ನಾಡು ಕಂಡ ಕಾರ್ಶನಿಕರಲ್ಲಿ ಶಂಕರಾಚಾರ್ಯರು ಪ್ರಮುಖರು: ಸಬನೀಸ


ಅಳ್ನಾವರ,ಮೇ.18: ನಾಡು ಕಂಡ ದಾರ್ಶನಿಕರಲ್ಲಿ ಆದಿ ಶಂಕರಾಚಾರ್ಯರು ಪ್ರಮುಖರಾಗಿದ್ದರು ಎಂದು ಬ್ರಾಹ್ಮಣ ಸಮಾಜದ ಗುರುರಾಜ ಸಬನೀಸ ಹೇಳಿದರು
ಅಳ್ನಾವರದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಶಂಕರಾಚಾರ್ಯರ(ದಾರ್ಶನೀಕರ) ಜಯಂತಿ ಉತ್ಸವದಲ್ಲಿ ಅವರು ಪಾಲ್ಗೊಂಡು ಮಾತನಾಡಿ ಕೃಷ್ಣನ ಸಿದ್ದಾಂತವಾದ ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಸಂಸ್ಕøತಿಯನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರ ತತ್ವ ಸಿದ್ದಾಂತಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದರು.
ಹಿಂದೂ ಧರ್ಮದ ಪ್ರತಿಪಾದಕರಾಗಿದ್ದ ಶಂಕರಾಚಾರ್ಯರು ಧರ್ಮದ ಪ್ರಸಾರಕ್ಕಾಗಿಯೇ ಧ್ಯಾನ ಪೀಠಗಳನ್ನು ಸ್ಥಾಪಿಸಿದರು. ಹಿಂದೂ ಧರ್ಮದ ಪುನರ್À ಸ್ಥಾಪನೆಗೆ ಭುನಾದಿ ಹಾಕಿದ ಶಂಕರಾಚಾರ್ಯರ ಪಾಂಡಿತ್ಯ ಎಲ್ಲರಿಗೂ ಸಿಗುವಂತಾಗಬೇಕೆಂದರು.
ತಹಶೀಲದಾರ ಅಮರೇಶ ಪಮ್ಮಾರ,ಶಿರಸ್ಥೆದಾರ ಎಮ್.ಜಿ.ಪತ್ತಾರ,ಕಂ.ನಿ ಲಕ್ಷ್ಮಣ ಪತ್ತಾರ,ಬಿಜೆಪಿ ಎಸ್‍ಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಪ್ರವೀಣ ಪವಾರ,ರೇಲ್ವೆ ಸಲಹಾ ಸಮೀತಿ ಸದಸ್ಯ ನಾರಾಯಣ ಮೋರೆ, ಬಸವರಾಜ ಕಡಕೋಳ ಅನಂತ ರವಳಪ್ಪನವರ ವಿನಾಯಕ,ಸುನೀಲ ಗುಂಡೋಳಕರ ಮತ್ತಿತರರು ಇದ್ದರು.