ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಿ :ಪಿಂಟು ಸಾಲಿಮನಿ

ಮುದ್ದೇಬಿಹಾಳ :ಮೇ.20: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮದಿಂದ ಅಧಿಕಾರಕ್ಕೆ ಬಂದಿದ್ದು, ರಾಜ್ಯದಲ್ಲಿ ಕಾಂಗ್ರೇಸ್ ಅಲೆ ಇದೆ ಎಂದು ಮತ್ತೋಮ್ಮೆ ಮತದಾರರು ಸಾಬೀತು ಪಡಿಸಿದ್ದಾರೆ , ಆದರಿಂದ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸ್ಥಳೀಯವಾಗಿ 6 ಬಾರಿ ಆಯ್ಕೆಯಾದ ಸಿ ಎಸ್ ನಾಡಗೌಡರಿಗೆ ಉನ್ನತ ದರ್ಜೆಯ ಸ್ಥಾನಮಾನವನ್ನು ನೀಡಬೇಕು, ಈ ಹಿಂದೆ ಸಿದ್ದರಾಮಯ್ಯನವರು ಪ್ರಚಾರ ವೇಳೆಯಲ್ಲಿ ನಾಡಗೌಡರಿಗೆ ಆಯ್ಕೇ ಮಾಡಿ ವಿಧಾನಸಭೆಗೆ ಕಳುಹಿಸಿದರೆ ಮೂರನೇ ಮಹಡಿಯಲ್ಲಿ ಮಂತ್ರಿಯನ್ನಾಗಿ ಮಾಡುತ್ತೇವೆಂದು ಹೇಳಿ ಮಾತು ತಪ್ಪಿದ್ದಾರೆ, ಆದರೆ ಈ ಭಾರಿಯಾದರೂ ನಾಡಗೌಡರಿಗೆ ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಕಾಂಗ್ರೇಸ್ ಮುಖಂಡರಾದ ಪಿಂಟು ಸಾಲಿಮನಿ ಕಾಂಗ್ರೇಸ್ ಹೈಕಮಾಂಡಗೆ ಒತ್ತಾಯಿಸಿದ್ದಾರೆ.

