ನಾಡಿನ ಶಿಲ್ಪಕಲಾ ಕ್ಷೇತ್ರಕ್ಕೆ ಅಮರಶಿಲ್ಪಿ ಜಕಣಾಚಾರಿಯ ಕೊಡುಗೆ ಅಮರ

ಕಲಬುರಗಿ : ಜ.1:ಅತ್ಯಂತ ಸೂಕ್ಷವಾದ ಶಿಲ್ಪಕಲೆ ನಯನಮನೋಹರವಾಗಿ ಕೆತ್ತನೆ ಕಾರ್ಯ ಮಾಡಿದ ಚಾಲುಕ್ಯ ಮತ್ತು ಹೊಯ್ಸಳ್ ಶೈಲಿಯ ದೇವಾಲಯಗಳು ವಿಶ್ವದ ಪ್ರಸಿದ್ಧಿಯನ್ನು ಪಡೆದಿವೆ. ಈ ಕೆಲಸವನ್ನು ಮಾಡಿದ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲೆಯ ಕೊಡುಗೆ ಅಮರವಾಗಿದೆ. ಜಕಣಾಚಾರಿಯ ಜೀವನ, ಸಾಧನೆ, ಕೊಡುಗೆಯನ್ನು ಇಂದಿನ ವಿದ್ಯಾರ್ಥಿಗಳು, ಯುವಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಷ್ಕøತ ಹಿರಿಯ ಶಿಲ್ಪ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಹೇಳೀದರು.

       ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ 'ವಿಶ್ವಕರ್ಮ ಶಿಲ್ಪಕಲಾ ಕೇಂದ್ರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ ಹಾಗೂ ಶಿಲ್ಪಕಲಾವಿದರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
    ರಾಜ್ಯ ಶಿಲ್ಪಕಲಾ ಅಕಾಡೆಮಿಯ ಮಾಜಿ ಸದಸ್ಯೆ ಗಾಯತ್ರಿ ಎ.ಶಿಲ್ಪಿ ಮಾತನಾಡಿ, ಶಿಲ್ಪಕಲೆ ಸಾಮಾನ್ಯವಾದುದ್ದಲ್ಲ. ಅದಕ್ಕೆ ಶೃದ್ಧೆ, ತಾಳ್ಮೆ, ಪರಿಶ್ರಮ ಬೇಕು. ಸರ್ಕಾರ ಶಿಲ್ಪ ಕಲಾವಿದರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ನಾಡಿನ ಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ದೇವೆಕೆಮ್ಮ ಸಿ.ಶಿಲ್ಪಿ, ಪೂಜಾ ಏಕದಂಡಗಿ, ಪ್ರಾಣೇಶ್ ವಿಶ್ವಕರ್ಮ, ಸಚಿನ್ ಲೋಕ್ರೆ, ಪ್ರವೀಣ ವಿಶ್ವಕರ್ಮ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಜಕಣಾಚಾರಿ ಬಾಲಕ ಅಮರಶಿಲ್ಪಿ ಜಕಣಾಚಾರಿಯ ವೇಷಧರಿಸಿ ಸಂಭ್ರಮಿಸಿದನು.