ನಾಡು- ನುಡಿ ಅಭಿಯಾನ ಹೆಚ್ಚಿಸಿಕೊಳ್ಳಿ


ಧಾರವಾಡಡಿ.3: :ಕನ್ನಡಿಗರ ಶಕ್ತಿ ಕೇಂದ್ರವಾದಕರ್ನಾಟಕ ವಿದ್ಯಾವರ್ಧಕ ಸಂಘವು ಈ ನಾಡಿನ ಭವ್ಯ ಸಂಸ್ಕøತಿ ಮತ್ತು ಪರಂಪರೆಯ ಸಂವರ್ಧನೆಗಾಗಿ ನಿರಂತರವಾಗಿ 134 ವರ್ಷಗಳಿಂದ ಸಾರ್ಥಕ ಸೇವೆಗೈಯುತ್ತಿರುವುದುಕನ್ನಡಿಗರಾದ ನಮಗೆಲ್ಲಾ ಹೆಮ್ಮೆ ಮತ್ತುಅಭಿಮಾನದ ಸಂಗತಿಯಾಗಿದೆಎಂದುಚಿಂತಕರಾದಡಾ. ಲೋಹಿತ ನಾಯ್ಕರ ಹೇಳಿದರು.
ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ `ಕರ್ನಾಟಕ ಸಂಭ್ರಮ-50′ ನಿಮಿತ್ತ ಹೆಸರಾಯಿತುಕರ್ನಾಟಕ, ಉಸಿರಾಗಲಿ ಕನ್ನಡ’ ಕಾರ್ಯಕ್ರಮ ಮತ್ತು ನಾಡ ಹಬ್ಬದ ತಿಂಗಳ ಕಾರ್ಯಕ್ರಮದ ಸಮಾರೋಪ ಹಾಗೂಜತ್ತತಾಲೂಕಿನ ವಜ್ರವಾಡದಗಡಿಕನ್ನಡ ಶಾಲೆಗೆ ಸಂಘದ ಪರವಾಗಿ ನೆರವು ನೀಡುವಕಾರ್ಯಕ್ರಮದಅತಿಥಿಯಾಗಿ ಮಾತನಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಸುಧೀರ್ಘವಾದಂತಇತಿಹಾಸವಿದ್ದು, ಕನ್ನಡಿಗರ ಹೃದಯದಲ್ಲಿಕನ್ನಡತ್ವದ ಬಗ್ಗೆ ಅಭಿಮಾನ ಹಾಗೂ ಜಾಗೃತಿ ಮೂಡಿಸುತ್ತಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಿಂದಲೇ ನಾಡು-ನುಡಿಕುರಿತುಅಭಿಮಾನವನ್ನ ಹೆಚ್ಚಿಸಿಕೊಳ್ಳಬೇಕು. ಈ ವರ್ಷದ ನಾಡ ಹಬ್ಬದ ತಿಂಗಳ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಸುಮಾರು 25000 ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕರ್ನಾಟಕದ ಭವ್ಯಇತಿಹಾಸ ಸಾರುವ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿದ್ದು ದಾಖಲೆ ನಿರ್ಮಿಸಿದೆ. ಎಲ್ಲ ಕಾರ್ಯಕ್ರಮಗಳ ಹಿಂದೆ ಸಂಘದ ಪದಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಶ್ರಮಅಧಿಕವಾಗಿದೆಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ನಾಡಹಬ್ಬದ ತಿಂಗಳ ಕಾರ್ಯಕ್ರಮವುಎಲ್ಲರ ಮೆಚ್ಚುಗೆಗೆ ಪಾತ್ರವಾದಕಾರ್ಯಕ್ರಮವಾಗಿದೆ.ಯುವಕರಿಗೆ, ಮಕ್ಕಳಿಗೆ ನಮ್ಮ ಸಂಸ್ಕøತಿ ಮತ್ತು ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳು ಮನೋಜ್ಞವಾಗಿ ಮೂಡಿಬಂದವು.ಬರಲಿರುವ ದಿನಗಳಲ್ಲಿ ಇಡೀರಾಜ್ಯಾದ್ಯಂತಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ವೈವಿಧ್ಯಮಯಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಗಳನ್ನು ರೂಪಿಸಲಾಗಿದೆಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಜ್ರವಾಡದಗಡಿಕನ್ನಡ ಶಾಲೆಗೆ ಕ.ವಿ.ವ. ಸಂಘದ ಪರವಾಗಿ ನೆರವು ನೀಡಲಾಯಿತು.ಜನಮೆಚ್ಚುಗೆ ಪಡೆದ ಮೂರು ನಾಟಕಗಳಿಗೆ ಪ್ರಕಾಶ ಮುಳಗುಂದ ನಗದು ಬಹುಮಾನ ನೀಡಿ, ಕಲಾವಿದರನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಡಾ.ಮಹೇಶ ಹೊರಕೇರಿ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ, ಡಾ.ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಪ್ರಕಾಶ ಬಾಳಿಕಾಯಿ, ಎಂ.ಎಂ. ಚಿಕ್ಕಮಠ, ಯು.ಎಸ್. ಕುನ್ನಿಭಾವಿ, ಡಾ. ವಿಶ್ವನಾಥಚಿಂತಾಮಣಿ, ಡಾ.ಶಿವಾನಂದ ಟವಳಿ, ಕೆ.ಜಿ.ದೇವರಮನಿ, ಜಿ.ಬಿ. ಸಜ್ಜನ, ಪುಷ್ಪಾ ಹಿರೇಮಠ, ನಿಂಗಣ್ಣಕುಂಟಿ ಸೇರಿದಂತೆಅನೇಕರಿದ್ದರು.