ನಾಡು ನುಡಿಗಾಗಿ ಯುವ ಕರ್ನಾಟಕ ರಕ್ಷಣಾ ಸೇನೆ ಹೋರಾಟ : ಗುತ್ತೇದಾರ

ಕಾಳಗಿ.ಅ.21: ನಾಡು – ನುಡಿ, ಜಲ – ನೆಲ, ಭಾಷೆ ಸೇರಿದಂತೆ ನಾಡಿನ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ಹೋರಾಟ ಮಾಡುವವರ ಜೊತೆಗೆ ಜನರ ಕಷ್ಟಕ್ಕೆ ಯುವ ಕರ್ನಾಟಕ ರಕ್ಷಣಾ ಸೇನೆಗೆ ಪದಾಧಿಕಾರಿಗಳ ಕಾರ್ಯಕರ್ತರು ಹೋರಾಡಬೇಕೆಂದು ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕ ಅಧ್ಯಕ್ಷ ದತ್ತು ಗುತ್ತೇದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಡು, ನುಡಿ, ಭಾಷೆ, ಕನ್ನಡಿಗರ ಸ್ವಾಭಿಮಾನ, ಸಮಾಜದ ಒಳಿತಿಗಾಗಿ ಯುವ ಕರ್ನಾಟಕ ರಕ್ಷಣಾ ಸೇನೆಗೆ ಸಂಘಟನೆ ಧ್ವನಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ನಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನೂತನ ಪದಾಧಿಕಾರಿಗಳಾಗಿ ಪರಮೇಶ್ವರ ಕಟ್ಟಿಮನಿ (ಗೌರವ ಅಧ್ಯಕ್ಷ ) ಬಾಬು ನಾಟಿಕಾರ (ಉಪಾಧ್ಯಕ್ಷ) ಅನೀಲಕುಮಾರ ಗುತ್ತೇದಾರ (ಕಾರ್ಯದರ್ಶಿ ) ದಿಲೀಪಕುಮಾರ ಅರಣಕಲ್ (ಪ್ರಧಾನ ಕಾರ್ಯದರ್ಶಿ ) ಇಬ್ರಾಹಿಂ ಶಾಹ ( ಸಂಘಟನಾ ಕಾರ್ಯದರ್ಶಿ ) ಕಾಳಶೆಟ್ಟಿ ಬೆಳಗುಂಪಿ ( ಸಂಚಾಲಕ ) ರೇವಣಸಿದ್ಧ ಪೂಜಾರಿ ( ಖಜಾಂಚಿ ) ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅವಿನಾಶ ಗುತ್ತೇದಾರ, ರಾಜು ಜಾಧವ, ಶಫಿ ನಾಗೂರ, ಶಂಕರ ಮಾಹಾವರಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.