ನಾ‌ಡಿದ್ದು ನಗರದಲ್ಲಿಮೋದಿಯಿಂದ ಬಿಜೆಪಿಯ ಬೃಹತ್ ಬಹಿರಂಗ ಸಭೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.03: ನಗರಕ್ಕೆ ಮೇ 5 ರಂದು  ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚುನಾವಣಾ ಪ್ರಚಾರದ ಬಹಿರಂಗ ಸಭೆ ನಡೆಯಲಿದೆಂದು ಪಕ್ಷದ ರಾಷ್ಟ್ರೀಯ ಮುಖಂಡ
ಲಕ್ಷ್ಮಣ ಹೇಳಿದ್ದಾರೆ.
ಅವರು ಇಂದು ಬಹುರಂಗ ಸಭೆ ನಡೆಯುವ ಕಪ್ಪಗಲ್ಲು ರಸ್ತೆಯ ಮೈದಾನದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು.
ಮೋದಿ ಅವರು ರಾಜ್ಯದಲ್ಲಿ ಪ್ರಚಾರ ಆರಂಭಿಸಿದ ನಂತರ ರಾಜ್ಯದಲ್ಲಿ ಬಿಜೆಪಿ ಗೆಲುವಿನ ಅಂಶ ಮತ್ತಷ್ಟು ಹೆಚ್ಚಾಗಿದೆ. ಇದರಿಂದ ಭಯಬೀತರಾಗಿರುವ ಕಾಂಗ್ರೆಸ್ ಮುಖಂಡರು ವಯಕ್ತಿಕವಾಗಿ ಮೋದಿ ಅವ್ ಮೇಲೆ ಹೀಯಾಳಿಸಿ ಮಾತನಾಡುತ್ತಿದ್ದಾರೆಂದರು.
ಬಿಜೆಪಿಯ ಉತ್ತಮ ಆಡಳಿತ, ಮೀಸಲಾತಿ ಹೆಚ್ಚಳ ಮೊದಲಾದವುಗಳ  ಬಗ್ಗೆ ಸಹಿಸಿಕೊಳ್ಳುದ ಕಾಂಗ್ರೆಸ್ ಗ್ಯಾರೆಂಟಿ ಸ್ಕೀಂ ತರುವುದಾಗಿ  ಹೇಳುತ್ತಿದೆ ಎಂದರು
ಚುನಾವಣೆ ಪ್ರಣಾಳಿಕೆಯಲ್ಲಿ ಆಹಾರ, ಅಕ್ಷರ ಸೇರಿದಂತೆ ಆರು ಯೋಜನೆಗಳನ್ನು ಪ್ರಕಟಿಸಿದೆ ಎಂದರು.
ಬಜರಂಗ ದಳ ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವುದು ಹನುಮ ಭಕ್ತರನ್ನು ರೊಚ್ಚಿಗೆಬ್ಬಿಸಿದೆಂದರು.
ಸಭೆಯಲ್ಲಿ ಐದು ಜಿಲ್ಲೆಯ ಐದು ಕ್ಷೇತ್ರಗಳ ಜನತೆ ಪಾಲ್ಗೊಳ್ಳಲಿದ್ದಾರೆ.
ಒಂದು ಕಿಲೋ ಮೀಟರ್ ವ್ಯವಸ್ಥೆಯಲ್ಲಿ ಪಾರ್ಕಿಂಗ್ ಜನತೆ ಕುಳಿತುಕೊಂಡು ಸಮಾರಂಭ ವೀಕ್ಷಿಸಲು 80 ಸಾವಿರ ಕುರ್ಚಿ ವ್ಯವಸ್ಥೆ ಮಾಡಿದೆಂದರು.
ಬಳ್ಳಾರಿ ರೂರಲ್ ಮತ್ತು ಸಿರುಗುಪ್ಪಗೆ  ನಾಳೆ ಪಜ್ಷದ ಉಪಾಧ್ಯಕ್ಷ ವಿಜಯೇಂದ್ರ ಅವರು ಪ್ರಚಾರಕ್ಕೆ ಬರಲಿದ್ದಾರೆ.
ಮೇ.7 ರಂದು ಪಕ್ಷದ  ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸಿರುಗುಪ್ಪಕ್ಕೆ ಬರಲಿದ್ದಾರೆಂದು 
ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ  ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಕೆ.ಎ.ರಾಮಲಿಂಗಪ್ಪ, ಎರ್ರಂಗಳಿ ತಿಮ್ಮಾರೆಡ್ಡಿ. ಕೆ.ಎಸ್.ಅಶೋಕ್ ಕುಮಾರ್,  ಸಿದ್ದೇಶ್ ಯಾದವ್, ರಾಜೀವ್ ತೊಗರಿ ಮೊದಲಾದವರು ಇದ್ದರು.