ನಾಡಪಭು ಕೆಂಪೇಗೌಡರ 514ನೇ ಜಯಂತಿ ಮೆರವಣಿಗೆ

ಸಂಜೆವಾಣಿ ವಾರ್ತೆ
ಹನೂರು ಜು.21:- ಪಟ್ಟಣದ ಒಕ್ಕಲಿಗ ಸಮೂದಾಯದವತಿಯಿಂದ ಗುರುವಾರ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಮೆರೆವಣಿಗೆಯ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಆರ್‍ಎಂಸಿ ಆವರಣದಲ್ಲಿ ಮೈಸೂರು ವಿಜಯನಗರ ಶಾಖಾ ಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಅವರು ಶಾಸಕ ಆರ್ ನರೇಂದ್ರ, ಮಾನಸ ಫೌಂಡೇಷನ್ ಅಧ್ಯಕ್ಷ ಡಾ ದತ್ತೇಶ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಗಂಗಾಧರ್, ಡಿ.ವೈ.ಎಸ್. ಪಿ. ಸೋಮೇಗೌಡ ,ತಾಲ್ಲೂಕು ವೈದ್ಯಾಧಿಕಾರಿ ಡಾ|| ಪ್ರಕಾಶ್ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಆನೆ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಅವರು ಸರ್ವರ ಒಳಿತನ್ನು ಬಯಸುವ ಹಿತಾದೃಷ್ಟಿ ಹಾಗೂ ದೂರದೃಷ್ಟಿಯನ್ನು ಹೊಂದಿದ ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವಲ್ಲಿ ಅಪಾರ ಶ್ರಮ ವಹಿಸಿದ್ದಾರೆ. ಅಲ್ಲದೆ ಕೆರೆ ಕಟ್ಟೆಗಳು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅಂದಿನ ಅವರ ದೂರದೃಷ್ಟಿ ಇಂದು ಬೆಂಗಳೂರು ಬೃಹತ್ ಮಟ್ಟದಲ್ಲಿ ಹಾಗೂ ವಿಶ್ವಮಟ್ಟದಲ್ಲಿ ಹೆಸರು ಗಳಿಸಲು ಕಾರಣವಾಯಿತು. ನಾಡಿಗೆ ಅವರ ಕೊಡುಗೆ ಅಪಾರ. ಆದ್ದರಿಂದ ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವುದರ ಮುಖಾಂತರ ಸಮಾಜಕ್ಕೆ ಸೇವೆ ನೀಡಬೇಕು ಎಂದು ತಿಳಿಸಿದರು.
ವೈಭವದ ಮೆರವಣಿಗೆ:
ಕೆಂಪೇಗೌಡರ ಭಾವಚಿತ್ರವಿರುವ ತೇರಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು . ಈ ವೇಳೆ ವಾದ್ಯಮೇಳಗಳು ನಗಾರಿ ತಮಟೆ ಹಾಗೂ ಕಲಾ ಮೇಳದೊಂದಿಗೆ ನೆರೆದಿದ್ದ ಜನರು ಮಲೆಮಹದೇಶ್ವರ ಬೆಟ್ಟ ಮುಖ್ಯರಸ್ತೆ, ಡಾ|| ಬಿ.ಆರ್ ಅಂಬೇಡ್ಕರ್ ವೃತ್ತ, ಪಟ್ಟಣದ ಬಸ್ ನಿಲ್ದಾಣ, ಬಂಡಳ್ಳಿ ರಸ್ತೆ ಮೂಲಕ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಸ್ಥಾನದ ಬಳಿ ಮೆರವಣಿಗೆ ಮುಕ್ತಯವಾಯಿತು.
ಮೆರವಣಿಗೆಯುದ್ದಕ್ಕೂ ಯುವಕರು ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೃತ್ಯ ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ತಂದಿತು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು ಸಾವಿರಾರು ಮಂದಿ ನಾಡಪ್ರಭು ಕೆಂಪೇಗೌಡರ ಅಭಿಮಾನಿಗಳು ಹಾಗೂ ಒಕ್ಕಲಿಗ ಸಮುದಾಯದ ಮುಖಂಡರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯು ವಿಜೃಂಭಣೆಯಿಂದ ನಡೆದಿದ್ದು ಈ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಗಿರೀಶ್ ಹರೀಶ್, ಆನಂದ್, ಮಾಜಿ ಉಪಾದ್ಯಕ್ಷ ಮಾದೇಶ್ ಕೊಳ್ಳೇಗಾಲ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರಾದಂತಹ ಚಿಕ್ಕತಮ್ಮೇಗೌಡ, ಮಂಜೇಶ್, ಮುಖಂಡರಾದ ವೆಂಕಟೇಗೌಡ ಸುರೇಶ್ ವೆಂಕಟೇಶ್ ರವಿ ಸತೀಶ್ ಸೋಮಶೇಖರ್ ಮುಖಂಡರಾದ ಲಿಂಗರಾಜು, ಹನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಅಭಿಲಾಷ್ , ಯುವ ಮುಖಂಡರಾದ ರಾಜೇಂದ್ರ, ಶಶಿ,ಶಂಕರ್,ನಟರಾಜು, ಮಂಜು,ಪ್ರವೀಣ್ ಹಾಜರಿದ್ದರು.