ನಾಡಗೇರ ಹನುಮಾನ ಮಂದಿರದಲ್ಲಿ ಕಾರ್ತಿಕ ಮಹೋತ್ಸವ ಸಂಪನ್ನ

ಕೆಂಭಾವಿ:ಡಿ.26:ಪಟ್ಟಣದ ನಾಡಿಗೇರ ಹನುಮಾನ ದೇವಸ್ಥಾನದಲ್ಲಿ ಸೋಮವಾರ ಹನುಮದ್ ವೃತ ಹಾಗೂ ಕಾರ್ತಿಕ ಮಹೋತ್ಸವದ ಸಮಾರೋಪ ಸಮಾರಂಭದ ನಿಮಿತ್ಯ ನಡೆದ ಪವಮಾನ ಹೋಮ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಹಿಂದೂ ಆಚರಣೆಯ ಪದ್ಧತಿಗಳಲ್ಲಿ ಹೋಮ ಹವನಗಳಿಗೆ ಅತೀ ಪ್ರಾಮುಖ್ಯತೆ ನೀಡಲಾಗಿದೆ.
ಹೋಮಗಳಲ್ಲಿ ಅತ್ಯಂತ ಶ್ರೇಷ್ಠವಾದ ಹೋಮ ಪವಮಾನ ಹೋಮ. ವಾಯು ದೇವರ ಮೂಲಕ ನೇರವಾಗಿ ಭಗವಂತನಿಗೆ ಹವಿಸ್ಸಿನ ಮೂಲಕ ನಾವು ನೀಡುವ ಪ್ರತಿಯೊಂದು ಹೋಮ ದ್ರವ್ಯಗಳಿಮದ ಭಗವಂತ ತೃಪ್ತಿಯಾಗಿ ನಮಗೆ ಆಯುಷ್ಯ ಆರೋಗ್ಯ ಸಂಪತ್ತು ಕರಣಿಸುತ್ತಾನೆ ಎಂದು ಹೇಳಿದರು.

ಸಂಜೀವರಾವ ಕುಲಕರ್ಣಿ ದಂಪತಿಯಿಂದ ಪವಮಾನ ಹೋಮ, ವಿಜಯಾಚಾರ್ಯ ಪುರೋಹಿತ ನೇತೃತ್ವದಲ್ಲಿ ವಾಯುಸ್ತುತಿ ಪುನ:ಶ್ಚರಣ, ಅಭಿಷೇಕ, ವಿಶೇಷ ಅಲಂಕಾರ ನೆರವೇರಿತು. ವಿಶ್ವನಾಥಾಚಾರ್ಯ, ರಾಘವೇಂದ್ರಾಚಾರ್ಯ ದೇವದುರ್ಗ, ರಘುನಾಥರಾವ ದೇಶಪಾಂಡೆ, ಮುರಲೀಧರರಾವ ದೇಶಪಾಂಡೆ, ವಿಠ್ಠಲರಾವ ದೇಶಪಾಂಡೆ, ಬಾಳಕೃಷ್ಣರಾವ ಕುಲಕರ್ಣಿ, ವಾಮನರಾವ ದೇಶಪಾಂಡೆ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಬೀದರ ಜಿಲ್ಲಾ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಹರಿ ದೇಶಪಾಂಡೆ, ಪವನ, ಪ್ರವೀಣ ಸೇರಿದಂತೆ ಹಲವರಿದ್ದರು.