ನಾಡಿದ್ದು ಮೇಯರ್ ಚುನಾವಣೆ ಆಯ್ಕೆಯಲ್ಲಿ ಮೂಡದ ಒಮ್ಮತ ಮುಂದೂಡುವ ಪ್ರಯತ್ನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26: ಇಲ್ಲಿನ ಮಹಾ ನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮತ್ತು ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು 45 ಗಂಟೆ ಬಾಕಿ ಇದ್ದರೂ, ಬಹುಮತ ಹೊಂದಿರುವ ಕಾಂಗ್ರೆಸ್ ನಲ್ಲಿ ಮೇಯರ್ ಯಾರು ಆಗಬೇಕು ಎಂಬ ಬಗ್ಗೆ ಸಭೆ ಕರೆದು ಚರ್ಚೇಯೇ ನಡೆಯದಿರುವುದು, ಬಹುಶಃ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಾದೇಶಿಕ ಆಯುಕ್ತರು ಮಾ 28 ರಂದು ಚುನಾವಣೆ ನಡೆಸಲು ಸದಸ್ಯರಿಗೆ ನೊಟೀಸ್  ಜಾರಿ ಮಾಡಿದ್ದಾರೆ. ನೋಟೀಸ್ ಪಡೆದ ಮೇಯರ್ ಆಕಾಂಕ್ಷಿಗಳು ಮಾತ್ರ ಚುನಾವಣೆ ನಡೆಯುತ್ತಾ ಎಂಬ ಆತಂಕದಲ್ಲಿದ್ದಾರೆ‌ ಕಾರಣ ಈ ವರೆಗೆ ಪಕ್ಷದ ವರಿಷ್ಟರು ಸಭೆ ಕರೆದು ಚರ್ಚಿಸದೇ ಇರುವುದು.
ಮೇಯರ್ ಸ್ಥಾನಕ್ಕೆ ಮುಲ್ಲಂಗಿ ನಂದೀಶ್, ಪಿ.ಗಾದೆಪ್ಪ ಮತ್ತು ಮುಂಡ್ಲೂರು ಪ್ರಭಂಜನ್ ಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಎಲ್ಲರೂ ಹಲವು  ಸದಸ್ಯರ ಮನೆಗಳಿಗೆ ತೆರಳಿ ಸಲ್ಲಿಸುವುದನ್ನು ಸಲ್ಲಿಸಿ ಬೆಂಬಲಿಸುವಂತೆ ಮನವಿ ಮಾಡಿದ್ದಾರಂತೆ.
ಅಷ್ಟೇ ಅಲ್ಲದೇ ಪಕ್ಷದ ವರಿಷ್ಟರನ್ನೂ ಕಂಡು ಬಂದಿದ್ದಾರಂತೆ. ಸಧ್ಯ ಎಂಪಿ ಚುನಾವಣೆ ಹಿನ್ನಲೆಯಲ್ಲಿ ಈಗ ಮೇಯರ್ ಚುನಾವಣೆ ನಡೆದರೆ. ಮೇಯರ್ ಆಗಬೇಕೆಂದು ಬಯಸಿದ ಇತರರ ಅಸಮಾಧಾನ ಎಂಪಿ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ಮುಂದೂಡಬೇಕೆಂಬ ಸಲಹೆ ನಗರದಿಂದಲೇ ಹೋಗಿದೆಯಂತೆ.
ಇಂದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರು ಮುಖ್ಯ ಂಮತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ. ಮುಂದೂಡಿಸಲು ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿಸುವ ಪ್ರಯತ್ನದಲ್ಲಿದ್ದಾರಂತೆ.
ಎಂ ಪಿ. ಚುನಾವಣೆಯ ಮತದಾನದ ಮೇ. 7 ನಂತರ ಮೇಯರ್ ಚುನಾವಣೆ ನಡೆಸಲು ಸೂಚನೆ ನೀಡಬೇಕೆಂಬುದಾಗಿದೆಯಂತೆ.
ಒಂದೊಮ್ಮೆ ಸಧ್ಯ ದಿನಾಂಕ ಪ್ರಕಟವಾಗಿರುವ ನಾಡಿದ್ದರ ಚುನಾವಣೆ ಮುಂದೂಡಲು ಪ್ರಾದೇಶಿಕ ಅಸಯುಕ್ತರು ಮುಂದಾಗದಿದ್ದರೆ. ಚುನಾವಣೆಗೆ ಸದಸ್ಯರೇ ಹೋಗದಂತೆ ತಡೆದು, ಕೋರಂ ಕೊರತೆಯಿಂದ ಚುನಾವಣೆ ಮುಂದೂಡಿಸುವ ಪ್ರಯತ್ನವೂ ಇದೆಯಂತೆ‌
ಒಟ್ಟಾರೆ ಏನಾಗುತ್ತದೆಂಬುದು ನಾಳೆ ಸಂಜೆಗೆ ಸ್ಪಷ್ಟವಾಗಿ ತಿಳಿಯಲಿದೆ.
ಸಾಮಾಜಿಕ ನ್ಯಾಯದಡಿ ಹಿರಿಯನಾದ ನನಗೆ ಅವಕಾಶ ನೀಡಿ ಸಮುದಾಯಕ್ಕೂ ನ್ಯಾಯ ಒದಗಿಸಿಕೊಡಿ
ಪಿ. ಗಾದೆಪ್ಪ

ಪ್ರಬಲ ಅಭ್ಯರ್ಥಿವಿರುದ್ದ ಹಲವು ಸಂಕಷ್ಟಗಳನ್ನು ಎದುರಿಸಿ ಗೆದ್ದಿರುವ ನನಗೆ ಮೊದಲ ಬಾರಿಗೆ ಮೇಯರ್ ಆಗಲು ಅವಕಾಶವಿತ್ತು. ಅಂದು ಬಿಜೆಪಿ ಸರ್ಕಾರದ ಕುತಂತ್ರದಿಂದ ಮೀಸಲಾತಿ ಬದಲಾಗುವವರೆಗೆ ಚುನಾವಣೆ ನಡಸಲಿಲ್ಲ. ಆಗ ವಾಗ್ದಾನ ನೀಡಿದ್ದ ಹಿರಿಯರು ಈಗ ಅವಕಾಶ ಬಂದಿದೆ ಮೇಯರ್ ಸ್ಥಾನ‌ನೀಡಬೇಕು.
 ಮುಲ್ಲಂಗಿ ನಂದೀಶ್

ಪಕ್ಷ ನನಗೆ ಟಿಕೆಟ್ ನೀಡದಿದ್ದರೂ ಜನ ಬಯಸಿದಂತೆ ಪಕ್ಷೇತರನಾಗಿ ಆಯ್ಕೆಯಾಗಿ. ಪಕ್ಷದ ಬೆಂಬಲಕ್ಕೆ ನಿಂತಿರುವೆ. ಸದಸ್ಯರು ಬಯಸಿರುವಂತೆ ನನಗೆ ಮೇಯರ್ ಅವಕಾಶ ನೀಡಿ.
ಎಂ.ಪ್ರಭಂಜನ್ ಕುಮಾರ್.