ವಿಜಯಪುರ :ಜೂ.3: ನಾಟಕ ವೀಕ್ಷಣೆಯಿಂದ ವ್ಯಕ್ತಿಯ ವ್ಯಕ್ತಿತ್ವ ಬದಲಾಣೆಯಾಗುತ್ತದೆ ಎಂದು ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು
ನವಬಾಗ ರಸ್ತೆ ಬಬಲೇಶ್ವರ ನಾಕಾ ಹತ್ತಿರ ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರ ಇವರ ಸಹಯೋಗದಲ್ಲಿ ದಿ: ಮಹೇಶ ಕಲ್ಲೋಳ ವಿರಚಿತ ” ಮನಸ್ಸಿದ್ದರೆ ಮಾರಿನೋಡು ” ನೆನಪಾದರೆ ಫೆÇೀನ ಮಾಡು ” ಎಂಬ ಸಾಮಾಜಿಕ ನಾಟಕ ಪ್ರಾರಂಭೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಹಳ್ಳಿಯ ಜಾತ್ರೆ ಹಾಗು ಉತ್ಸವಗಳಲ್ಲಿ ನಾಟಕ ಪ್ರದರ್ಶನ ಸ್ಥಳಿಯ ಕಲಾವಿದರು ಮಾಡಿತ್ತಿದ್ದರು ಆ ಉತ್ಸಾಹ ಈಗ ಕಾಣುತ್ತಿಲ್ಲ.ಗುಣಮಟ್ಟದ ನಾಟಕ ಬರೆಯುವ ಸಾಹಿತಿಗಳ ಕೊರತೆ ಕಾಣುತ್ತೇವೆ. ಉತ್ತಮ ಪ್ರದರ್ಶನ ನೀಡುವ ನಾಟಕಗಳಿಗೆ ಇಂದಿಗೂ ಪ್ರೇಕ್ಷಕರ ಬೆಂಬಲವಿದೆ ಎಂದರು.
ನಾಟಕದ ಉದ್ಘಾಟಿಸಿದ ವಿಜಯಪುರ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ ಭಾರತೀಯ ನಾಟಕಗಳ ಇತಿಹಾಸ ಪ್ರಾಚೀನ ಕಾಲದ್ದಾಗಿದೆ. ಬಯಲಾಟ , ಡೊಡ್ಡಾಟ , ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ರೀತಿಯ ನಾಟಕ ಸಂಪ್ರದಾಯ ಕಾಣುತ್ತೇವೆ. ಶೆಕ್ಷಪೀಯರ ನಾಟಕಗಳು ವಿಶ್ವ ಪ್ರಸಿದ್ಧವಾಗಿದ್ದವು. ಇತ್ತೀಚಿನ ಕಂಪನಿ ನಾಟಕಗಳು ಜನರಿಗೆ ಮನರಂಜನೆಯ ನೀಡುತ್ತಿವೆ. ಆದರೆ ನಾಟಕ ವೀಕ್ಷಣೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವದು ವಿಷಾದನೀಯ ಸಂಗತಿ. ಯುವ ಪೀಳಿಗೆಗೆ ನಾಟಕದ ಅಭಿರುಚಿ ಇಲ್ಲದೆ ಇರುವದು ಕಳವಳಕಾರಿಯಾಗಿದೆ ಎಂದರು.
ಕಾಯ9ನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ ನಾಟಕಗಳ ತವರುಮನೆ ವಿಜಯಪುರ ಹಂದಿಗನೂರ ಸಿದ್ರಾಮಪ್ಪ ಶ್ರೀರಂಗ , ಮುಂತಾದವರರು ಶ್ರೇಷ್ಠ ನಾಟಕಕಾರರಾಗಿದ್ದಾರೆ . ಇಂದು ಕಂಪನಿ ನಾಟಕಗಳನ್ನು ಪ್ರತಿ ಜಿಲ್ಲೆ ,ತಾಲೂಕ ಗ್ರಾಮೀಣ ಪ್ರದೇಶದಲ್ಲಿ ಪ್ರದರ್ಶನ ನೀಡುತ್ತಿವೆ .ಆದರೆ ಕಂಪೆನಿ ನಾಟಕಗಳು ತುಂಬ ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ. ರಂಗಭೂಮಿ ಕಲಾವಿದರು ತರಬೇತಿ ಪಡೆದು ಗುಣಮಟ್ಟದ ನಾಟಕ ನೀಡಿ ರಂಗಭೂಮಿ ಕಲೆಯ ಮೌಲ್ಯ ಕಾಪಾಡಬೇಕೆಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್ ಬಿ ಶೇಖ್ ಮಾತನಾಡಿದರು. . ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ ನಾಗರಾಜ. ಸಂಶೋಧಕ ಪೆÇ್ರ, ಎ ಎಲ್ ನಾಗೂರ ಕಾಯ9ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪ್ರಕಾಶ ಬೆನ್ನೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಉಪನ್ಯಾಸಕ ಸುರೇಶ ಜತ್ತಿ ನಿರೂಪಿಸಿದರು. ಮಂಟೇಶ ದಂಡಿನ ಮಹಾದೇವಪ್ಪ ಹುಣಶ್ಯಾಳ ಅತಿಥಿಗಳನ್ನು ಗೌರವಿಸಿದರು
ರಾಜು ತಾಳಿಕೋಟಿ ಎಸ್ ಎಮ್ ಖೇಡಗಿ ರವಿ ಕಿತ್ತೂರ ರಾಜೇಸಾಬ ಶಿವನಗುತ್ತಿನ ಹರೀಶ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.