ನಾಡಿದ್ದು ಆರ್ ವೈ ಎಂ ಇ ಸಿ ಕಾಲೇಜಿನಲ್ಲಿ ಮತ ಎಣಿಕೆಗೆ 80 ಟೇಬಲ್ ಗಳ ವ್ಯವಸ್ಥೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.11: ಜಿಲ್ಲೆಯ ಐದು ಕ್ಷೇತ್ರಗಳಾದ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಸಂಡೂರು, ಸಿರುಗುಪ್ಪ ಮತ್ತು ಕಂಪ್ಲಿ ಕ್ಷೇತ್ರಗಳಿಗೆ ನಿನ್ನೆ ಮತದಾನ ನಡೆದು. ಮತ ಯಂತ್ರಗಳನ್ನು ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನೀಯರಿಂಗ್ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಇಲ್ಲಿಯೇ ನಾಡಿದ್ದು ಮೇ 13 ರಂದು ಬೆಳಿಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ.
ಒಂದೊಂದು ಕ್ಷೇತ್ರದ ಮತಯಂತ್ರಗಳಲ್ಲಿನ ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಿದೆ. ಅಂಚೆ ಮಾತದಾನಕ್ಕೆ ಎರೆಡು ಟೇಬಲ್ ಇರಿಸಿದೆ. ಒಟ್ಟಾರೆ ಐದು ಕ್ಷೇತ್ರಗಳಿಗೆ 80 ಟೇಬಲ್ ವ್ಯವಸ್ಥೆ ಮಾಡಿದೆ.
ಬಳ್ಳಾರಿ ನಗರ 19 ಸುತ್ತುಗಳಲ್ಲಿ, ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಂಡೂರು 18 ಸುತ್ತುಗಳಲ್ಲಿ, ಸಿರುಗುಪ್ಪ 17 ಸುತ್ತುಗಳಲ್ಲಿ ಮತ ಎಣಿಕೆ ಮುಗಿಯಲಿದೆ.
ಮತಗಳ ಎಣಿಕೆಗಾಗಿ ಅಗತ್ಯ ಸಿಬ್ಬಂದಿ ನೇಮಕ ಮಾಡಿ ಅವರಿಗೆ ತರಬೇತಿ ನೀಡಲಾಗಿದೆ.
ಮತ ಎಣಿಕೆ ಕೇಂದ್ರಕ್ಕೆ  ಅಭ್ಯರ್ಥಿಗಳ ಎಣಿಕೆ ಏಜೆಂಟರು ಬಿಟ್ಟರೆ ಇತರರಿಗೆ ಪ್ರವೇಶ ಇಲ್ಲ.
ಇಂಜಿನಿಯರಿಂಗ್ ಕಾಲೇಜು ಕಾಂಪೌಂಡ್ ಹೊರಗೆ  ಸುತ್ತಮುತ್ತವೇ ಕಾರ್ಯಕರ್ತರು ಇರಬೇಕಿದೆ. ಮಧ್ಯಾಹ್ನ1 ಗಂಟೆ ಒಳಗೆ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ.