ನಾಟಿ ಸ್ಟೈಲ್ ಮಟನ್ ಚಾಪ್ಸ್

ಬೇಕಾಗುವ ವಿಧಾನ
*ಮಟನ್ – ೩/೪ ಕೆ.ಜಿ
*ಗರಂ ಮಸಾಲ – ೧ ಚಮಚ
*ಎಣ್ಣೆ – ೧೦೦ ಮಿ.ಲೀ
*ಅರಿಶಿಣ ಪುಡಿ – ೧/೨ ಚಮಚ
*ಮೆಣಸಿನಪುಡಿ – ೧ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಈರುಳ್ಳಿ – ೧೫೦ ಗ್ರಾಂ
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – ೨ ಚಮಚ
*ಟೊಮೆಟೊ ಪೇಸ್ಟ್ – ೨೫೦ ಗ್ರಾಂ
*ಕೊತ್ತಂಬರಿ / ಪುದೀನ ಪೇಸ್ಟ್ – ೩ ಚಮಚ

ಮಾಡುವ ವಿಧಾನ :

ಮಟನ್‌ನ್ನು ಸ್ವಲ್ಪ ನೀರು, ಉಪ್ಪು ಹಾಕಿ ಬೇಯಿಸಿಡಿ. ಒಂದು ಅಗಲವಾದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಸಣ್ಣಗೆ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಕರಿಯಿರಿ. ಇದರೊಂದಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಅರಿಶಿಣ ಪುಡಿ ಹಾಗೂ ಉಪ್ಪುನ್ನು ಹಾಕಿ, ಕೊತ್ತಂಬರಿ-ಪುದೀನ ಸೊಪ್ಪಿನ ಪೇಸ್ಟ್‌ನ್ನು ಹಾಕಿ ಮೆಣಸಿನ ಪುಡಿ, ಗರಂ ಮಸಾಲ ಪೌಡರ್ ಹಾಕಿ ಫ್ರೈ ಮಾಡಿಕೊಳ್ಳಿ. ರುಬ್ಬಿದ ಟೊಮೆಟೊ ಪೇಸ್ಟನ್ನು ಹಾಕಿ ಚೆನ್ನಾಗಿ ಫ್ರೈ ಮಟನ್ ಹದವಾಗಿ ಬೇಯಿಸಿದರೆ ಮಟನ್ ಚಾಪ್ಸ್ ರೆಡಿ.