ನಾಡಪ್ರಭು ಕೆಂಪೇಗೌಡ ರಥ ಹಿರಿಯೂರಿಗೆ

ಹಿರಿಯೂರು: ನ. 7-ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 11 ರಂದು ಬೆಂಗಳೂರಿನಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು  ಪ್ರಗತಿಯ ಪ್ರತಿಮೆ ಆವರಣದಲ್ಲಿನ ಗೋಪುರ ನಿರ್ಮಾಣಕ್ಕೆ ನಾಡಿನಾದ್ಯಂತ ಪವಿತ್ರ ಮಣ್ಣು ಸಂಗ್ರಹ ಅಭಿಯಾನ ನಡೆಯುತ್ತಿದೆ.ನಾಡಪ್ರಭು ಕೆಂಪೇಗೌಡ ರಥ ಭಾನುವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿಗೆ ಆಗಮಿಸಿದ್ದು  ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರ ನಿರ್ದೇಶನದಂತೆ ತಾಲ್ಲೂಕು ಆಡಳಿತದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಅಭಿಯಾನವು ಜೆ.ಜಿ. ಹಳ್ಳಿಯಿಂದ ಮುಂದೆ ಸಾಗಿ ಕೆಆರ್ ಹಳ್ಳಿ, ಆದಿವಾಲ, ರಂಗನಾಥಪುರ, ಹೊಸಯಳ ನಾಡು, ಬಬ್ಬೂರು, ಬೀರೇನಹಳ್ಳಿ, ಸಾಗಿ ನಂತರ ಹಿರಿಯೂರು ನಗರದಲ್ಲಿ ಉಳಿದು ಮುಂದೆ ಸೋಮವಾರ ಬೆಳಗ್ಗೆ ಬಬ್ಬೂರು, ಮಸ್ಕಲ್, ಬ್ಯಾಡರಹಳ್ಳಿ ಚಿಲ್ಲಹಳ್ಳಿ, ಹರಿಯಬ್ಬೆ ಮೂಲಕ ಧರ್ಮಪುರದ  ಅಭಿಯಾನ ಮುಗಿಸಿ ಶಿರಾ ಮೂಲಕ ತುಮಕೂರು ತಲುಪಲಿದೆ.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನವೀನ್, ಶಾಸಕರ ಆಪ್ತ ಸಹಾಯಕ ನಿರಂಜನ್ ,ಬಿ ಬಿಎಂಪಿ ಉಪ ಆಯುಕ್ತ ರಾಜು, ಉಪ ವಿಭಾಗಾಧಿಕಾರಿ ಚಂದ್ರಯ್ಯ, ಜಿಲ್ಲಾ  ಉಪ ಕಾರ್ಯದರ್ಶಿ ರಂಗಸ್ವಾಮಿ,  ತಹಶೀಲ್ದಾರ್ ಪ್ರಶಾಂತ ಕೆ ಪಾಟೀಲ್, ಇಒ ಈಶ್ವರ ಪ್ರಸಾದ್, ಕೃಷಿಕ ಸಮಾಜದ ಅಧ್ಯಕ್ಷ ಹೆಚ್ ಆರ್ ತಿಮ್ಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಗದಾಂಬಿಕ, ಕರಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರಪ್ಪ, ದಿಂಡಾವರ ಅಧ್ಯಕ್ಷೆ ಮಂಜುಳಾ, ಯಲ್ಲದಕೆರೆ ಅಧ್ಯಕ್ಷೆ ಸುವರ್ಣ ಬಾಲಣ್ಣ, ಶಂಕರ್ ಮೂರ್ತಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.