
ಚನ್ನಮ್ಮನ ಕಿತ್ತೂರ,ಮಾ 19: ನಾಡಿನ ಸಾಹಿತ್ಯ, ಕಲೆ, ಸಂಸ್ಕøತಿ, ಪರಂಪರೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಜೈನರು ನೀಡಿದ ಕೊಡುಗೆ ಅಪಾರ ಎಂದು ಉದ್ಯಮಿ ಮತ್ತು ಕಾಂಗ್ರೆಸ್ ಮುಖಂಡರಾದ ಲಕ್ಷ್ಮೀ ಇನಾಮದಾರ ಹೇಳಿದರು.
ಶ್ರೀ ಕ್ಷೇತ್ರ ಕಾಂಚನ ಶೃತಿ ವಿದ್ಯಾಸಂಸ್ಥೆ ಅಹಿಂಸಾಕ್ಷೇತ್ರ ಸಮೀಪದ ಬೆಳಗಾವ ತಾಲೂಕಿನ ಮುತ್ನಾಳ ಗ್ರಾಮದಲ್ಲಿ ಭಗವಾನ ಶ್ರೀ 1008 ಆದಿನಾಥ ತೀರ್ಥಂಕರ ಜಿನಬಿಂಬ ಪಂಚಕಲ್ಯಾಣ ಮಹಾಮಹೋತ್ಸವ ಹಾಗೂ ಭಗವಾನ ಶ್ರೀ ಬಾಹುಬಲಿ ಭವ್ಯ ಪ್ರತಿಮೆಯ ಮಹಾಮಸ್ತಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಈ ಹೊಸಯುಗದಲ್ಲಿ ಜೈನಧರ್ಮದ ಸಂದೇಶಗಳನ್ನು ಹೆಚ್ಚು ಪ್ರಚಾರಗೊಳಿಸುವ ಅಗತ್ಯವಿದೆ. ಇಂದು ಸಮಾಜದಲ್ಲಿ ಶಾಂತಿ, ಅಹಿಂಸೆ ಮೊದಲಾದವುಗಳಿಗೆ ಆದ್ಯತೆ ನೀಡಲಾಗಿದೆ. ಎಲ್ಲರೂ ಅವುಗಳನ್ನು ಅಳವಡಿಸಿಕೊಂಡಾಗ ನೆಮ್ಮದಿ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಪರಮಪೂಜ್ಯರುಗಳಾದ 108 ಶ್ರೀಕುಂಥುಸಾಗರ, 108 ಶ್ರೀಕನಕನಂದಿ, 108 ಶ್ರೀಸಚ್ಛಿದಾನಂದ, ಗಣನೀಯ ಆಯಿರ್ಕಾರತ್ನ 105 ಶ್ರೀಜನವಾಣಿ ಮಾತಾಜೀ, ಆಯಿರ್ಕಾ 105 ಶ್ರೀರಿದಿಶ್ರೀ, ಶ್ರೀಚಾರುಕೀರ್ತಿ ಸ್ವಾಮಿಜೀ ಶ್ರವಣಬೆಳಗೋಳ, ಶ್ರೀಭಟ್ಟಾಕಲಂಕ ಸ್ವಾಮಿಜೀ ಸೊಂದಾಮಠ, ಶ್ರೀಲಕ್ಷ್ಮೀಸೇನ ಸ್ವಾಮಿಜೀ (ಮಹಾರಾಷ್ಟ್ರ) ಕೊಲ್ಲಾಪೂರ, ಶ್ರೀಲಕ್ಷ್ಮೀಸೇನ ಸ್ವಾಮಿಜೀ ಎನ್‍ಆರ್‍ಪುರ, ಶ್ರೀಭವನಕೀರ್ತಿ ಸ್ವಾಮಿಜೀ ಕನಕಗಿರಿ, ಶ್ರೀಜಿನಸೇನ ಸ್ವಾಮಿಜೀ (ಮಹಾರಾಷ್ಟ್ರ) ನಾಂದನಿ, ಶ್ರೀಧರ್ಮಸೇನ ಸ್ವಾಮಿಜೀ ವರೂರ, ಶ್ರೀಶಿವಾನಂದ ಶಿವಾಚಾರ್ಯ ಸ್ವಾಮಿಜೀ ವಹಿಸಿದ್ದರು.
ಕಮಿಟಿ ಅಧ್ಯಕ್ಷ ಪಾರೀಸ್ ಹುಕ್ಕೇರಿ, ಪ್ರತಿಷ್ಟಾಚಾರ್ಯ ಯಳವಟ್ಟಿಯ ಶ್ರೀಮಂಧರ ಉಪಾಧ್ಯ, ಮಾಜಿ ಜಿ.ಪಂ. ಸದಸ್ಯನಿ ರಾಧಾ ಕಾಂದ್ರೋಳ್ಳಿ, ದೇವುಗೌಡ ಪಾಟೀಲ, ಡಿ.ಡಿ.ಪಾಟೀಲ, ಸುನೀಲ ಭಜನ್ನವರ, ಸುನೀತಾ ಭಜನ್ನವರ, ವಸಂತಗೌಡ ಪಾಟೀಲ ಸೇರಿದಂತೆ ಪುರೋಹಿತರು, ಜೈನ ಶ್ರಾವಕ-ಶ್ರಾವಕೀಯರು ಗಣ್ಯರು, ಸಾರ್ವಜನಿಕರಿದ್ದರು.