ನಾಡುನುಡಿ ಬೆಳಸಿ

ಕೆ.ಆರ್.ಪುರ,ಡಿ.೨೯- ಒತ್ತಡದ ಜೀವನದ ನಡುವೆಯೂ ನಾಡುನುಡಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಯುವಪೀಳಿಗೆ ಮಾಡಬೇಕೆಂದು ಬಿಜೆಪಿ ಮುಖಂಡ ಇಟಾಚಿ ಮಂಜುನಾಥ ಅವರು ತಿಳಿಸಿದರು.
ಕೆ.ಆರ್.ಪುರ ಕ್ಷೇತ್ರದ ಅಂಬೇಡ್ಕರ್ ನಗರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಾಡು ನುಡಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು,ಆನಿಟ್ಟಿನಲ್ಲಿ ಯುವ ಪೀಳಿಗೆ ಮಹತ್ವದ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.
ಅಖಂಡ ಕರ್ನಾಟಕದ ಜೀವನ, ಸಂಸ್ಕೃತಿ, ದೇಶೀಯತೆ, ಸಂಗೀತ, ಕಲೆ, ಸಾಹಿತ್ಯಗಳ ವಿಶಿಷ್ಟ ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ಬೆಳೆಸುವ ಕಾರ್ಯ ಮಾಡಬೇಕಿದೆ ಮನವಿ ಮಾಡಿದರು.
ನಮ್ಮ ಸಂಸ್ಕೃತಿ,ಸಾಹಿತ್ಯ, ಕಲೆ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯ ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನೀಡುವ ಕಾರ್ಯವಾಗಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬೈರತಿ ಚಂದ್ರಣ್ಣ, ಭಕ್ತವತ್ಸಲ,ಇದ್ದರು