ನಾಡಿನ ಏಳಿಗೆಗೆ ಶ್ರಮಿಸಿದವರು ಸರ್ ಎಂ ವಿಶ್ವೇಶ್ವರಯ್ಯ

ಸಂಜೆ ವಾಣಿ
ಕೊಟ್ಟೂರು ಸೆ 16 : ನಾಡಿನ ಜನರ ಅವಶ್ಯಕತೆಗಳನ್ನು ಈಡೇರಿಸಲು ಶ್ರಮಿಸಿ ಕಾರ್ಯರೂಪಕ್ಕೆ ತಂದ ಮಹಾನ್ ಇಂಜಿನಿಯರ್  ಸರ್ ಮೋಕ್ಷಗುಂಡಂವಿಶ್ವೇಶ್ವರಯ್ಯ ನವರು ಎಂದು ಸಾರ್ವಜನಿಕ ಗ್ರಂಥಾಲಯದ ಶಾಖಾಧಿಕಾರಿ ಮಲ್ಲಪ್ಪ ಗುಡ್ಲನೂರು ಹೇಳಿದರು.
ಬುಧವಾರ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ 161ನೇ ಜನ್ಮದಿನವನ್ನು ಇಂಜಿನಿಯರ್ ದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು. ಸರ್ ಎಂ ವಿಶ್ವೇಶ್ವರಯ್ಯರ ಅಗಾಧವಾದ ಜ್ಞಾನ ಬುದ್ಧಿವಂತಿಕೆಯಿಂದ ಕನ್ನಂಬಾಡಿ ಆಣೆಕಟ್ಟನ್ನು ನಿರ್ಮಿಸಿದ್ದಾರೆ ಇಂದಿನ ಯುವಕರು ಅವರ ಜೀವನ ಸಾಧನೆ ಮತ್ತು ಧೀಮಂತ ಜ್ಞಾನವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಹಿರಿಯ ಫಾರ್ಮ ಸಿಸ್ಟೆ ಅಧಿಕಾರಿ ಬಚೇನಹಳ್ಳಿ ಈಶಪ್ಪ, ಗ್ರಂಥಾಲಯ ಸದಸ್ಯರಾದ ಕೆ ರಮಾನಂದ, ಎ.ವಿರೂಪಾಕ್ಷಕಿ, ಎಸ್ ಕೆ ಗಿರೀಶ್ ಮುಂತಾದವರು ಇದ್ದರು.