ನಾಡಿನೆಲ್ಲೆಡೆ ಕೊರೊನಾ ಹೆಚ್ಚಳ; ತಾಯಿ ಚಾಮುಂಡಿಗೆ ಯದುವೀರ್ ಪ್ರಾರ್ಥನೆ

ಮೈಸೂರು, ಏ.೨೮: ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರ ಸಂಕಷ್ಟಗಳನ್ನು ಪರಿಹರಿಸುವಂತೆ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಮೈಸೂರು ರಾಜವಂಶಸ್ಥ ಯದುವೀರ್ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಜವಂಶಸ್ಥ ಯದುವೀರ್, ದೇಶದಲ್ಲಿ ಕಠಿಣ ಸಂದರ್ಭ ಎದುರಾಗಿದೆ. ನಮ್ಮ ಪ್ರಾರ್ಥನೆ ಎಲ್ಲರೊಂದಿಗೂ ಇರುತ್ತದೆ ಸಂಕಷ್ಟಗಳನ್ನು ತಾಯಿ ಚಾಮುಂಡೇಶ್ವರಿ ಪರಿಹರಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಇದೇ ವೇಳೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಯದುವೀರ್ ಧನ್ಯವಾದ ಅರ್ಪಿಸಿದ್ದಾರೆ.