ನಾಡಿದ್ದು ಹಂಪಿಯಲ್ಲಿ ಕೇದಾರನಾಥ್ ಪೂಜೆಗೆ ಬಿಜೆಪಿ ಸಿದ್ದತೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.03: ಮೋದಿ ಏಳಿದ್ದಷ್ಟೇ ಸತ್ಯ ಉಳಿದಿದ್ದೆಲ್ಲ ಮಿಥ್ಯ ಎಂಬಂತಿದೆ ಈ ಬಿಜೆಪಿ ಸರ್ಕಾರಕ್ಕೆ.ಐತಿಹಾಸಿಕ ಹಂಪಿಯಲ್ಲಿ ಕಳೆದ ಮೂರು ದಶಕಗಳಿಂದ ಬಹುತೇಕ ನ 3 ರಿಂದ ಹಂಪಿ ಉತ್ಸವವನ್ನು ಆಚರಿಸುತ್ತಾ ಬಂದಿದೆ. ಆದರೆ ಅದನ್ನು ಮರೆತಿರುವ ಇವರು ಈಗ ಹಂಪಿಯಲ್ಲಿ ಈ ವರ್ಷ ನ 5 ರಂದು ಹೊಸದಾಗಿ  ಕೇದಾರನಾಥ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಈ ಸಂಭಂದ ನಿನ್ನೆ  ಕಮಲಾಪುರದ ರೈತ ಭವನದಲ್ಲಿ ಕೇದಾರನಾಥ್ ಪೂಜಾ ಕಾರ್ಯಕ್ರಮದ  ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಚಿವ  ಆನಂದ್ ಸಿಂಗ್ , ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಡಾಕ್ಟರ್ ರಮೇಶ್ ನಾಯಕ, ಚಂದ್ರಶೇಖರ್ ಪಾಟೀಲ್, ಅಶೋಕ್ ಜೀರೆ, ಕವಿತಾ ಸಿಂಗ್, ಬಸವರಾಜ್ ನಾಲತವಾಡ, ಶಂಕರ್ ಮೇಟಿ, ವಿರುಪಾಕ್ಷಿ ವಿ. ಹಂಪಿ, ಪ್ರಶಾಂತ್ ಕಡ್ಡಿರಾಂಪುರ, ಎಲ್ಲಮ್ಮ ಶಕ್ತಿಕೇಂದ್ರದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಕಮಲಾಪುರದ ಸಾರ್ವಜನಿಕರು, ಬಿಜೆಪಿ ಪಕ್ಷದ ಹಿರಿಯ ಮುಖಂಡರು ಭಾಗವಹಿಸಿ ಈ ಪೂಜಾ ಕಾರ್ಯಕ್ರಮ ಜನರ ಗಮನ ಸೆಳೆಯುವಂತೆ ಯಶಸ್ವಿಗೊಳಿಸಬೇಕೆಂದು ಸಮಾಲೋಚನೆ ನಡೆಸಿದರು.
ಸಚಿವ ಆನಂದ್ ಸಿಂಗ್ ಅವರು ನರೇಂದ್ರ ಮೋದಿ ಅವರು ನಮ್ಮ ದೇಶದ ಕಲೆ-ಸಂಸ್ಕೃತಿ ಭವ್ಯ ಪರಂಪರೆಯನ್ನು ಹೆಚ್ಚಿಸುವ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಅದರಂತೆ ಅಧ್ಯಾತ್ಮಿಕ ಹಾಗೂ  ಶಕ್ತಿ ಕೇಂದ್ರವಾದ ಕೇದಾರನಾಥದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದು ತಿಳಿಸಿದರು, ಜೊತೆಗೆ ನಾವೆಲ್ಲರೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸಭೆಗೂ ಮುನ್ನ ಕಾರ್ಯಕ್ರಮ ನಡೆಯುವ ಸ್ಥಳವನ್ನು ಪರಿಶೀಲಿಸಿದರು, ವಿರೂಪಾಕ್ಷೇಶ್ವರ ದೇವಸ್ಥಾನದ  ರಾಜಗೋಪುರ ಮುಂಭಾಗದಲ್ಲಿ ಕಾರ್ಯಕ್ರಮ ನಡೆದಲು ಆಯ್ಕೆ ಮಾಡಲಾಯಿತು. ಅಂದು  ಬೆಳಿಗ್ಗೆ 8 ಕ್ಕೆ  ಪಂಪಾ ವಿರೂಪಾಕ್ಷೇಶ್ವರನ ಅಭಿಷೇಕ ನಂತರ ಕೇದಾರನಾಥ್ ಬಗ್ಗೆ ಮಹತ್ವವನ್ನು ತಿಳಿಸಿಕೊಡಲು ವಿದ್ಯಾರಣ್ಯ ಮಹಾಸ್ವಾಮಿಗಳು, ಮತ್ತು ಸಚಿವರು   ಮಾತನಾಡಲಿದ್ದಾರೆ.
ಇದೇ ವೇಳೆ ಅಂದು ಪ್ರಧಾನಿ  ನರೇಂದ್ರ ಮೋದಿ ಅವರು ಕೇದಾರ್ ನಾಥ್ ದೇವಸ್ಥಾನದಲ್ಲಿ  ಪೂಜೆ ಮಾಡುವುದನ್ನು ನೇರ ಪ್ರಸಾರದ ಮುಖಾಂತರ ಜನರು ವೀಕ್ಷಿಸಲು ಎಲ್ ಈ ಡಿ ವ್ಯವಸ್ಥೆ  ಮಾಡುತ್ತಿದೆ.