ನಾಟಕ, ಸಾಹಿತ್ಯ, ಜಾನಪದಕ್ಕೆ ಕುಕನೂರು ತಾಲೂಕಿನ ಕೊಡುಗೆ ಅಪಾರ

ಕುಕನೂರು ನ 15 : ನಾಟಕ, ಸಾಹಿತ್ಯ, ಜಾನಪದಕ್ಕೆ ಕುಕನೂರು ತಾಲೂಕಿನ ಕೊಡುಗೆ ಅಪಾರ ಎಂದು ಶಾಸಕ ಹಾಲಪ್ಪ ಆಚಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ ಇವರಿಂದ ಹಮ್ಮಿಕೊಂಡ `ಗುಂಗು ಹಿಡಿಶ್ಯಾಳ ಗಂಗಿ” ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ನಾಟಕ, ಸಾಹಿತ್ಯ, ಕಲೆ ಹಾಗೂ ಜಾನಪದ ಪರಂಪರೆಯಲ್ಲಿ ಮುಂಚೋಣಿಯಲ್ಲಿದೆ ,ಕೋವಿಡ್ ಸಂಕಷ್ಟದಲ್ಲಿ ರಾಜ್ಯ ಸೇರಿದಂತೆ ದೇಶದಲ್ಲಿ ನಾಟಕ ಕಲಾವಿದರ ಜೀವನ ತುಂಬಾ ಕಷ್ಟಕರವಾಗಿದೆ. ಕೊರೊನಾ ಹಾವಳಿ ನಿಂತ್ತಿದ್ದು ಕಲಾವಿದರಿಗೆ ಮರುಜೀವ ಬಂದತ್ತಾಗಿದೆ. ಎಲ್ಲರು ನಾಟಕವನ್ನು ವಿಕ್ಷಿಸಿ ಕಲಾವಿದರಿಗೆ ಪೋತ್ಸಾಹ ಮುಖ್ಯವಾಗಿದೆ ಅವರ ಬೆನ್ನಿಗೆ ನಾವು ಮತ್ತು ಸಾರ್ವಜನಿಕರು ನಿಲ್ಲಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ್ ಮಾತನಾಡಿ, ನಾಟಕ ಪಟ್ಟಣದಲ್ಲಿ ಪ್ರಾರಂಭವಾಗಿರುವದು ಶುಭ ತಂದತ್ತಾಗಿದೆ. ಕೊರೊನಾದಿಂದ ಮನೆಯಲ್ಲಿ ಕಳೇದ 7ತಿಂಗಳಿಂದ ಇದ್ದು ಎಲ್ಲರಿಗೂ ಹಾಗೂ ಕಲಾವಿದರಿಗೂ ಸಮಸ್ಯೆಯಾಗಿದೆ. ಕಲೆ,ಸಾಹಿತ್ಯ, ಪರಂಪರೆ ಮುಂದುವರೇಯಬೇಕಾದರೆ ನಾಟಕದ ರಂಗಭೂಮಿಗೆ ಬಲ ನೀಡಬೇಕಾಗಿದೆ ಎಂದು ಹೇಳಿದರು.
ಶ್ರೀಮಠದ ಮಹಾದೇವ ದೇವರು ಆರ್ಶೀವಚನ ನೀಡಿದರು. ಪ.ಪಂ ಅಧ್ಯಕ್ಷ ಶಂಭು ಜೋಳದ್ ಅಧ್ಯಕ್ಷತೆವಹಿಸಿದ್ದರು. ಮಾಜಿ ಜಿ.ಪಂ ಸದಸ್ಯ ಈರಪ್ಪ ಕುಡಗುಂಟಿ, ಶರಣಪ್ಪ ಮಂಡಗೇರಿ, ಡಿವೈಎಸ್ಪಿ ವೆಂಕಟಪ್ಪ ನಾಯಕ್, ಕೃಷಿ ಅಧಿಕಾರಿ ಶರಣಪ್ಪ ಗುಂಗಾಡಿ, ಮುಖಂಡರಾದ ಬಸವನಗೌಡ ತೊಂಡಿಹಾಳ, ಇಬ್ರಾನ್ ಗದ್ವಾಲ್, ಶಿವಕುಮಾರ ನಾಗಲಾಪೂರಮಠ, ಬಸವರಾಜ ಹಾಳಕೇರಿ, ಶಿವಶಂಕ್ರಯ್ಯ ಲಕ್ಕುಂಡಿಮಠ, ಹಿರಿಯ ಕಲಾವಿದ ಬಾಬಣ್ಣ ಕಲ್ಮನಿ, ಸಿದ್ದಲಿಂಗಯ್ಯ ಬಂಡಿ, ವೀರಣ್ಣ ಅಣ್ಣಿಗೇರಿ,ಕಳಕನಗೌಡ ತೊಂಡಿಹಾಳ, ವಿನಾಯಕ ಬೇನಳ್ಳಿ, ಕವಿ ಬಸವರಾಜ ಪಂಚಕಲ್ ಸೇರಿದಂತೆ ಅನೇಕರು ಇದ್ದರು.