ನಾಡಿಗೆ ಕಾರಂತರ ಬಹುಮುಖ ಕೊಡುಗೆ ಅಮೋಘ

ಕಲಬುರಗಿ,ನ.17: ಕಾದಂಬರಿಕಾರ, ಪರಿಸರವಾದಿ, ಪ್ರಗತಿಶೀಲ ಚಿಂತಕ, ಯಕ್ಷಗಾನ ತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಚಿತ್ರ ನಿರ್ದೇಶಕ ಹೀಗೆ ಹತ್ತು ಹಲವು ಕ್ಷೇತ್ರಗಳ ಮೂಲಕ ನಮ್ಮ ನಾಡಿಗೆ ಜ್ಞಾನಪೀಠ ಪ್ರಶಸ್ತಿ ಪುರಷ್ಕøತ ಮೇರು ಸಾಹಿತಿ ಡಾ.ಕೆ.ಶಿವರಾಮ ಕಾರಂತರು ಬಹುಮುಖ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅವರು ಕಾಳಗಿ ತಾಲೂಕಿನ ಕೋರವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಸರಣಿ ಕಾರ್ಯಕ್ರಮ-9ರಲ್ಲಿ ಮಂಗಳವಾರ ಏರ್ಪಡಿಸಿದ್ದ ‘ನಾಡಿಗೆ ಡಾ.ಕೆ.ಶಿವರಾಮ ಕಾರಂತರ ಕೊಡುಗೆ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಕಾರಂತರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಜಗತ್ತಿನ ಶ್ರೀಮಂತಿಕೆಯಲ್ಲಿ ಒಂದಾಗಲು ಶಿವರಾಮ ಕಾರಂತರ ಕೊಡುಗೆ ಅನನ್ಯವಾಗಿದೆ. ‘ಮೂಕಜ್ಜಿಯ ಕನಸುಗಳು’, ‘ಮರಳಿ ಮಣ್ಣಿಗೆ’ ಎಂಬ ಮೇರು ಕೃತಿಗಳು ಸೇರಿದಂತೆ 47 ಕಾದಂಬರಿಗಳು ಒಳಗೊಂಡಂತೆ ಒಟ್ಟು 417 ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಕಾದಂಬರಿಯಲ್ಲಿ ಸಮಾಜದ ಬಗ್ಗೆ ತಮ್ಮ ಕಳಕಳಿಯನ್ನು ಎತ್ತಿ ತೋರಿಸಿದ್ದಾರೆ. ಎಲ್ಲಾ ಜನರು ಓದುವ, ತಿಳಿಯುವ ಹಾಗೆ ಸರಳವಾದ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದು, ಇವರ ವೈಶಿಷ್ಠ್ಯವಾಗಿದೆ. ಪ್ರಸಿದ್ದ ಇತಿಹಾಸಕಾರರಾದ ರಾಮಚಂದ್ರ ಗುಹಾ ಅವರು ಹೇಳಿರುವಂತೆ, “ಸ್ವಾತಂತ್ರೋತ್ತರ ಭಾರತದ ರವೀಂದ್ರನಾಥ ಟ್ಯಾಗೋರ” ಎಂದು ಶಿವರಾಮ ಕಾರಂತರನ್ನು ವರ್ಣಿಸಿದ್ದು, ಕಾರಂತರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆಯೆಂದು ಹೇಳಿದರು.
ಕಾರಂತರಿಗೆ ‘ಕಡಲ ತೀರದ ಭಾರ್ಗವ’ ಎಂಬ ಬಿರುದಾಂಕಿತವಿತ್ತು. ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕು, ಸಮಾಜದ ಬಗ್ಗೆ ಸದಾ ಕಳಕಳಿ ತುಡಿಯುತ್ತಿತ್ತು. ಗಾಂಧಿಜೀಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ದೇಶ ಸೇವೆಯ ಜೊತೆಯಲ್ಲಿ ಸಮಾಜಕ್ಕೆ ಬಹು ಉಪಯುಕ್ತ ಹಾಗೂ ಮೌಲಿಕವಾದ ಸಾಹಿತ್ಯ ಕೃಷಿ ಮಾಡಿದ್ದಾರೆಂದರು.
ತಾಲೂಕಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಭೀಮರೆಡ್ಡಿ ಮಕಾಸಿ ಮಾತನಾಡಿ, ಬಳಗವು ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ನಾಡು, ನುಡಿ, ಸಂಸ್ಕøತಿ, ಪರಂಪರೆ, ವೈಚಾರಿಕತೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷ ಅಸೋಕ ಮಿಸ್ಕಿನ್, ಸಹ ಶಿಕ್ಷಕರಾದ ಅರುಂಧತಿ ನೀಲಶೆಟ್ಟಿ, ಆಸ್ರಾ ಫರ್ವಿನ್, ಗುರುನಾಥ ಜಾಧವ, ಸಿಬ್ಬಂದಿಗಳಾದ ವಿಜಕುಮಾರ, ಖೀರು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಹಾಂತೇಶ್ವರಿ ಕಟ್ಟಿಮನಿ, ಸಹ ಶಿಕ್ಷಕರಾದ ಬಾಬುರಾಯ ಮಹಾಜನ್, ಅಶೋಕುಮಾರ, ರಾಜೇಶ್ವರಿ ರೇವಣಕರ್, ಮಹೇಶ ಮಳ್ಳಿ, ಜೈಶ್ರೀದೇವಿರೆಡ್ಡಿ, ಬಸವಾಂಬಿಕೆ ತಾಂಬೂಳೆ, ಬೇಬಿನಂದಾ ಬೀರನಳ್ಳಿ ಸೇರಿದಂತೆ ಮತ್ತಿತರರಿದ್ದರು.