ನಾಡಿದ್ದು 42 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ: ಕುಮಾರಸ್ವಾಮಿ


ಬಳ್ಳಾರಿ: ಜೆಡಿಎಸ್ ಪಕ್ಷದ ಎರಡನೇ ಪಟ್ಟಿ ನಾಡಿದ್ದು ಎ 12 ರಂದು ಘೋಷಣೆ ಮಾಡಲಿದೆಂದು ಜೆಡಿಎಸ್ ನಾಯಕ, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಇಂದು ಬಳ್ಳಾರಿಯಲ್ಲಿ ಪಂಚರತ್ನ ಯಾತ್ರೆ ಮುಗಿದ ನಂತರ ಮಾಧ್ಯಮಗಳಿಗೆ ಇ ವಿಷಯ ತಿಳಿಸಿದರು.

ಮೊದಲ ಪಟ್ಟಿಯಲ್ಲಿ 93 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿತ್ತು. ಈಗ ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದೆಂದು ಹೇಳಿದರು.

ಶಕುನಿಗಳ ಕಾಟ ಹಾಸನದಲ್ಲಿದೆ ಅದಕ್ಕಾಗಿ ಅದಕ್ಕೆ ಸದ್ಯ ಟಿಕೆಟ್ ಘೋಷಣೆ ಆಗುತ್ತಿಲ್ಲ ಎಂದು ಹೇಳಿದರು.