
ಗಲಾಟೆ ಬೇಡ ಶಾಂತಿಯುತ ಚುನಾವಣೆ ನಾಡಗೌಡ
ಸಿಂಧನೂರು.ಮೇ.೭- ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಜೆಡಿಎಸ್ ಅಭ್ಯರ್ಥಿಯಾದ ಶಾಸಕ ವೆಂಟರಾವ ನಾಡಗೌಡರಿಗೆ ಮತಹಾಕಿ ಗೆಲ್ಲಿಸಲು ಸಮಾಜ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಒಕ್ಕೊರಲಿನಿಂದ ಸಭೆಯಲ್ಲಿ ಘೋಷಣೆ ಮಾಡಿದರು.
ನಗರದ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಮಾಜದ ಮುಖಂಡರು ಸಭೆ ಮಾಡಿ ಈ ತೀರ್ಮಾನ ಮಾಡಿದ್ದು ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರಂತೆ ನಾಡಗೌಡರು ನಮ್ಮ ಸಮಾಜದ ಮುಖಂಡರಾಗಿದ್ದು. ಹಂಪನಗೌಡರಿಂತ ನಾಡಗೌಡರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ಸಭೆಯಲ್ಲಿ ಸೇರಿದ ಸಮಾಜದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಹಂಪನಗೌಡರು ನಾಡಗೌಡರಿಗೆ ಮತಹಾಕಬೇಡಿ ಅವರು ಗೆಲ್ಲುವುದಿಲ್ಲ ಅವರ ಬದಲು ಹಂಪನಗೌಡರಿಗೆ ಹಾಕಿ ನಾಡಗೌಡರಿಗೆ ಮತ ಹಾಕಿದರೆ ಬೇರೆಯವರ ಗೆಲ್ಲುತ್ತಾರೆ ಎಂದು ಅಪ ಪ್ರಚಾರ ಮಾಡಿದ ಕಾಲಣ ನಾವು ಸಾಮಾಜದ ಮುಖಂಡರು ಸಭೆ ಮಾಡಿದ್ದೇವೆ ಎಂದರು.
ಹಂಪನಗೌಡರು ೪ ಸಲ ಶಾಸಕರಾದರು ಸಹ ದೊಡ್ಡ ಸಮಾಜವಾದ ವೀರಶೈವ ಕಲ್ಯಾಣ ಮಂಟಪ ಮಾಡಲಿಕ್ಕೆ ಆಗಿಲ್ಲ. ಆದರೆ ಶಾಸಕ ವೆಂಟರಾವ ನಾಡಗೌಡ ಶಾಸಕರಾಗಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ನೀಡುವ ಮೂಲಕ ಸಾಮಾಜದ ಮೇಲೆ ತಮಗಿರುವ ಕಾಳಜಿ ಕಳಕಳಿ ಪ್ರೀತಿಯನ್ನು ತೋರಿಸಿದರು. ಹಾಗಾಗಿಯೇ ನಾಡಗೌಡರು ನಮ್ಮ ಸಮಾಜದ ನಾಯಕರಾಗಿದ್ದಾರೆ ಎಂದರು.
ಹಂಪನಗೌಡರ ಹತ್ತಿರ ದೊಡ್ಡ ದೊಡ್ಡ ಶ್ರೀಮಂತರಿದ್ದಾರೆ ಕಾರುಗಳಲ್ಲಿ ಬಂದು ಹಣ ಕೊಟ್ಟು ಮತ ಕೇಳುತ್ತಿದ್ದಾರೆ. ಆದರೆ ನಾವು ಬಡ ಮಧ್ಯಮ ವರ್ಗದವರು ಹಣ ಇಲ್ಲದೆ ಬೈಕ್‌ನಲ್ಲಿ ಬಂದು ನಾಡಗೌಡರು ಮಾಡಿದ ಅಭಿವೃದ್ಧಿ ಕೆಲಸ ನೋಡಿ ಮತ ಕೋಡಿ ಎಂದು ಕೇಳುತ್ತಿದ್ದೇನೆ. ಜನರು ಸಹ ನಾಡಗೌಡರ ಪರವಾಗಿ ಮತ ಹಾಕುವಾದಾಗಿ ಹೇಳುತ್ತಿದ್ದಾರೆ ಎಂದು. ಹಲವರು ಸಭೆಯಲ್ಲಿ ಮಾತನಾಡಿದರು.
ಹಂಪನಗೌಡ ಬಾದರ್ಲಿ ೪೦ ವರ್ಷದಲ್ಲಿ ಮಾಡಲಾರದ ಕೆಲಸಗಳನ್ನು ನಾನು ೫ ವರ್ಷದಲ್ಲಿ ಮಾಡಿ ತೋರಿಸಿದ್ದೇನೆ. ದೊಡ್ಡ ಸಮಾಜವಾದ ವೀರಶೈವ ಲಿಂಗಾಯತ ಸಮಾಜದ ಕಲ್ಯಾಣ ಮಂಟಪ ಇಲ್ಲದೇ ಇರುವುದು ನೋಡಿ ನನಗೆ ನಾಚಿಕೆಯಾಯಿತು. ಯಾಕೆ ಹಂಪನಗೌಡರು ಮಾಡಲಿಲ್ಲ ಸಮಾಜದ ಕಳಕಳಿಯಿಂದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ನೀಡಿದ್ದೇನೆ ಆದರೆ ಕಾಗದ ಪತ್ರ ಸರಿಯಲ್ಲ ಎಂದರು ಅಲ್ಲದೆ ಜಾಗದ ಬಗ್ಗೆ ಇನ್ನೂ ಎನ್ ಎ.ಯಾಗದೆ ಇರುವದು ಕಂಡ ಬಂತು.
