ನಾಡಗೌಡರನ್ನು ಹಾಡಿ ಹೊಗಳಿದ ಬಿಜೆಪಿ ಸಂಸದ ಕರಡಿ

ಸಿಂಧನೂರು.ಮಾ.೨೯- ಶಾಸಕ ವೆಂಟರಾವ ನಾಡಗೌಡರು ಜೆಡಿಎಸ್ ಪಕ್ಷದ ಶಾಸಕರಾಗಿದ್ದು, ಬಿಜೆಪಿಯ ರಾಜ್ಯ ಸರ್ಕಾರ ಇದ್ದರೂ ಸಹ ಅಧಿಕಾರ ವಿಷಯದಲ್ಲಿ ರಾಜಕೀಯ ಮಾಡದೆ ಎಲ್ಲರ ಜೊತೆ ಸ್ನೇಹದಿಂದ ನಡೆದುಕೊಳ್ಳುವ ಮೂಲಕ ಸಾಕಷ್ಟು ಅನುದಾನ ತಂದು, ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
ಅವರನ್ನು ನೋಡಿ ನಾವು ಕಲಿಯಬೇಕಾಗಿದ್ದು ಬಹಳಷ್ಟು ಇದೆ ಎಂದು ಬಿಜೆಪಿಯ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಜೆಡಿಎಸ್ ಶಾಸಕ ವೆಂಟರಾವ ನಾಡಗೌಡ ಅಭಿವೃದ್ಧಿ ಕೆಲಸಗಳು ಹಾಗೂ ಅವರ ಕಾರ್ಯ, ಸಾಧನೆಯ ಬಗ್ಗೆ ಗುಣ ಗಾನ ಮಾಡಿದರು.
ತಾಲೂಕಿನ ರೈತ ನಗರ ಕ್ಯಾಂಪ್‌ನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ ಹಂತ, ೩ ರಡಿಯಲ್ಲಿ ಬ್ಯಾಚ್, ೩ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮಾಜಿ ಪ್ರಧಾನ ಮಂತ್ರಿಯಾದ ವಾಜಪೇಯಿ ಅವರು ರಸ್ತೆಗಳ ಅಭಿವೃದ್ದಿ, ವಿಮಾನ ನಿಲ್ದಾಣ, ರೈಲ್ವೆ ಸೈನಿಕರ ಉಪಯೋಗಿಸುವ ವಸ್ತ್ರಗಳಿಗೆ ಉತ್ತೇಜನ ನೀಡಿ ನಮ್ಮ ವಸ್ತುಗಳನ್ನು ನಮ್ಮಲ್ಲಿ ತೈಯಾರಿಸುವದು ಇವುಗಳನ್ನು ಅಭಿವೃದ್ಧಿ ಪಡಿಸಲು ಕನಸು ಕಂಡಿದ್ದರು.
ಅವರ ಕನಸುಗಳನ್ನು ಪ್ರಧಾನಿ ಮೋದಿ ನೆನಸು ಮಾಡುವ ಮೂಲಕ ವಿಶ್ವ ನಾಯಕರಾಗಿ ಬೆಳೆದಿದ್ದಾರೆ ನಮ್ಮ ಕಡು ವೈರಿ ಪಾಕಿಸ್ತಾನದ ಜಪ ಸಹ ನಮ್ಮ ದೇಶದ ಪ್ರಧಾನಿಯಾಗಲಿ ಎಂದು ಭಯಸುತ್ತಿದ್ದಾರೆ ಎಂದರು.