ಪಟ್ಟಣದ ಶಾಸಕ ಸಿ ಎಸ್ ನಾಡಗೌಡರ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೇರೆ ಕ್ಷೇತ್ರದಲ್ಲಿನ ಶಾಸಕರು ತಮ್ಮ ಬೆಂಬಲಿಗರನ್ನು ಕರೆದುಕೊಂಡು ಸಚಿವ ಸ್ಥಾನಬೇಕು ಎಂದು ಹೋರಾಟ, ಲಾಬಿ ಮಾಡಿದ್ದನ್ನು ನಾವುಗಳು ಅನೇಕ ಸಾರಿ ನೋಡಿದ್ದೇವೆ, ಆದರೆ ನಮ್ಮ ಶಾಸಕರು ಸ್ವಾಬಿಮಾನಿಗಳು ಇಂದು ನಾವುಗಳು ಸ್ವಯಂ ಪ್ರೇರಿತವಾಗಿ, ಪತ್ರಿಕಾಓಷ್ಠಿ ನಡೆಸುತ್ತಿದ್ದೇವೆ, ಆದರಿಂದ ಸ್ವಾಬಿಮಾನಿ ಕಣಿಯಾದ ನಾಡಗೌಡರಿಗೆ ಸಚಿವ ಸಂಪುಟದಲ್ಲಿ ಉನ್ನತವಾದ ಹುದ್ದೇಯನ್ನು ನೀಡದ್ದಿದ್ದರೆ ಬೀದಿಗಳಿದು ನಾವು ಹೋರಾಟ ಮಾಡಲು ತಯಾರಿದ್ದೇವೆ ಅದಕ್ಕೇಲ್ಲಾ ಅನುವು ಮಾಡಿ ಕೋಡದೆ ಹೈಕಮಾಂಡ ನಾಡಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮುಖಂಡರಾದ ವೈ ಎಚ್, ವಿಜಯಕರ, ಅರವಿಂದ ಕೋಪ್ಪ ಮಾತನಾಡಿ ಸುಮಾರು ವರ್ಷಗಳ ಹಿಂದೆ ನಾಡಗೌಡರು ಬಂಗಾರೇಪ್ಪನ ಆಡಳಿತಾವದಿಯಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಇದೆ, ವಿಜಯಪುರ ಜಿಲ್ಲೇಯಲ್ಲಿ ಅನುಭವಿ ರಾಜಕಾರಣಿ, ಕಾಂಗ್ರೇಸ್ ಪಕ್ಷದ ಕಟ್ಟಾಳು, ಪಕ್ಷದಲ್ಲಿ ಅನೇಕ ಹುದ್ದೇಗಳನ್ನು ಅಲಂಕರಿಸಿದ್ದಾರೆ, ಇಂತಹ ಒಬ್ಬ ಹಿರಿಯ ರಾಜಕಾರಣಿಗೆ ಸಿದ್ದರಾಮಯ್ಯನವರು ಗುರುತಿಸಿ ತಮ್ಮ ಸಚಿವ ಸಂಪುಟದಲ್ಲಿ ಉನ್ನತವಾದ ಹುದ್ದೇಯನ್ನು ನೀಡಬೇಕು, ಮತ್ತು ನಮ್ಮ ಜಿಲ್ಲೇಯ ಉಸ್ತುವಾರಿನ್ನಾಗಿ ನೇಮಕ ಮಾಡಬೇಕು, ಅಂದಾಗಲೇ ನಮ್ಮ ಜಿಲ್ಲೇ ಅಷ್ಟೇ ಅಲ್ಲಾ ರಾಜ್ಯದ್ಯಂತ ಅಭಿವೃದ್ಧಿಯನ್ನು ಮಾಡುವ ತಾಕತ್ತು ನಾಡಗೌಡರಿಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ನ್ಯಾಯವಾದಿ ಎಸ್ ಎಸ್ ಮಾಲಗತ್ತಿ, ಶಿವಶೆಂಕರ ಹೀರೇಗೌಡರ, ವೈ ಎಚ್ ವಿಜಯಕರ, ಈ ಅಬ್ದುಲ್ ಗಪೂರ ಮಕಾಂದಾರ, ರಾಜು ರಾಯಗೊಂಡ, ವೆಂಕನಗೌಡ ಪಾಟೀಲ್ ಇನ್ನಿತರರು ಮಾತನಾಡಿದರು.

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಶಿವು ಶಿವುಪೂರೆ, ವಿರೇಶ ಹಡಲಗೇರಿ, ಕೆ ಕೆ ಬನ್ನೇಟ್ಟಿ, ಗೋಪಿ ಮಡಿವಾಳರ, ವೈ ವೈ ಚಲವಾದಿ, ಸಂತೋಷ ಚವ್ಹಾಣ, ದೇವೆಂದ್ರ ವಾಲಿಕಾರ, ಶ್ರೀಕಾಂತ ಚಲವಾದಿ, ಬಿ ಆರ್ ನಾಡಗೌಡರ, ಬೀರಪ್ಪ ಯರಝೇರಿ, ಸಿ ಎಸ್ ಕಾಕಂಡಕಿ, ನ್ಯಾಯವಾದಿಗಳಾದ ,ಎಮ್ ಎನ್ ಗುರಿಕಾರ, ಗೀರಿಶ ಬಿಜ್ಜೂರ, ಎಂ ಎಸ್ ನಾವದಗಿ, ಎಸ್ ಬಿ ಬಾಚಿಹಾಳ, ಎಂ ಎ ಮುದ್ದೇಬಿಹಾಳ, ಎಸ್ ಎಸ್ ಹೂಗಾರ, ವಿ ಜಿ ಮದರಕಲ್, ಕೆ ಎನ್ನ ಬಳೂತಿ, ನಾಗೇಶ ಬಜಂತ್ರಿ, ರಾಮು ಲಮಾಣಿ, ಸಂಗಮೇಶ ನಾಲತವಾಡ, ರುದ್ರಗೌಡ ಅಂಗಡಗೇರಿ, ಸುರೇಶ ಅಂಗಡಗೇರಿ, ಶರಣು ಚಲವಾದಿ, ಇನ್ನೀತರರು ಇದ್ದರು.