ನಾನು ಚುನಾವಣೆಯಲ್ಲಿ ನಿಂತಾಗ ಯಾರ ಜೊತೆ ಜಗಳ ಗಲಾಟೆ ರಾದಾಂತ ಮಾಡದೆ ಶಾಂತಿಯುತ ವಾಗಿ ಮತ ಕೇಳಿ ಚುನಾವಣೆ ಮಾಡುವಂತೆ ಪಕ್ಷದ ಮುಖಂಡರು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡ ಕಾರಣ ಯಾರು ಕೋರ್ಟ್ ಕಛೇರಿಗೆ ಅಲೆದಾಟ ಮಾಡುತ್ತಿಲ್ಲ ಇದರಿಂದ ನಮಗೆ ಕೇಸ ಇಲ್ಲದಂತೆ ನಾಡಗೌಡರು ಮಾಡಿದ್ದಾರೆ ಎಂದು ವಕೀಲರು ನನಗೆ ಹೇಳಿದರು.
ಬರಿ ಒಂದು ಸಮಾಜದವರು ಮಾತ್ರ ಮತ ಹಾಕಿದರೆ ಯಾರು ಗೆಲ್ಲುವುದಿಲ್ಲ ನಮ್ಮ ಸಮಾಜದ ಜೊತೆಗೆ ಎಲ್ಲ ಸಮಾಜದವರು ಮತ ಹಾಕಿದ್ದಾಗ ಮಾತ್ರ ನಾನು ಗೆಲ್ಲುಲು ಸಾಧ್ಯ ನಾನು ಎಂದು ಜಾತಿ ರಾಜಕೀಯ ಮಾಡದೆ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಜನರ ಮತ ಕೇಳುವ ಬಡವರ ಜನ ಸೇವಕನಾಗಿದ್ದೇನೆ ಕಾಂಗ್ರೆಸ್ ನವರು ಜಾತ್ರೆಯಲ್ಲಿ ಜನರಿಗೆ ತೋರಿಸುವ ವಡ್ಡರ ನಾಗಮ್ಮ ಕಥೆ ಹೇಳಿ ಜನರನ್ನು ಮರಳು ಮಾಡಿ ಮತ ಪಡೆದು ಗೆಲ್ಲುತ್ತಾ ಬಂದಿದ್ದಾರೆ ಇವರ ನಾಟಕ ಮತದಾರರಿಗೆ ಅರ್ಥ ವಾಗಿದೆ ಆದ್ದರಿಂದ ಕೆಲಸ ಮಾಡಿದ ನಾಡಗೌಡರನ್ನು ಗೆಲ್ಲಿಸುವದಾಗಿ ಮತದಾರರು ಕಾರ್ಯ ಕರ್ತರೆ ಓಡಾಡಿ ಚುನಾವಣೆಯ ಮಾಡಿ ನನಗೆ ಮತ್ತೊಮ್ಮೆ ಆರ್ಶಿವಾದ ಮಾಡಲಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು ಅಧಿಕ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸಭೆಯಲ್ಲಿ ಬಾಗವಸೀದ್ಧರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಿಶ್ವನಾಥ ಸ್ವಾಮಿ, ಪಗಡಧಿನ್ನಿ, ಶ್ರೀಗುರು ಮರಳು ಸಿದ್ಧೇಶ್ವರ ಮಠ ವೇದ ಮೂರ್ತಿ ಡಾ.ಸಿದ್ದಯ್ಯತಾತ ಗೊರೇಬಾಳ ಕ್ಯಾಂಪ್, ಅಶೋಕ ಗೌಡ ಗದ್ರಟಗಿ. ಸಂಗಪ್ಪ ನಾಗಲಿಕರ್, ಭೀಮನಗೌಡ ವಕೀಲರು, ವಿರೇಶ ಯಡಿಯುರ ಮಠ, ರವಿಗೌಡ ಬೋಮ್ಮನಾಳ, ಪ್ರವೀಣ ವಕೀಲರು, ನಾಗರಾಜ ಸಜ್ಜನ, ನೀಲಕಂಠ ದಣಿ, ತಿಮ್ಮನಗೌಡ ಮಲ್ಲಾಪುರ, ಧರ್ಮನ ಮಲ್ಕಾಪೂರ, ಸುಮೀತ ತಡಕಲ್ ಸೇರಿದಂತೆ ಸಮಾಜದ ಇನ್ನಿತರ ಮುಖಂಡರು ಸಭೆಯಲ್ಲಿ ಹಾಜರಿದ್ದರು.