ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದು ಶ್ಲಾಘನೀಯ

ರಾಯಚೂರು,ಮಾ.೨೭- ವಿಶ್ವ ರಂಗ ದಿನಾಚರಣೆ ಅಂಗವಾಗಿ ಇಂದು ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ರಂಗಭೂಮಿಯ ಕಲಾವಿದ ಮಂಜುನಾಥ ಕುಂಟನಾಳ ಹೇಳಿದರು.
ನಗರದ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಸ್ನೇಹ ಸಾಂಸ್ಕೃತಿಕ ಕಲಾ ಬಳಗ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಹಾಸ್ಯಮಯ ನಾಟಕ ಕಳ್ಳ ಗುರು, ಸುಳ್ಳಶಿಷ್ಯ ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಟಕ ಅಕಾಡೆಮಿ ಹಾಗೂ ಸ್ನೇಹ ಸಾಂಸ್ಕೃತಿಕ ಕಲಾ ಬಳಗ ವತಿಯಿಂದ ಇಂದು ನಾಟಕವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ, ಜಿಲ್ಲೆಯು ನಾಟಕ, ಕಲಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ರಂಗಭೂಮಿಯಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ, ರಂಗಭೂಮಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕಾಲಿಟ್ಟು ನಾಡಿನ ಸಂಸ್ಕೃತಿಯನ್ನು ಮುನ್ನೆಡಿಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಂಗ ನಿದೇರ್ಶಕ ಪ್ರವಿಣ್‌ರೆಡ್ಡಿ ಗುಂಜಳ್ಳಿ, ಅಣಿವೀರಯ್ಯ, ನಾಗರಾಜ ಭೋವಿನ್, ಪರ್ವತ್‌ರೆಡ್ಡಿ, ಬಾಗ್ಲಿ ಮಲ್ಲಪ್ಪ, ವಿರುಪಾಕ್ಷಿ, ಗಿರಿಮಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.