ನಾಡಿದ್ದು ನಗರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ಎಂ.ಪಿ.ಅಭ್ಯರ್ಥಿಯ ಚರ್ಚೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06: ಮುಂಬರುವ ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಲು. ಪಕ್ಷದ ಮುಖಂಡ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ  ನಾಡಿದ್ದು ಮಧ್ಯಾಹ್ನ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಹಾಲಿ ಮತ್ತು ಮಾಜಿ ಸಂಸದರು, ಕ್ಷೇತ್ರ ವ್ಯಾಪ್ತಿಯ  ಹಾಲಿ‌ ಮತ್ತು ಮಾಜಿ ಶಾಸಕರು, ವಿಧಾನ‌ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರಂತೆ. ಮಾಜಿ ಸಚಿವ ಶ್ರೀರಾಮುಲು ಸಹ ಇದರಲ್ಲಿ ಪಾಲ್ಗೊಳ್ಳಲಿದ್ದಾರಂತೆ.
ಹಾಲಿ ಸಂಸದ ವೈ.ದೇವೇಂದ್ರಪ್ಪ ಮತ್ತೆ ಸ್ಪರ್ಧೆ ಮಾಡ್ತಾರಾ, ಇಲ್ಲಾ ಈ ಬಾರಿ ಶ್ರೀರಾಮುಲು ಅವರು ಸ್ಪರ್ಧೆ ಮಾಡ್ತಾರಾ, ಅವರು ಆಸಕ್ತಿ ಹೊಂದಿಲ್ಲ ಎಂದರೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕೆ ಮೊದಲಾದ ಅಂಶಗಳ‌ ಕುರಿತು ಈ ಸಭೆಯಲ್ಲಿ ಚರ್ಚೆ ಆಗಲಿದೆಯಂತೆ.

One attachment • Scanned by Gmail