ನಾಡು-ನುಡಿ, ಜಲಕ್ಕೆ ಹೋರಾಟ ಅಗತ್ಯ


ಲಿಂಗಸುಗೂರು.ನ.೨-ಕನ್ನಡ ಭಾಷೆ ಉಳಿಸಿ, ಬೆಳೆಸಲು ಕನ್ನಡ ಸಂಘಟಕರ ಕೊಡುಗೆ ಅಪಾರವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯು ಕನ್ನಡನಾಡಿನ ಭಾಷೆ, ಜಲ, ಗಡಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದೆ ಎಂದು ಪಿಎಸ್‌ಐ ಪ್ರಕಾಶ ಡಂಬಳ್ ಹೇಳಿದರು.
ಸ್ಥಳೀಯ ಕರವೇ ಕಚೇರಿಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರುನಾಡಿನ ಉದಯದ ಹಿನ್ನೆಲೆ, ಕನ್ನಡ ಸಾಹಿತ್ಯ ಪರಿಷತ್ತಿನ ರಚನೆ ಬಗ್ಗೆ ಮೆಲುಕು ಹಾಕಿದರು. ಕನ್ನಡ ಭಾಷೆಯ ಮೊಟ್ಟ ಮೊದಲ ಶಾಸಕ ಹಲ್ಮಿಡಿ ಶಾಸನದ ಮೂಲದಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವುದು ಕನ್ನಡಕ್ಕೆ ಸಂದ ಗೌರವವಾಗಿದೆ. ಕನ್ನಡಕ್ಕಾಗಿ ಹೋರಾಟ ಮಾಡಿದ ಕನ್ನಡ ಕ್ರಾಂತಿಕಾರರ ಬಗ್ಗೆ ಯಾವ ಮಧ್ಯಮಗಳೂ ವರದಿ ಭಿತ್ತರಿಸದೇ ಇರುವುದು ವಿಷಾದನೀಯ. ಕೇವಲ ತಮ್ಮ ಟಿಆರ್‌ಪಿಗಾಗಿ ಕನ್ನಡ ಚಾನೆಲ್‌ಗಳು ಪೈಪೋಟಿಗೆ ಬಿದ್ದು ವರದಿ ಮಾಡುತ್ತಿವೆ. ಸಮಾಜಕ್ಕೆ, ರಾಜ್ಯಕ್ಕೆ ಅನುಕೂಲವಾಗುವ ವಿಷಯಗಳು ಭಿತ್ತರಿಸುವತ್ತ ಆಲೋಚಿಸಬೇಕೆಂದು ಸಲಹೆ ನೀಡಿದರು.
ಪುರಸಭೆಗೆ ನೂತನವಾಗಿ ಆಯ್ಕೆಯಾಗಿ ಅದ್ಯಕ್ಷ ಗದ್ದೆಮ್ಮ ಭೋವಿ, ಉಪಾದ್ಯಕ್ಷ ಮೊಹ್ಮದ್ ರಫಿಯವರಿಗೆ ಕರವೇ ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕರವೇ ಅದ್ಯಕ್ಷ ಜಿಲಾನಿಪಾಷಾ, ಕಾರ್ಯದರ್ಶಿ ಶಿವರಾಜ ನಾಯಕ್, ಅಜೀಜಪಾಷಾ, ಚಂದ್ರು ನಾಯಕ, ರವಿಕುಮಾರ ಬರಗೂಡಿ, ಎಂ.ಜಿಲಾನಿ, ಅಮರೇಶಸ್ವಾಮಿ, ಅಜ್ಮೀರ್‌ಖಾನ್, ಇರ್ಫಾನ್, ಮಹೆಬೂಬ ಇತರರು ಸೇರಿದಂತೆ ಇದ್ದರು.