ನಾಡಿದ್ದು ಹಂಪಿ ವಿವಿಯಲ್ಲಿ “ಕನ್ನಡ ನಾಡು-ನುಡಿ” ವಿಶೇಷ ಉಪನ್ಯಾಸ

ಬಳ್ಳಾರಿ, ಅ.30: ಹಂಪಿ ಕನ್ನಡ ವಿಶ್ವವಿದ್ಯಾಲಯದ ಒನಕೆ ಓಬವ್ವ ಅಧ್ಯಯನ ಪೀಠದಿಂದ ಕನ್ನಡ ರಾಜ್ಯೋತ್ಸವದ ಹಿನ್ನಲೆ ನ.01ರಂದು ಬೆಳಗ್ಗೆ 11ಕ್ಕೆ ಹಂಪಿಯ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ “ಕನ್ನಡ ನಾಡು-ನುಡಿ” ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಪಕರಾದ ಡಾ.ಸಿ.ಮಹದೇವ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಉಪಕುಲಪತಿಗಳಾದ ಡಾ.ಎ.ವೆಂಕಟೇಶ್ ಅವರು ಸ್ವಾಗತಿಸಲಿದ್ದಾರೆ. ಒನಕೆ ಓಬವ್ವ ಅಧ್ಯಾಯನ ಪೀಠದ ಸಂಚಾಲಕರಾದ ಡಾ.ಎ.ಶ್ರೀಧರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.