ಕೇಂದ್ರ ಹಾಗೂ ರಾಜ್ಯ ಡಬಲ್ ಇಂಜಿನ್ ಸರ್ಕಾರ ಉತ್ತಮವಾಗಿ ಕೆಲಸ ಮಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸೋರಿಕೆಯನ್ನು ನಿಲ್ಲಿಸಲಾಗಿದೆ. ಕೃಷಿ ಸನ್ಮಾನ ಯೋಜನೆ ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಲಾಗಿದೆ. ಮಸ್ಕಿ ಹಾಗೂ ಸಿಂಧನೂರಿನಲ್ಲಿ ಬೈಪಾಸ್ ರಸ್ತೆಯನ್ನು ಮಾಡಲಾಗುತ್ತೇದೆ. ಜೂನ್‌ನಲ್ಲಿ ಸಿಂಧನೂರಿಗೆ ರೈಲು ಬರಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಾನು ಸಂಗಣ್ಣ ಕರಡಿ ಸತತ ಪ್ರಯತ್ನದ ಫಲವಾಗಿ ರಸ್ತೆ ಕಾಮಗಾರಿಗೆ ಇಂದು ಭೂಮಿ ಪೂಜೆಯನ್ನು ನೇರವರಿಸಲಾಗಿದೆ ಬಹುದಿನದ ಜನರ ಬೇಡಿಕೆಯನ್ನು ಈಡೇರಿಸುವ ಮೂಲಕ ಜನರ ಕನಸು ನನಸು ಮಾಡಲಾಗಿದೆ ಎಂದು ಶಾಸಕ ವೆಂಟರಾವ ನಾಡಗೌಡ ಮಾತನಾಡಿದರು ನೀರು ಬರವದಿಲ್ಲ ಬೆಳೆ ಒಣಗುತ್ತೇದೆ ಎಂದು ಕಾಂಗ್ರೆಸ ಮುಖಂಡರು ಹೊರಾಟ ಮಾಡಿ ರೈತರನ್ನು ದಾರಿ ತಪ್ಪಿಸಲು ಪ್ರಯತ್ನ ಮಾಡಿದರು. ಎ. ೧೦ ರ ತನಕ ಕಾಲುವೆಗೆ ನೀರು ಬಿಟ್ಟು ರೈತರ ಬೆಳೆ ರಕ್ಷಣೆ ಮಾಡಲಾಗುತ್ತಿದೆ ಯಾವದೆ ಕಾರಣಕ್ಕೂ ರೈತರು ಆತಂಕ ಪಡಬಾರದು ಎಂದು ಶಾಸಕರು ರೈತರಲ್ಲಿ ಮನವಿ ಮಾಡಿಕೊಂಡರು.
ಕೆಪೆಕ್ ಅಧ್ಯಕ್ಷರಾದ ಕೆ.ವಿರೂಪಾಕ್ಷಪ್ಪ, ಜೆಡಿಎಸ್ ತಾಲುಕಾಧ್ಯಕ್ಷರಾದ ಬಸವರಾಜ ನಾಡಗೌಡ, ಜಿ.ಪ.ಮಾಜಿ ಸದಸ್ಯರಾದ ಶಿವನಗೌಡ ಗೋರೆಬಾಳ, ಅಮರೇಗೌಡ ವಿರುಪಾಪುರ, ಮುಖಂಡರಾದ ಸಾಂಬಶಿವ ರೆಡ್ಡಿ, ಹರಿಕೀಶೊರ ರೆಡ್ಡಿ, ಪಲಮೇಶಪ್ಪ, ಸಿದ್ಧು ಹೂಗಾರ, ರಾಮಸುಬ್ಬ ರೆಡ್ಡಿ, ಕರಿಯಪ್ಪ, ಕಾಸಿಂಸಾಬ ಅಂಗಡಿ, ಟಿ.ವೆಂಟರೆಡ್ಡಿ, ಶಿವ ಮಾನಪ್ಪ, ಭಾಗ್ಯಮ್ಮ, ಸೂರ್ಯ ನಾರಾಯಣ, ವೆಂಕೋಬಣ್ಣ ಕಲ್ಲೂರ, ಜಕ್ಕರಾಯ, ಇಂಜನಿಯರಿಂಗ್ ನಂದಿನಿ ಸೇರಿದಂತೆ ಇತರರು ಇದ್ದರು.