ನಾಡಿನ ಹಿತ ಕಾಯುವ ಏಕೈಕ ಪಕ್ಷ ಜೆಡಿಎಸ್: ಲಿಂಗಸೂರು ಜೆಡಿಎಸ್ ಅಭ್ಯರ್ಥಿ ‌ಸಿದ್ದು ಬಂಡಿ

ಮುದಗಲ್ಲ : ನಾಡಿನ ಸಮಗ್ರ ಅಭಿವೃದ್ಧಿ, ರೈತರ, ಮಹಿಳೆಯರ, ಯುವಕರ, ಶೋಷಿತರ ಹಿತವನ್ನು ಕಾಪಾಡುವ ಏಕೈಕ ಪಕ್ಷ ಜೆಡಿಎಸ್’ ಎಂದು ಲಿಂಗಸೂರು ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ
ಅಬ್ಬರದ ಪ್ರಚಾರದಲ್ಲಿ ಹೇಳಿದರು.

ನಾನು ನಿಮ್ಮ ಮನೆ ಮಗ ಹೆಚ್ಚಿನ ಬಹುಮತದಿಂದ ಗೆಲ್ಲಿಸಿ ಗ್ರಾಮ ಗ್ರಾಮಗಳಲ್ಲಿ ಒಂದೆಡೆ ನಿರ್ದಿಷ್ಟ ಜಾಗದಲ್ಲಿ ನಿಲ್ಲದೆ, ಗ್ರಾಮದ ಸಮಸ್ಯೆಗಳನ್ನ ಪ್ರತಿಯೊಂದು ಮನೆಯನ್ನ ಸಂಪರ್ಕಿಸಿ ಅವರ ಆಶೀರ್ವಾದ ಪಡೆಯುತ್ತಿದ್ದೇನೆ ಕ್ಷೇತ್ರದ ಅಭಿವೃದ್ಧಿಗೆ ಆಶೀರ್ವದಿ
ಸಬೇಕು ಈ ಬಾರಿ ಗೆದ್ದೇ ಗೆಲ್ತೇನೆ. ಮುದಗಲ್ಲ ಜನ ನನ್ನ ಕೈಬಿಡಲ್ಲ, ಗೆಲ್ಲಿಸ್ತಾರೆ ಅನ್ನೋ ವಿಶ್ವಾಸದ ಮಾತುಗಳನ್ನ ಆಡಿದ್ರು ಮುದಗಲ್ಲ ನ ವಿವಿಧ ವಾಡ೯ಗಳಲ್ಲಿ ಅಬ್ಬರದ ಪ್ರಚಾರ ಮಾಡಿದರು.

ಈ ಸಂದರ್ಭದಲ್ಲಿ ಕುಂಬಾರ ಓಣಿ ಯಲ್ಲಿ ಲಿಂಗಸೂರುನ ಜೆಡಿಎಸ್ ಅಭ್ಯರ್ಥಿ ‌ಸಿದ್ದು ಬಂಡಿ ಅವರಿಗೆ ಮತದಾನರಾದ ಅಮರಪ್ಪ ಕುಂಬಾರ ಪಂಪಣ್ಣ ಕುಂಬಾರ ಹಾಗೂ ಯಂಕಪ್ಪ ಕುಂಬಾರ ಮಹಾಂತೇಶ ಕುಂಬಾರ ಶಾಲು ಹಾರ ಹಾಕಿ ಸಿದ್ದು ಬಂಡಿ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಅಮೀರ್ ಬೇಗ್ ಉಸ್ತಾದ್, ಅನ್ವಾರ ಪಾಶ , ಮಹಾಂತೇಶ ಕುಂಬಾರ ನೂರಾರು ಹಾಗೂ ಕಾಯ೯ಕತ೯ರು ಉಪಸ್ಥಿತರಿದ್ದರು.