ನಾಡಿನ ಕಿರ್ತಿ ಬೆಳಗಿಸುವ ಸಾಧನೆ ನಿಮ್ಮಿಂದ ಹೊರಹೊಮ್ಮಲಿ

ಕಲಬುರ್ಗಿ, ನ,16: ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು, ನಿಮ್ಮ ಭಾವಿ ಬದುಕಿನ ನಿರ್ಮಾಣ ನಿಮ್ಮ ಕೈನಲ್ಲಿದೆ, ಕಠಿಣ ಪರಿಶ್ರಮದ ಮೂಲಕ ನಿರ್ಧಿಷ್ಟ ಗುರು ಸಾಧನೆಗೆ ಮಂದಾಗಿ, ನಿಮ್ಮ ಮೇಲೆ ತಂದೆ-ತಾಯಿ ಶಿಕ್ಷಕರು ಹಾಗೂ ಸಮಾಜ ಅಪಾರವಾದ ಭರವಸೆ ಇಟ್ಟಿದೆ, ನಾಡು ಮೆಚ್ಚುವ ಕೀರ್ತಿ ನಿಮ್ಮಿಂದ ಹೊರಹೊಮ್ಮಲಿ
ಎಂದು ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು. ಜಿಲ್ಲೆಯ ಕಮಲಾಪುರ ತಾಲೂಕಿನ ನಾವದಗಿ (ಬಿ) ಗ್ರಾಮದ ದೇಶಿ ಕೇಂದ್ರ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಂಕಲ್ಪ ಸಮಾವೇಶವಕ್ಕೆ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಉದ್ಘಾಟಿಸಿದರು.

ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಆತ್ಮವಿಶ್ವಾಸ ವೃದ್ಧಿ ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಒಂದು ದಿನದ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಂಕಲ್ಪ ಸಮಾವೇಶವನ್ನು ತಾಲೂಕಿನ ನಾವದಗಿ (ಬಿ) ಗ್ರಾಮದ ಸಾಂಸ್ಕೃತಿಕ ಲೋಕ ದೇಶೀ ಕೇಂದ್ರ ವಸತಿ ಶಾಲಾ ಪ್ರಾಂಗಣದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪುರ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಒಂದು ದಿನದ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಗರ್ಭ ಶ್ರೀಮಂತರ ಮನೆಯಲ್ಲಿ ಜನಿಸಿದರು ಸಹ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕು ಬ್ರಿಟಿಷ್ರ ದೌರ್ಜನ್ಯವನ್ನು ಸಹಿಸಿ ಹೋರಾಡಿದ್ದರು, ತದ ನಂತರ ದೇಶದ ಮೊಟ್ಟ ಮೊದಲ ಪ್ರಧಾನಿಯಾಗಿ ನೇಮಕಗೊಂಡು ಹಲವಾರು ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದಾರೆ, ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಹಿರಿಮೆ ಮೆರೆದಿದ್ದಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜದಲ್ಲಿ ಮಾನವತೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ದೇಶದ ಐಕ್ಯತೆಯನ್ನು ಕಾಪಾಡುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿ ಸಮೂಹ ಪ್ರಾಮಾಣಿಕ ಸೇವೆ ಮಾಡಲು ಸಲ್ಲಿಸಬೇಕು. ಹಾಗೆಯೇ ಸಾಧನೆಯ ಗುರಿಯೊಂದಿಗೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಕಸಾಪ ತಾಲೂಕಾಧ್ಯಕ್ಷ ಸುರೇಶ ಲೇಂಗಟಿ ಪ್ರಾಸ್ತವಿಕವಾಗಿ ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಆತ್ಮವಿಶ್ವಾಸ ವೃದ್ಧಿ ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಜಾಗೃತಿಯನ್ನು ಮೂಡಿಸುವ ಮುಖ್ಯ ಉದ್ದೇಶ ಹೊಂದಿದ್ದು, ವಿದ್ಯಾರ್ಥಿಗಳು ಜೀವನದಲ್ಲಿ ಏನು ಬೇಕಾದರೂ ಸಾಧಿಸುವಂತಹ ವಯಸ್ಸಿರುತ್ತದೆ. ಇಂಥ ಅಮೂಲ್ಯ ವಯಸ್ಸು ಮತ್ತು ಸಮಯವನ್ನು ಸಾಧನೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹ ತುಂಬುವ ಕಾರ್ಯವನ್ನು ತಾಲೂಕು ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.

