ನಾಡಿನ ನೆಲ,ಜಲ,ಭಾಷೆ ಅಭಿಮಾನ ಎಲ್ಲರಲ್ಲಿ ಬೆಳೆಸಿಕೊಳ್ಳಿ

ಬೀದರ:ನ.6:ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲುಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಾದ ಶಾಲಾ ಕಾಲೇಜುಗಳಲ್ಲಿ “ಕನ್ನಡದ ಕಂಪು” ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಡಾ: ಗೀತಾ ಈಶ್ವರ ಖಂಡ್ರೆ ಯವರು ಕನ್ನಡ ನಾಡುನುಡಿ ಸಂಸ್ಕ್ರತಿ ತಾಯಿಯ ಹಾಲಿನ ಅಮೃತದಂತೆ ಭಾಷೆ ಉಳಿಸಿ ಬೆಳೆಸಿಕೊಂಡು ಹೊಗೋಣ ನಾಡಿನ ನೆಲ,ಜಲ,ಭಾಷೆ ಅಭಿಮಾನ ಎಲ್ಲರಲ್ಲಿ ಬೆಳೆಸಕೊಳ್ಳಿ ಎಂದು ಕರೆ ನೀಡಿದರು ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ನಾಗಭೂಷಣ ಮಾಮಡಿ ಕನ್ನಡ ಸಾಹಿತ್ಯ ಪರಿಷತ್ತು ಇವರು ಕನ್ನಡ ನಾಡು ನುಡಿ ಸಂಸ್ಕ್ರತಿಗಳಿಂದ ಶ್ರೀಮಂತವಾಗಿದ್ದು, ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇಂತಹ ಭಾಷೆಯಲ್ಲಿ ಜನಿಸಿದ ನಾವು ನಮ್ಮ ತಾಯಿ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು ಎಂದು ನುಡಿದರು. ಗೌರವ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಹಲಮಂಡಗೆ ಇವರು ಕನ್ನಡ ನುಡಿ ಕನ್ನಡಿಗರ ಧಮನಿಗಳಲ್ಲಿ ಕಸ್ತೂರಿಯ ಪರಿಮಳದಂತೆ ಹರಡಬೇಕು . ಕನ್ನಡ ಭಾಷೆ ನಮ್ಮೆಲ್ಲರ ಮನೆಮಾತಾಗಬೇಕು ಎಂದು ಹೇಳಿದರು. ಅತಿಥಿಗಳಾದ ಕನ್ನಡ ನೌಕರರ ಸಂಘದ ಅಧ್ಯಕ್ಷರು ರಾಜಪ್ಪ ಪಾಟೀಲ ಇವರು ಸಹ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಅನೇಕ ವ್ಯಕ್ತಿಗಳು ದೊಡ್ಡ ಹುದ್ದೆಗಳು ಪಡೆದುಕೊಂಡಿರುತ್ತಾರೆ. ಅದೇ ರೀತಿ ನಾವು ಸಹ ಕನ್ನಡದಲ್ಲಿಯೆ ಎನೆಲ್ಲಾ ಸಾಧನೆ ಮಾಡಬಹುದು ಎಂದು ತಿಳಿಸಿದರು. ತಾಲ್ಲುಕಾ ಮಹಿಳಾ ಘಟಕದ ಉಪಾಧ್ಯಕ್ಷರಾದ ಸುನೀತಾ ಮಮ್ಮ ಇವರು ಕನ್ನಡ ನಾಡಿನಲ್ಲಿ ಹುಟ್ಟಿದ ನಾವು ಧನ್ಯರು ಹಾಗಾಗಿ ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸಿ ಎಂದು ಹೇಳಿದರು.

  ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅಂಕುಶ ಢೋಲೆ ಸರ್ ಇವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ನುಡಿದರು ಹಾಗು ಈ ಕಾರ್ಯಕ್ರಮದಲ್ಲಿ ಶ್ರೀ ಕಾಶೀನಾಥ ಲದ್ದೆ ,ಶ್ರೀ ಆಶೋಕ ಬಾವಗೆ ಶ್ರೀಮತಿ ಅನಿತಾ ಪಾಟೀಲ ಶ್ರೀ ದಿಪಕ ಥಮಕೆ ಮತ್ತು ಕಾಲೇಜಿನ ಸಿಬ್ಬಧಿವರ್ಗದವರಾದ ಶ್ರೀ ಸಂಜಿವಕುಮಾರ ಸುರ್ಯವಂಶಿ, ಶ್ರೀ ದೋಂಡಿಬಾ ಭೂಜಂಗೆ, ಶ್ರೀ ಶೇಖ ಸಾಬೇರಮಿಯ್ಯಾ, ಶ್ರೀ ದೀಪಕ ಸಾವರೆ, ಶ್ರೀ ಶರಣಗೌಡ ಪಾಟೀಲ ಶ್ರೀ ರಾಜಶೇಖರ ಸ್ವಾಮಿ, ಶ್ರೀಮತಿ ಅಂಜನಾ ಬೇಲೂರೆ, ಕು. ಸುಮಿತ್ರಾ ಬೀರಾದರ ಶ್ರೀಮತಿ ಅಶ್ವೀನಿ ಸೀತಾ ಶ್ರೀ ಧನರಾಜ ಮೇಂಗಾ ಶ್ರೀ ನಾಗಶೆಟ್ಟಿ ಮುಕ್ತಾ ಭಾಗವಹಿಸಿದರು. ಪ್ರೌಢ ಶಾಲಾ ಸಿಬ್ಬಂಧಿದವರು ಉಪಸ್ಥಿತರಿದ್ದರು. ಶ್ರೀ ಭೀಮರಾವ ಬಿ.ಗಿರಿ ಉಪನ್ಯಾಸಕರು ನಿರುಪಣೆ ಮಾಡಿದರು. ಕುಮಾರಿ ಪ್ರೀತಿ ಮತ್ತು ಸ್ವಾತಿ ಪ್ರಾರ್ಥನೆ, ಕುಮಾರಿ ರಾಧಿಕಾ ಮತ್ತು ಜ್ಯೋತಿ ಸ್ವಾಗತ ಗೀತೆ ಹಾಡಿದರು  ಶ್ರೀ ವಿಜಯಕುಮಾರ ವಾರದ ರವರು ವಂದನಾರ್ಪಣೆ ಮಾಡಿದರು.