ನಾಡಕಚೇರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಶಿವಶಂಕರ್

ವಿಜಯಪುರ, ಜು.೧೦-ಪಟ್ಟಣದ ಹಳೆಯ ನಾಡ ಕಛೇರಿ ಶಿಥಿಲಾ ವ್ಯವಸ್ಥೆಯಾದ ಹಿನ್ನೆಲೆ ಇಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್ ದೇವನಹಳ್ಳಿ ಮುಖ್ಯರಸ್ತೆಯಲ್ಲಿರುವ ನೂತನ ನಾಡಕಛೇರಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಪಟ್ಟಣದಲ್ಲಿರುವ ನಾಡ ಕಛೇರಿಯು ಸಂಪೂರ್ಣ ಶೀತಿಲವಾಗಿರುವುದರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ದೇವನಹಳ್ಳಿ ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಅಂತದಲ್ಲಿರುವ ನಾಡಕಛೇರಿಯ ಕಾಮಗಾರಿ ಪೂರ್ಣಗೊಂಡಿಂದು ಉದ್ಘಾಟಿಸಲು ದಿನಾಂಕ ನಿಗದಿಮಾಡಲು ಬೇಟಿ ನೀಡಲಾಯಿತು ಎಂದರು.
ಪಟ್ಟಣದ ಅಮಾನೀಕೆರೆಗೆ ಬೇಟಿ ನೀಡಿ ಕೆರೆ ಕೊಡಿ ಪರೀಶಿಲನೆ ಹಾಗೂ ಪುರಸಭೆಗೆ ಬೇಟಿ ನೀಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅಧ್ಯಕ್ಷರು ಬಳಿ ಚರ್ಚಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ತಾಲೂಕು ದಂಡಧಿಕಾರಿ ಶಿವರಾಜ್, ನಾಡಕಛೇರಿಯ ಕಂದಾಯ ಅಧಿಕಾರಿಗಳಾದ ಸತ್ಯನಾರಾಯಣ, ಸುನೀಲ್, ಕುಮಾರ್, ಸಿಬ್ಬಂದಿ ಹಾಗೂ ಪುರಸಭಾ ಅಧ್ಯಕ್ಷ ವಿಮಾಲ ಬಸವರಾಜ್, ಉಪಾಧ್ಯಕ್ಷ ಕೇಶವಪ್ಪ, ಮುಖ್ಯಾಧಿಕಾರಿ ಮಹೋನ್ ಕುಮಾರ್, ಸದಸ್ಯರಾದ ಎಂ.ಸತೀಶ್ ಕುಮಾರ್, ಅನೀಫ್, ರಾಮು, ನಾರಾಯಣಸ್ವಾಮಿ, ಬೈರೇಗೌಡ, ಶ್ರೀರಾಮಪ್ಪ, ಶಿಲ್ಪ ಅಜೀತ್ ಕುಮಾರ್ ಪುರಸಭಾ ಸಿಬ್ಬಂದಿ ಹಾಜರಿದ್ದರು.