ನಾಡು, ನುಡಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ : ಮಾಗಡಿ

ಶಿರಹಟ್ಟಿ, ನ2- ಕನ್ನಡ ನಾಡು, ನುಡಿ, ಸಂಸ್ಕøತಿ, ಸಾಹಿತ್ಯ ಆಚಾರ ವಿಚಾರಗಳನ್ನು ಮುಂದಿನ ತಲೆ ಮಾರಿಗೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಭಾರತೀಯ ಯೋಧ ರವಿಕುಮಾರ ಮಾಗಡಿ ಹೇಳಿದರು.
ಅವರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಆಯೋಜಿಸಿದ್ದ 65 ನೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಸಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ನಂತರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕಾ ಅಧ್ಯಕ್ಷ ಬಸವರಾಜ ವಡವಿ ಮಾತನಾಡುತ್ತಾ, ಇಂದಿನ ಮಕ್ಕಳಿಗೆ ಕನ್ನಡದ ಮಹತ್ವವನ್ನು ಪ್ರಾಥಮಿಕ ಶಿಕ್ಷಣದಿಂದಲೇ ತಿಳಿಸುವದರಿಂದ ಭಾಷಾ ಉಜ್ವಲತೆಗೆ ಸಹಕಾರಿಯಾಗಲಿದೆ. ಎರಡು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಶ್ರೀಮಂತ ಹಾಗೂ ಸಮೃದ್ಧವಾಗಿದೆ ಎಂದರು.
ಕನ್ನಡಿಗರಿಗೆ ಕೇವಲ ನವಂಬರ್ ತಿಂಗಳಲ್ಲಿ ಭಾಷೆ, ನಾಡು, ನುಡಿಯ ಬಗ್ಗೆ ಅಭಿಮಾನ ಮೂಡದೇ ಪ್ರತಿದಿನವೂ ಕನ್ನಡವನ್ನು ಪ್ರೀತಿಸುವಂತಹ ಗುಣವನ್ನು ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು, ಕನ್ನಡ ಸಾಹಿತ್ಯಲೋಕ ಸಮೃದ್ಧವಾಗಿದೆ. ಕನ್ನಡ ಭಾಷೆ, ನೆಲಕ್ಕೆ ಹೊರ ರಾಜ್ಯದ ಜನರ ಪ್ರಭಾವ, ಕನ್ನಡ ಭಾಷೆಗೆ ಇತರ ಭಾಷೆಯಿಂದ ದಾಳಿ ಮುಂದುವರೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ಸಂಚಾಲಕ ನೂರಅಹ್ಮದ್ ಆದ್ರಹಳ್ಳಿ, ನಗರ ಘಟಕ ಅಧ್ಯಕ್ಷ ದೇವೇಂದ್ರ ಶಿಂಧೆ, ನೂರಅಹ್ಮದ್ ಮುಳಗುಂದ, ಚಿನ್ನು ಮುಳಗುಂದ, ವಿನಾಯಕ ಮ್ಯಾಗೇರಿ, ಶಶಿ ಪೂಜಾರ, ನಾಗಪ್ಪ ಆದಿ, ದೇವೇಂದ್ರ ಕಟ್ಟಿಮನಿ ಸೇರಿದಂತೆ ಅನೇಕ ಕನ್ನಡ ಕಟ್ಟಾಳುಗಳು ಹಾಜರಿದ್ದರು.