತಿಯನ್ನು ಹೊಂದಿದ ಕನ್ನಡ ನಾಡನ್ನು ಬ್ರಿಟೀಷರು ಮೈಸೂರ ಕರ್ನಾಟಕ, ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಎಂದು ಒಡೆದು ಆಳುವ ಮೂಲಕ ಕರ್ನಾಟಕವನ್ನು ಛಿದ್ರಗೊಳಿಸಿದ್ದರು. ಅಂತಹ ಕರ್ನಾಟಕ ಹಲವಾರು ಹೋರಾಟಗಳಿಂದ ಇಂದು ಆಖಂಡ ಕರ್ನಾಟಕವಾಗಿ ರೂಪಗೊಂಡಿದೆ ರಾಣಿ ಹಬ್ಬಕ್ಕನಂತಹ ವೀರ ಮಹಿಳೆಯರು ಪ್ರೆಂಚ್‍ರನ್ನು ಕನ್ನಡದ ನಾಡಿನಲ್ಲಿ ಕಾಲಿಡದಂತೆ ಹೋರಾಡಿದ ಕೀರ್ತಿ ಕನ್ನಡ ನಾಡಿಗಿದೆ. ಉತ್ತರ ಪಥೇಶ್ವರ ಎಂದು ಬಿರುದು ಪಡೆದ ಹರ್ಷನನ್ನು ದಕ್ಷಿಣ ಪಥೇಶ್ವರ ಎಂದು ಹೆಸರು ಪಡೆದ ಇಮ್ಮಡಿ ಪುಲಕೇಶಿ ಸೋಲಿಸಿದ ವೀರನಾಡು ಕನ್ನಡವಾಗಿದೆ. ದೈತ, ಅದೈತ, ವಿಶಿಷ್ಠಾದ್ವೈತವನ್ನು ಅಪ್ಪಿಕೊಂಡ ನಾಡು ಕನ್ನಡ, ದಾಸ, ಶರಣರನ್ನು ನಾಡಿಗೆ ನೀಡಿ, ವಿಶ್ವದಲ್ಲಿ ಪ್ರಥಮ ಸಂಸದ ಪರಿಕಲ್ಪನೆ ಕೊಟ್ಟಿದ್ದು ಕರ್ನಾಟಕ ಎಂಬ ಹೆಮ್ಮೆ ನಮಗೆ ಇದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು. ವೇದಿಕೆ ಮೇಲೆ ನಿಕಟ ಪೂರ್ವ ಅಧ್ಯಕ್ಷ ಮೃತ್ಯುಂಜಯ ಸ್ವಾಮಿ ಹಿರೇಮಠ, ಶರಣಗೌಡ ಪೋಲೀಸ್ ಪಾಟೀಲ (ಗೋಳಾ ಕೆ), ಮಹಾದೇವ ಬಂದಳ್ಳಿ, ಶರಣಗೌಡ ಪಾಟೀಲ ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜಶೇಖರ ಮಾಲಿ ಪಾಟೀಲ, (ಕೃಷಿ), ರಾಜು ಕೋಬಾಳ (ಸಂಗೀತ), ಲೋಹಿತ ಕಟ್ಟಿ (ಪತ್ರಿಕೆ), ಡಾ.ಚಿದಾನಂದ ಕುಡ್ಡನ್ (ಶಿಕ್ಷಣ), ಮಲ್ಲಿಕಾರ್ಜುನ ಬಂದಳ್ಳಿ (ಕೃಷಿ), ಮೌನೇಶ್ವರ ಸೋನಾರ (ಸಂಗೀತ), ಅರ್ಷದ ಹುಸೇನ (ಕ್ರೀಡಾ), ಶಂಕರ ಮಾವನೂರ (ಧಾರ್ಮಿಕ ಕ್ಷೇತ್ರ) ಅವರನ್ನು ಸತ್ಕರಿಸಲಾಯಿತು.
ರಾಜು ಕೋಬಾಳ, ದಶರಥ ಕೋಟನೂರ ತಂಡದಿಂದ ಕನ್ನಡ ಗೀತೆಗಳ ರಸಮಂಜರಿ, ಡಿ.ಸ್ಪೀರಿಟ್ ನೃತ್ಯ ತಂಡದ ನಿರ್ಧೇಶಕ ಪ್ರಮೋದ ನಾಟೀಕಾರ ನಿರ್ಧೇಶನದ ನೃತ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ನಗರದ ಗಣ್ಯರಾದ ವಿಶ್ವರಾಧ್ಯ ಬಿರಾಳ, ಕನಕಪ್ಪ ದಂಡಗುಲಕರ್, ಸಾಹೇಬಗೌಡ ಬೊಗುಂಡಿ, ಪೂಜಪ್ಪ ಮೇತ್ರೆ, ಸೂರ್ಯಕಾಂತ ಕೋಬಾಳ, ರವಿ ಅಲ್ಲಮಶೆಟ್ಟಿ, ಸದಾನಂದ ಕುಂಬಾರ, ಜಯಶ್ರೀ ಸೂಡಿ, ಗುರುರಾಜ ದಿಕ್ಷೀತ,
ಪ್ರತಿಭಟನೆ.
ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಘಟಕದ ಅಜೀವ ಸದಸ್ಯರನ್ನು ಹಿಂದಿನ ಪದಾಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂದು ಬಸವರಾಜ ಮಯೂರ ನೇತೃತ್ವದಲ್ಲಿ ಅಧ್ಯಕ್ಷರ ಹಾಗೂ ಗೌರವ ಕಾರ್ಯದರ್ಶಿಗಳ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ, ಕಾರ್ಯಕ್ರಮವನ್ನು ಭಹಿಷ್ಕರಿಸುವ ಘೋಷಣೆ ಕೂಗಲಾಯಿತು. ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ದಿಕ್ಕಾರ ಕೂಗಿದ ಸದಸ್ಯರು ಪರಿಷತ್ತಿನ ನಿಯಮಗಳನ್ನು ಮೀರಿ, ಕಸಾಪ ಒಂದು ಸಮೂದಾಯದ ಪರವಾಗಿ, ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾರ್ಯಕ್ರಮವನ್ನು ಬಹಿಷ್ಕರಿಸುವದಾಗಿ ಎಚ್ಚರಿಕೆ ನೀಡಿದರು ನಂತರ ತಾಲೂಕ ಅಧ್ಯಕ್ಷರು, ನಗರದ ಗಣ್ಯರ, ಪೋಲಿಸರ ಮಧ್ಯ ಪ್ರವೇಶದಿಂದ ಸಮಾರಂಭ ಬಹಿಷ್ಕರಿಸಿ ಹೊರಗೆ ಹೋಗಿದ್ದವರನ್ನು ಮನವೋಲಿಸಿ ಸಮಾರಂಭಕ್ಕೆ ಕರೆತರಲಾಯಿತು. ಪ್ರತಿಭಟನೆಯಲ್ಲಿ ಪ್ರವೀಣ ರಾಜನ್, ಶಿವಶಾಲ ಪಟ್ಟಣಕರ್, ಸೋಹಿಲ್ ಬಂಟಿ, ಶರಣಗೌಡ ಪಾಟೀಲ, ಪೂಜಪ್ಪ ಮೇತ್ರೆ, ಮರಲಿಂಗ ಯಾದಗಿರಿ, ಅನೀಲ ಮೈನಾಳಕರ್, ಗೌತಮ, ಮಹೇಶ ಕಾಂಬಳೆ, ಯಲ್ಲಾಲಿಂಗ ಸೇರಿದಂತೆ ಇತರರು ಇದ್ದರು.