ನಾಡು,ನುಡಿ,ಗಡಿ ರಕ್ಷಣೆ ನಿರಂತರ ಹೋರಾಟವಿರಲಿ- ಪ್ರವೀಣ ಶಟ್ಟಿ

ಸಿರವಾರ.ನ.೨೨- ಕನ್ನಡ ಬಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ, ನಾಡು, ನುಡಿ, ಜಲ,ಗಡಿ ರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿದ್ದಾರೆ ಎಂದು ಕರ್ನಾಟಕ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರವೀಣ ಶೆಟ್ಟಿ ಹೇಳಿದರು.
ಪಟ್ಟಣದ ಚುಕ್ಕಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಮ ಉದ್ಘಾಟಿಸಿ ಮಾತನಾಡಿ ಅವರು ಹಿಂದಿನಿಂದಲೂ ಕರ್ನಾಟಕದ ಹಾಗೂ ಭಾಷೆಯ ಮೇಲೆ ಅನೇಕ ಬಾರಿ ದಾಳಿಗಳು ಮಾಡಿದರು ಭಾಷೆ, ಗಡಿಗಳನ್ನು ಕಿತ್ತುಕೊಳಲು ಸಾದ್ಯವಾಗುತ್ತಿಲ. ಕನ್ನಡ ಭಾಷೆಯ ಸರಕಾರದ ಆಡಳಿತದಲ್ಲಿ ಬಳಕೆಯಾಗಬೇಕು, ಕೇಂದ್ರ ಸರಕಾರದ ಹುದ್ದೆಗಳ ನೇಮಕಾತಿಯು ಪರೀಕ್ಷೆಯು ಕನ್ನಡದಲ್ಲಿ ಆಗುವ ಹಾಗೆ ಮಾಡಿಬ ಕನ್ನಡಿಗರು ನೇಮಕಾತಿ ಯಾಗುವಂತೆ ಮಾಡಲಾಗಿದೆ. ಅದು ಇನಷ್ಟು ಚುರುಕಾಗಬೇಕು. ಸಂಘಟನೆಯು ಜಿಲ್ಲೆಯ, ತಾಲೂಕಿನ ಮೂಲಭೂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿ ಎಂದರು. ಉತ್ತರ ಕರ್ನಾಟಕ ವಿಧಾಗದ ಅಧ್ಯಕ್ಷರಾದ ಶರಣು ಬಿ.ಗದ್ದಿಗೆ ಮಾತನಾಡಿ ಕನ್ನಡಕ್ಕೆ ಶಾಸ್ತ್ರಿಯ ಸ್ತಾನಮಾನಕ್ಕಾಗಿ ರೈಲು ಹಳಿಗಳ ಮೇಲೆ ಮಲಗಿ ಹೋರಾಟ ಮಾಡಿದರ ಪೆರಿಣಾಮ ಇಂದು ಶಾಸ್ತ್ರಿಯ ಸ್ಥಾನಮಾನ ಬಂದಿದೆ. ಬಾಷೆ ಉಳಿಯುವಿಕೆ ಹೋರಾಟಗಾರರ ಶ್ರಮ ಅಧಿಕವಾಗಿದೆ. ರಾಯಚೂರು ಜಿಲ್ಲೆಗೆ ಸಿಗಬೇಕಾದ ಸೌಲಭ್ಯ ಒದಗಿಸುವಲ್ಲಿ ಸರಕಾರಗಳು ಅನ್ಯಾಯ ಮಾಡುತ್ತಿವೆ, ಸರಕಾರದ ಕಣ್ಣು ತೆರೆಸಲು ಹೋರಾಟ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಾನಿದ್ಯ ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ನಿಲೋಗಲ್ ಶಾಂಭವಿ ಮಠದ ಶ್ರೀ ರೇಣುಕಾ ಶಾಂತಮಲ್ಲಶಿವಾಚಾರ್ಯರು, ಕಲ್ಲೂರಿನ ಅಡವೀಶ್ವರ ಮಠದ ಶ್ರೀಶಂಭುಲಿಂಗ ಸ್ವಾಮಿಗಳು, ಮಾನಪ್ಪ ನಾಯಕ, ಚುಕ್ಕಿ ಸೂಗಪ್ಪ ಸಾಹುಕಾರ, ಜೆ.ಶರಣಪ್ಪಗೌಡ, ಜಿ.ಲೋಕರೇಡ್ಡಿ,ಶರಣಯ್ಯ ನಾಯಕ ಗುಡದಿನ್ನಿ, ವೀರಭದ್ರಪ್ಪ ಆಲ್ದಾಳ,ಅರಣ್ಯ ವಲಯ ಅಧಿಕಾರಿ ರಾಜೇಶ ನಾಯಕ, ತಹಸೀಲ್ದಾರ ವಿಜಯೇಂದ್ರಹುಲಿನಾಯಕ, ಪ.ಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಸಿಡಿಇಓ ಮುದುಕಪ್ಪ,ಡಾ.ಸುನೀಲ್ ಸರೋದೆ, ಶ್ಯಾಮಸುಂದರ್ ನಾಯಕ, ರೂಪಶ್ರೀನಿವಾಸ ನಾಯಕ, ಅನೀತಾ ಮಂತ್ರಿ, ರೇಣುಕಾ ಎನ್ ,ಡಿ. ವಿಜಯಲಕ್ಷ್ಮೀ, ಜಿಲ್ಲಾದ್ಯಕ್ಷ ಹೆಚ್.ವಿರೇಶ, ತಾಲೂಕು ಅಧ್ಯಕ್ಷ ಕೆ.ರಾಘವೇಂದ್ರ ಖಾಜಾಜನ ಗೌಡ, ಶುಭಾನ ಮಾನ್ವಿ,ವೆಂಕಟೇಶ ಸಕ್ರಿ, ಶಿವರಾಜ ಉಮಳಿಹೊಸೂರು, ಜಾವಿದ ಖಾನ್, ಇನ್ನಿತರು ಇದರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಂಘಟನೆಯಿಂದ ಸನ್ಮಾನಿಸಿದರು. ಇದಕ್ಕೂ ಮೊದಲು ಪಿಡಬ್ಲ್ಯೂಡಿ ಕ್ಯಾಂಪಿನಿಂದ ಮುಖ್ಯರಸ್ತೆ ಮಾರ್ಗವಾಗಿ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.