ನಾಡಕಚೇರಿಯ ತಂತ್ರಾಂಶ ಸಮಸ್ಯೆ ಬಗೆಹರಿಸುವಂತೆ ಖಂಡೀಕೇರಿ ಗ್ರಾಮಸ್ಥರ ಆಗ್ರಹ

ಔರಾದ :ನ.4: ತಾಲೂಕಿನ ಖಂಡೀಕೇರಿ ಗ್ರಾಮದ ನಾಗರೀಕರು ಸರಕಾರ ಸೌಲಭ್ಯಗಳನ್ನು ಪಡೆಯಲು ನಾಡಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಾದರೇ , ನಾಡ ಕಚೇರಿಯ ತಂತ್ರಾಂಶದಲ್ಲಿ ಖಂಡೀಕೇರಿ ಗ್ರಾಮ ಬಿಟ್ಟು ಮಹಾಡೋಣಗಾಂವ್ ಎಂದು ತೋರಿಸುತ್ತಿರುವುದರಿಂದ ಖಂಡೀಕೇರಿ ಗ್ರಾಮದ ಜನತೆಗೆ ಯಾವುದೇ ಪ್ರಮಾಣ ಪತ್ರಗಳನ್ನು ಪಡೆಯಲು ಆಗದೇ ಸಮಸ್ಯೆಯಾಗಿ ಇದ್ಭವಿಸಿದ್ದು, ಶುಕ್ರವಾರ ಈ ಸಮಸ್ಯೆ ಬೇಗನೇ ಬಹೆಹರಿಸುವಂತೆ ಆಗೃಹಿಸಿ ಖಂಡೀಕೇರಿ ಗ್ರಾಮಸ್ಥರು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಮನವಿ ನೀಡಿದ ಪ್ರಸಂಗ ಜರುಗಿದೆ.

ಇಂದಿನ ದಿನಗಳಲ್ಲಿ ಸರಕಾರದ ಸೌಲಭ್ಯ ಪಡೆಯಬೇಕಾದರೇ ಎಲ್ಲ ಆನ್ ಲೈನ್ ಪ್ರತಿಗಳು ಬೇಕು. ಇದಕ್ಕಾಗಿ ಔರಾದ ನಾಡಕಚೇರಿಗೆ ಹೋಗಿ ಅರ್ಜಿ ಹಾಕಬೇಕಾದರೇ ಖಂಡಿಕೇರಿ ಗ್ರಾಮ ಎಂದು ಹೇಳಿ ಅರ್ಜಿ ಅಪ್ ಲೋಡ್ ಮಾಡುವಾಗ ಮಹಾಡೋಣಗಾಂವ್ ಎಂದು ತೋರಿಸುತ್ತಿರುವುದರಿಂದ ಅರ್ಜಿಗಳು ಅಪ್ ಲೋಡ್ ಆಗದೇ ಈ ಗ್ರಾಮದ ಜನರು ಕಷ್ಟದ ದಿನಗಳನ್ನು ಎದುರಿಸುವಂತಾಗಿದೆ. ಕೂಡಲೇ ಸಂಬ್ಬಂಧಪಟ್ಟ ಅಧಿಕಾರಿಗಳು ಗಮನವಹಿಸಿ ಈ ಸಮಸ್ಯೆ ಬಹೆಗರಿಸುವಂತೆ ಖಂಡೀಕೇರಿ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಧರ್ ಗಡದೆ, ಮಾರುತಿ ಗಡದೆ, ನರಸಿಂಗ್,ಶಿವಾಜಿ ಜಾಧವ್, ತ್ರಿಮುಖ ಸ್ವಾಮಿ, ರಮೇಶ ಪಾಟೀಲ್, ಲಕ್ಷಣ, ಅಶೋಕ, ವಿಠ್ಠಲ್, ರಹೀಮ್ ಮೌಲಾಸಾಬ್, ಅನೀಲ್ ಭಾಲ್ಕೆ, ಕಾರ್ತಿಕ ಸ್ವಾಮಿ, ರಾಜಕುಮಾರ್ ಹುಲ್ಯಾಳೆ, , ಬಸಪ್ಪ, ಸಂಜು, ಸಂತೋಷ, ಇತರರಿದ್ದರು.