ನಾಡಿನಲ್ಲಿ ಎಲ್ಲೂ ಇಲ್ಲದ ಐತಿಹಾಸಿಕ ಪರಂಪರೆ ದಾವಣಗೆರೆಗೆ ಇದೆ

ದಾವಣಗೆರೆ.ಮಾ.21; ಮಕ್ಕಳು ಕೇವಲ ಪಠ್ಯಪುಸ್ತಕ, ಪರೀಕ್ಷೆ, ಅಂಕಪಟ್ಟಿ ಪದವಿಗಳಿಗೆ ಸೀಮಿತವಾಗದೇ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮ ಕಾಳಜಿಯ ಸಾಮಾನ್ಯ ಜ್ಞಾನ ರೂಢಿಸಿಕೊಂಡರೆ ವಿದ್ಯಾರ್ಚನೆಗೆ ಪರಿಪೂರ್ಣತೆ ಬರುತ್ತದೆ ಮಕ್ಕಳ ಮುಂದಿನ ಭವ್ಯ ದಿವ್ಯ ಸಾಧನೆಗಳಿಗೆ ಇಂತಹ ಬೇಸಿಗೆ ಶಿಬಿರಗಳು ಪೂರಕವಾಗುತ್ತದೆ ಮತ್ತು ಅವರ ಜ್ಞಾನಶಕ್ತಿ ಹೆಚ್ಚುತ್ತದೆ. ನಮ್ಮ ನಾಡಿನಲ್ಲಿ ಎಲ್ಲೂ ಇಲ್ಲದ ಐತಿಹಾಸಿಕ ಪರಂಪರೆಯ ಇತಿಹಾಸಗಳು ದಾವಣಗೆರೆಗೆ ಇದೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದವರೆಲ್ಲರು ಪುಣ್ಯವಂತರು ದಾನಿಗಳ, ದೇವನಗರಿಯ ಈ ದಾವಣಗೆರೆಗೆ ಬಸವ ಜಯಂತಿ ಸೇರಿದಂತೆ ಅನೇಕ ಇತಿಹಾಸಕ್ಕೆ ನಾಂದಿ ಹಾಡಿದ ದಾಖಲೆಗಳು ಇವೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಅಂತರಾಳದ ಭಾವನೆ ವ್ಯಕ್ತಪಡಿಸಿದರು.ದಾವಣಗೆರೆಯ ಪಿ.ಜೆ.ಬಡಾವಣೆಯ ಧ.ರಾ.ಮ. ಸ್ಕೌಟ್ ಭವನದ ಹೊರಾಂಗಣದಲ್ಲಿ ನಿನ್ನೆ ದಿನ ನೇತಾಜಿ ಸ್ಕೌಟ್ ಗ್ರೂಪ್ ಮತ್ತು ಚೇತನ ಗೈಡ್ ಗ್ರೂಪ್ ಸಂಯುಕ್ತಾಶ್ರಯದಲ್ಲಿ ಮಕ್ಕಳಿಗೆ “ವಸಂತ ಬೇಸಿಗೆ ಶಿಬಿರ” ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ದಾವಣಗೆರೆ ಇತಿಹಾಸದ ಕುರಿತು ಉಪನ್ಯಾನ ನೀಡಿದರು.ಶಿಬಿರಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸರಳ ಸಮಾರಂಭಕ್ಕೆ ಬಿ.ವಿ.ಸೌಮ್ಯ ಸ್ವಾಗತಿಸಿದರು. ಪೋಷಕರ ಸಮಿತಿ ಅಧ್ಯಕ್ಷರಾದ ಎ.ಕೆ.ಶಿವಮೂರ್ತಿ, ಪಿ.ಎನ್.ರೇಖಾ ಶಿಬಿರದ ಮಾರ್ಗದರ್ಶಕರಾದ ಶಿವಬಸಮ್ಮ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತಿರಿದ್ದರು. ಸುಮಾರು ಐವತ್ತಕ್ಕೂ ಹೆಚ್ಚು ಮಕ್ಕಳು ಶಾಂತ ಚಿತ್ತತೆಯಿಂದ ಶಿಬಿರಾರ್ಥಿಗಳಾಗಿ ಶಿಸ್ತಿನಿಂದ ಅಚ್ಚುಕಟ್ಟಾಗಿ ಭಾಗವಹಿಸಿದರು ದಿವ್ಯಶ್ರೀ ಎಸ್.ಶೆಟ್ಟರ್, ಪ್ರಾಸ್ತಾವನೆಯಾಗಿ ಮಾತನಾಡಿ 10 ದಿನಗಳ ನಡೆಯಲಿರುವ ಈ ಶಿಬಿರ ಕುರಿತು ವಿವರಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ತೇಜಸ್ವಿನಿ ಹೆಚ್. ಸುರ್ವೆ ವಂದಿಸಿದರು.