ನಾಡಿದ್ದು ಶಾಲೆ ಪ್ರಾರಂಭ ಮಕ್ಕಳನ್ನು ಹಬ್ಬಕ್ಕೆ ಸ್ವಾಗತಿಸಿದಂತೆ ಸ್ವಾಗತಿಸಿ


ಸಂಜೆವಾಣಿ ವಾರ್ತೆ
ಸಂಡೂರು:ಮೇ: 27: ಪ್ರತಿಯೊಂದು ಶಾಲೆಯಲ್ಲಿ ಕಡ್ಡಾಯವಾಗಿ ಎಲ್ಲಾ ಶಾಲೆಗಳ ಪರಿಸರವನ್ನು ಸ್ವಚ್ಚವಾಗಿಡುವುದರ ಜೊತೆಗೆ ಪ್ರತಿಯೊಂದು ಮಗುವು ಹಬ್ಬಕ್ಕೆ ಬಂದ ರೀತಿಯಲ್ಲಿ ಸ್ವಾಗತಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವುರ್ ತಿಳಿಸಿದರು.
ಅವರು ಇಂದು ಪಟ್ಟಣದ ಕ್ಷೇಥ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎ.ಪಿ.ಎಂ.ಸಿ. ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕಿನ ಸರ್ಕಾರಿ ಅನುದಾನಿತ/ಅನುದಾರಹಿತ ಪ್ರಾಥಮಿಕ & ಪ್ರೌಢಶಾಲೆಗಳ ಮುಖೋಪಾಧ್ಯಾಯರ 2023-24ರ ಶೈಕ್ಷಣಿಕ ವರ್ಷಾರಂಭದ ಪೂರ್ವಸಿದ್ದತಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶೈಕ್ಷಣಿಕ ವರ್ಷ ದಿ:29.05.2023 ರಿಂದ ಪ್ರಾರಂಭವಾಗುತ್ತಿದ್ದು ದಿ:31.05.2023 ರಿಂದ ಶಾಲಾ ಪ್ರಾರಂಭೊತ್ಸವ ಇರುವುದರಿಂದ ತಾಲೂಕಿನ ಎಲ್ಲಾ ಶಾಲೆಗಳ ಪರಿಸರವನ್ನು ಸ್ವಚ್ಛವಾಗಿ ಮತ್ತು ತಳಿರು ತೋರಣಗಳಿಂದ ಸಿಂಗರಿಸಿ ಪ್ರತಿ ಮಗುವಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿ ಸಿಹಿ ಊಟದೊಂದಿಗೆ ಸಂತಸ ಸಂಭ್ರಮದಿಂದ ಶಾಲೆಗಳನ್ನು ಆರಂಭಿಸ ಬೇಕು ಎಂದು ಕರೆನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಅನುಷ್ಠಾನಾಧಿಕಾರಿಗಳು ಪ್ರಸಕ್ತ ಸಾಲಿನಲ್ಲಿ ಅಳವಡಿಸಿಕೊಳ್ಳಬೇಕಾದ ಕ್ರಿಯಾಯೋಜನೆಯನ್ನು ಶೈಕ್ಷಣಿಕ ಮಾರ್ಗದರ್ಶಿಯನ್ವಯ ಕಾರ್ಯ ಪ್ರವೃತ್ತರಾಗಲು ತಿಳಿಸಿದರು. ಪ್ರಸಕ್ತಸಾಲಿನಲ್ಲಿ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಾಂತ್ಯದಲ್ಲಿ ರಾಜ್ಯಮಟ್ಟದ ಏಕರೂಪದ ಮೌಲ್ಯಾಂಕನ ವ್ಯವಸ್ಥೆ ಇರುವುದನ್ನು ಸ್ಪಷ್ಟಪಡಿಡಿದರು. ಅಕ್ಷರದಾಸೋಹಯೋಜನೆಯ ಸಮರ್ಪಕ ಅನುದಾನದ ಕುರಿತು ಸಮಗ್ರ ಮಾಹಿತಿಯನ್ನು ನೀಡಲಾಯಿತು. ಅಲ್ಲದೆ. ಶಾಲಾಹಂತದಲ್ಲಿ ಅನ್ವಯಿಸ ಬೇಕಾಗಿರುವ ಪಠ್ಯ ಕ್ರಮ ಪಾಠ ಬೋಧನೆ,ಮೌಲ್ಯಮಾಪನ ಹಾಗೂ ಶಾಲೆಗಳಲ್ಲಿ ನಿರ್ವಹಿಸಬೇಕಾಗಿರುವ ಸಮಗ್ರ ದಾಖಲೆಗಳ ನಿರ್ವಹಣೆ ಕುರಿತು ತಿಳಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರಾದ ವೀರೇಶಪ್ಪ ಇವರು ಮುಖ್ಯಗುರುಗಳ ಆಡಳಿತ ವೈಖರಿಯ ಕುರಿತುಮಾಹಿತಿ ನೀಡಿದರು.ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶರಣಬಸಪ್ಪಕರಿಶೆಟ್ಟಿ ಕ್ಷೇತ್ರಸಮನ್ವಯಾಧಿಕಾರಿಗಳು ಶೈಕ್ಷಣಿಕಮಾರ್ಗದರ್ಶಿಯ ಅನುಪಾಲನೆ ಮತ್ತು ಮೌಲ್ಯಾಂಕನ ಕುರಿತಾಗಿ ಕ್ರಿಯಾಯೋಜನೆ ರೂಪಿಸಿಕೊಂಡು ಕಾರ್ಯಪ್ರವೃತ್ತರಾಗಲು ತಿಳಿಸಿದರು.
ಇಲಾಖೆ ನೀಡುವ ಎಲ್ಲಾ ಉತ್ತೇಜನಕಾರಿ ಅಂಶಗಳನ್ನುತ್ವರಿತ್ವವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವತ್ತ ಪರಿಣಾಮಕಾರಿ ಕಲಿಕೆಯ ಅನುಷ್ಠಾನಕ್ಕೆ ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸಭೆಯಲ್ಲಿ ಶ್ರೀಧರರ್ಮೂರ್ತಿ, ಷಣ್ಮುಖಪ್ಪ ಮತ್ತು ತಾಲೂಕಿನ ಎಲ್ಲಾ ಬಿಆರ್.ಪಿ., ಸಿ.ಅರ್.ಪಿ.ಗಳು ಎಲ್ಲಾಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಗುರುಗಳು ಉಪಸ್ಥಿತರಿದ್ದರು. ರಮೇಶ್. ಸಿ.ಅರ್.ಪಿ. ಸ್ವಾಗತಿಸಿದರು, ಬಸವರಾಜ ಇ.ಸಿ.ಓ ಮತ್ತು ರುದ್ರಯ್ಯ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.