ಗಮನ ಸೆಳೆದ ಗೋಷ್ಠಿ:

ಕಥೆ-ನೈತಿಕಥೆ ವಿಷಯದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ.ಶರಣಪ್ಪ ಮಾಳಗಿ,
ಆರೋಗ್ಯಕ್ಕೆ ಆಪ್ತ ಸಲಹೆ ನೀಡಿದ ಡಾ.ಅಂಬಾರಾಯ ಕಂಟಿಕರ್ ಅವರು

ಸಂಸ್ಥೆಯ ಮುಖ್ಯಸ್ಥ ಡಾ.ರಾಜೇಂದ್ರ ಯರನಾಳೆ ಅಧ್ಯಕ್ಶತೆ ವಹಿಸಿದರು,

ಎಂಎಲ್ಸಿ ಅಮರನಾಥ ಪಾಟೀಲ, ಕಮಲಾಪುರ ತಹಾಸೀಲ್ದಾರ್ ಸುರೇಶ ವರ್ಮಾ , ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ
ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ವೈಜನಾಥ ತಡಕಲ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಿಟ್ಟೇಸಾಬ್ ಮುಲ್ಲಾ ಮುಖ್ಯ , ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಪೆÇ್ರ.ಯಶವಂತರಾಯ ಅಷ್ಟಗಿ,
ಅನೀಲಕುಮಾರ ಕೋರೆ, ಕಸಾಪ ಚಿಂಚೋಳಿ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ, ವಿಜಯವಾಣಿ ಪ್ರಸಾರಾಂಗ ವಿಭಾಗದ ವ್ಯವಸ್ಥಾಪಕ ಪ್ರದೀಪ ಕುಲಕರ್ಣಿ, ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಅಂಬಾರಾಯ ಜವಳಗಾ, ಬಿಜೆಪಿ ಮುಖಂಡ ಬಾಬುಬಜಾಲಳ್ಳಿ, ಉಪಾಧ್ಯಕ್ಷ ಸಂಜುಕುಮಾರ ನಾಟೀಕಾರ, ಶಿವರಾಜ ಧಟ್ಟಿ ಇತರರು ಇದ್ದರು.
ತದ ನಂತರ ಜರುಗಿದ ಗೋಷ್ಠಿಯಲ್ಲಿ ಬಿಇಓ ವೀರಣ್ಣಾ ಬೊಮ್ಮನಳ್ಳಿ ಅಧ್ಯಕ್ಷತೆಯಲ್ಲಿ ಕಥೆ-ನೈತಿಕಥೆ ಕುರಿತು ಹಿರಿಯ ಸಾಹಿತಿ ಡಾ.ಶರಣಪ್ಪ ಮಾಳಗಿ, ಆರೋಗ್ಯಕ್ಕೆ ಆಪ್ತ ಸಲಹೆ ಕುರಿತು ಡಾ. ಅಂಬಾರಾಯ ಕಂಟಿಕರ್ ಉಪನ್ಯಾಸ ನೀಡುವ ಮೂಲಕ ಸಮಾವೇಶಕ್ಕೆ ಮೆರಗು ನೀಡಿದರು.ಭುವನೇಶ್ವರಿ ಧಟ್ಟಿ ನಿರೂಪಿಸಿದರು, ಶಶಿಕಾಂತ ಜಾಧವ ಸ್ವಾಗತಿಸಿದರು, ಕಸ್ತೂರಿಬಾಯಿ ರಾಜೇಶ್ವರ ಪ್ರಾರ್ಥಿಸಿದರು,
ನಾಗಣ್ಣ ವಿಶ್ವಕರ್ಮ ವಂದಿಸಿದರು.