‘ನಾಡು-ನುಡಿ ಗೌರವಿಸಿ’-ಪ್ರಕಾಶ್

ಹಟ್ಟಿಚಿನ್ನದಗಣಿ.ನ.೦೨- ಕನ್ನಡ ನಾಡು-ನುಡಿ ಗೌರವಿಸಬೇಕೆಂದು ಹಟ್ಟಿಚಿನ್ನದಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಹೇಳಿದರು.
ಹಟ್ಟಿಚಿನ್ನದಗಣಿ ಕಂಪನಿವತಿಯಿಂದ ಕ್ರೀಡಾ ಸಂಸ್ಥೆ ಮುಂಭಾಗದ ಅಶೋಕ ಡೇವೀಡ್ ವೃತ್ತದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಬುಧುವಾರ ಮಾತನಾಡಿದರು. ಹೋರಾಟಗಾರರ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ನಾಡಿನ ಜನತೆ ಗೌರವಿಸಬೇಕೆಂದರು. ಕಲಿಯೋಕೆ ಕೋಟಿ ಭಾಷೆಯಿದ್ದರೂ ಕೂಡಾ ಕನ್ನಡಾಭೀಮಾನವನ್ನು ಮರೆಯಬಾರದು. ಕನ್ನಡ ಮಾಧ್ಯಮ ಮೂಲಕ ಶಿಕ್ಷಣ ಪಡೆಬೇಕೆಂದರು.
ಗಣಿ ಕಂಪನಿ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಟಿ.ರವಿಕುಮಾರ್, ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎ ವಿಜಯಭಾಸ್ಕರ್, ಉಪನ್ಯಾಸಕ ಡಾ.ನಾಗರಾಜ್ ಹೀರಾ ಮಾತನಾಡಿದರು. ಉಪಪ್ರಧಾನ ವ್ಯವಸ್ಥಾಪಕ ಸೈಫುಲ್ಲಾಖಾನ್, ವ್ಯವಸ್ಥಾಪಕರುಗಳಾದ ಸುರೇಶ್ ಆರ್.ಸಿ, ವಿಶ್ವನಾಥ್, ಜಗನ್ ಮೋಹನ್, ಮುಖ್ಯ ಭದ್ರತಾಧಿಕಾರಿ ಬಾಲಚಂದ್ರ ನರಸನಗಿ, ಏಐಟಿಯುಸಿ ಕಾರ್ಮಿಕ ಸಂಘದ ಚುನಾಯಿತ ಪ್ರತಿನಿಧಿಗಳಾದ ಶಾಂತಪ್ಪ ಆನ್ವರಿ, ತಿಪ್ಪಣ್ಣ, ಚಂದ್ರು, ವೆಂಕೋಬ್ ಮಿಯ್ಯಾಪೂರ್, ಪಾಷಾ, ನಾಗರೆಡ್ಡಿ ಜೇರಬಂಡಿ, ಮೈನುದ್ದೀನ್, ಕ್ರೀಡಾ ಸಂಸ್ಥೆ ಕಾರ್ಯದರ್ಶಿ ನವೀನ್ ಇದ್ದರು. ಅಮರೇಶ್ ತಾಳಿಕೋಟಿ ನಿರ್ವಹಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಧ್ವಜಾರೋಹಣವನ್ನು ಹಿರಿಯ ಮುಖಂಡ ಗುಂಡಪ್ಪಗೌಡ ಪೊಲೀಸ್ ಪಾಟೀಲ್ ನೆರವೇರಿಸಿದರು. ಮುಖಂಡರಾದ ಕೆ.ವಿ ಕಳ್ಳಿಮಠ, ಶ್ರೀನಿವಾಸ, ಜೆ.ನಾರಾಯಣ, ಮೌನೇಶ, ಎನ್ ಸ್ವಾಮಿ ನಾಯಿಕೋಡಿ ಇದ್ದರು.
ಹಟ್ಟಿ ಪ.ಪಂ. ಸೇರಿದಂತೆ ಸುತ್ತಲಿನ ಗ್ರಾಮಗಳಾದ ಗೌಡೂರು, ಗುರುಗುಂಟಾ, ಆನ್ವರಿ, ಗೆಜ್ಜಲಗಟ್ಟಾ, ರೋಡಲಬಂಡಾ, ಪೈದೊಡ್ಡಿ, ಕೋಠಾ ಗ್ರಾ.ಪಂ ವ್ಯಾಪ್ತೀಯ ಗ್ರಾ.ಪಂ ಕಚೇರಿ, ಶಾಲಾ-ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಭುವನೇಶ್ವರಿ ದೇವಿಯ ಪೂಜೆ, ಧ್ವಜಾರೋಹಣ ನೆರವೇರಿತು.