ನಾಡಗೌಡರಿಗೆ 7844 ಮತಗಳ ಅಂತರದ ಗೆಲುವು

ಮುದ್ದೇಬಿಹಾಳ:ಮೇ.14: ಅತ್ತ ವಿಜಯಪುರದಲ್ಲಿ ಮತ ಎಣಿಕೆ ನಡೆಯುತ್ತಿದ್ದರೆ ಇತ್ತ ತಾಲ್ಲೂಕಿನ ಅಯ್ಯನಗುಡಿಯಲ್ಲಿರುವ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಾಜಿ ಸಚಿವ ಸಿ.ಎಸ್.ನಾಡಗೌಡ ಕುಟುಂಬ ಸಮೇತ ಪೂಜೆ ಸಲ್ಲಿಸುತ್ತಿದ್ದರು. ಕ್ಷಣ ಕ್ಷಣಕ್ಕೆ ವಿಜಯಪುರದ ಮತ ಎಣಿಕೆ ಕೇಂದ್ರದಿಂದ ಸ್ಪಷ್ಟ ಗೆಲುವಿನ ಫಲಿತಾಂಶದ ಸುದ್ದಿಯನ್ನು ಅಲ್ಲಿಂದಲೇ ಪಡೆಯುತ್ತಿದ್ದ ನಾಡಗೌಡರು ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರು. 8 ನೇ ಸುತ್ತಿನ ಮತ ಎಣಿಕೆ ಮುಗಿದಾಗ ಅವರು ಕೇವಲ 930 ಮತಗಳ ಅಂತರದಿಂದ ಮುಂದಿದ್ದರು. ಸೋಲು ಗೆಲುವಿನ ಹಾವು ಏಣಿಯಾಣ ಮುಂದುವರೆದಿತ್ತು. ಅಂತಿಮವಾಗಿ 78598 ಮತ ಪಡೆದು (ಸಮೀಪದ ಪ್ರತಿಸ್ಪರ್ಧಿ ಎ.ಎಸ್.ಪಾಟೀಲ ನಡಹಳ್ಳಿ 70754) 7844 ಮತಗಳ ಅಂತರದಿಂದ ಗೆಲುವು ಪಡೆದರು ಎಂಬ ಮಾಹಿತಿ ಬರುತ್ತಿದ್ದಂತೆಯೇ ನಾಡಗೌಡರು ತಮ್ಮ ಕೆಲವು ಅಭಿಮಾನಿಗಳೊಂದಿಗೆ ವಿಜಯಪುರದತ್ತ ಪ್ರಯಾಣ ಬೆಳೆಸಿದರು. ಚುನಾವಣಾಧಿಕಾರಿಗಳಿಂದ ಗೆಲುವಿನ ಪ್ರಮಾಣಪತ್ರ ಪಡೆದು ಯಲಗೂರಿನ ಅಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಆಸೀರ್ವಾದ ಪಡೆದ ನಾಡಗೌಡರು ಪಟ್ಟಣಕ್ಕೆ ಆಗಮಿಸಿದರು. ನಾಡಗೌಡರು ಪಟ್ಟಣಕ್ಕೆ ಬರುವವರೆಗೆ ಕಾಯ್ದು ನಿಂತ ಸಾವಿರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಅವರು ಬರುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಭೋಸಲೆ ಪೆಟ್ರೊಲ್ ಬಂಕ್ ನಿಂದ ತೆರೆದ ವಾಹದ ಮೂಲಕ ಆರಂಭಗೊಂಡ ವಿಜಯೋತ್ಸವದ ಮೆರವಣಿಗೆ ಬಸವೇಶ್ವರ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಹಾಯ್ದು ಇಂದಿರಾ ವೃತ್ತ, ಬನಶಂಕರಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದರು. ವಿಜಯೋತ್ಸವದಲ್ಲಿ ಶಾಂತಗೌಡ ಪಾಟೀಲ ನಡಹಳ್ಳಿ, ಗುರು ತಾರನಾಳ, ಶಿವಶಂಕರಗೌಡ ಹಿರೇಗೌಡರ, ಸತೀಶ ಓಸ್ವಾಲ, ವೆಂಕಟೇಶ ಪಾಟೀಲ, ಅಬ್ದುಲಗಫೂರ ಮಕಾನದಾರ, ಸಿದ್ದಣ್ಣ ಮೇಟಿ, ಸುನೀಲ ಇಲ್ಲೂರ, ಮಹಾಂತಪ್ಪ ನಾವದಗಿ, ಪ್ರಭುರಾಜ ಕಲಬುರ್ಗಿ, ಅಮರೇಶ ಗೂಳಿ, ಸುರೇಶ ಕಲಾಲ, ಎಸ್.ಎಸ್.ಹುಲ್ಲೂರ, ಬಿ.ಕೆ.ಬಿರಾದಾರ ಜಟ್ಟಗಿ, ಸಂತೋಷ ನಾಯಕ, ಡಾ.ವಿಜಯಕುಮಾರ ಗೂಳಿ, ಶಶಿಕಾಂತ ಮಾಲಗತ್ತಿ, ನೇತಾಜಿ ನಲವಡೆ ಸೇರಿದಂತೆ ಸಹಸ್ರಾರು ಜನರು ಪಾಲ್ಗೊಂಡಿದ್ದರು.


ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಧರ್ಮ ಮತ್ತು ಅಧರ್ಮದ ಮದ್ಯೆ ಯುದ್ಧ ಪ್ರಾರಂಭಗೊಂಡಿತ್ತು ಸಧ್ಯ ಧರ್ಮಕ್ಕೆ ಜಯವಾಗಿದೇ ಅಧರ್ಮ ಸೋತಿದೆ. ಅಂದರೆ ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಧರ್ಪ ಹಾಗೂ ಬ್ರಷ್ಟಾಚಾರ ಜೊತೆಗೆ ಸರ್ವಾಧಿಕಾರ ಧೋರಣೆಯನ್ನು ಜನರು ರೋಸಿಹೋಗಿದ್ದರು ಅದನ್ನು ಮರೆಸಲು ಮಹಿಳೆಯರಿಗೆ ಸೀರೆ ಇತರೇ ವಸ್ತುಗಳನ್ನು ಹಂಚಿ ಮಹಿಳೆಯರ ಮಸ್ಸು ಗೆಲ್ಲು ಮುಂದಾದರು ಆದರೇ ಮತಕ್ಷೇತ್ರದ ಜನ ಈ ಬಾರಿ ಸೋಲಿಸುವ ಮೂಲಕ ಸನ್ನಡತೆ ರಾಜಕಾರಣಕ್ಕೆ ಹೆಸರಾದ ಸಿ ಎಸ್ ನಾಡಗೌಡರನ್ನು ಗೆಲ್ಲಿಸಿದ್ದಾರೆ.

ಸಿದ್ದಣ್ಣ ಮೇಟಿ ಗೋವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ


ಕಳೇದ 5ವರ್ಷಗಳಿಂದ ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಧೌರ್ಜನ್ಯಕ್ಕೆ ವ್ಯಪಾರಸ್ತರು ಹಾಗೂ ಉದ್ಯಮಿಗಳು, ಸರಕಾರಿ ಅಧಿಕಾರಿಗಳು ತೀವೃ ಸಂಕಷ್ಟವನ್ನು ಅನುಭವಿಸಿದ್ದಾರೆ. ಎಷ್ಟೋ ಜನ ಅಮಾಯಕರ ಮೇಲೆ ಸುಳ್ಳು ಪೋಲಿಸ್ ಕೇಸ್ ಹಾಕಿಸುವ ಮೂಲಕ ವೈಷಮ್ಯದ ಹಾಗೂ ಹಿಟ್ಲರ್ ಆಡಳಿತ ನಡೆಸಿದರು. ಸಧ್ಯ ಜನ ಬದಲಾವಣೆ ಬಯಸಿದ್ದರಿಂದ ಈ ಬಾರಿ ಕಾಂಗ್ರೇಸ್ ಪಕ್ಷ ಗೆಲ್ಲುವಂತೆ ಮಾಡಿದ್ದಾರೆ.

ರುದ್ರುಗೌಡ ಅಂಗಡಗೇರಿ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