ನಾಟಕ ಕ್ಷೇತ್ರದಲ್ಲಿಉಜ್ವಲವಾಗಿ ಬೆಳೆದ ಹೆಸರು ರಾಮಕೃಷ್ಣಮಾಚಾರ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.23: ನಗರದ ಧರ್ಮವರಂ ಮೆಮೊರಿ ಎಂಡೋ ಮೆಂಟ್,   ಡಿಆರ್ ಕೆ ರಂಗಸಿರಿ ಸಹಯೋಗದಲ್ಲಿ ಧರ್ಮವರಂ ಕೃಷ್ಣಮಾಚಾರ್ಯರರ  170ನೇ ಹುಟ್ಟುಹಬ್ಬವನ್ನ ಡಿ.ಆರ್.ಕೆ ಯಲ್ಲಿ ನಿನ್ನೆ ಸಂಜೆ  ಚರಿಸಲಾಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಧರ್ಮಾವರಂ ರಾಮಕೃಷ್ಣಮಾಚಾರ್ಯ ಸಾಂಸ್ಕೃತಿಕ ಪರಂಪರೆಯ ಹೆಜ್ಜೆಗಳು ಎನ್ನುವಂತಹ ವಿಷಯವನ್ನು ಕುರಿತು ಉಪನ್ಯಾಸವನ್ನು ನೀಡಿದರು. ವಿ.ಎಸ್. ಕೆ. ವಿವಿಯ ರಿಜಿಸ್ಟ್ರಾರ್  ಡಾ. ಎಚ್. ತಿಪ್ಪೇಸ್ವಾಮಿ ಅವರು ಮಾತನಾಡಿ.  ಕೃಷ್ಣಮಾಚಾರ್ಯ ಅವರು  ಕರ್ನಾಟಕ ಮತ್ತು ಆಂಧ್ರ ರಂಗಭೂಮಿಯ ನಾಟಕ ರಂಗಭೂಮಿಯಲ್ಲಿ ತಮ್ಮದೇ ಆದ ಚಾಪನ್ನ ಒತ್ತಿ ಈ ಭಾಗದ ರಂಗ ಭೂಮಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವವಾದಕಾರ್ಯವನ್ನು ಕೈಗೊಂಡಿದ್ದರು.
ಡಿ ಆರ್ ಕೆ ಎನ್ನುವ ಹೆಸರು ಮತ್ತು ಸ್ಥಳದಲ್ಲಿ ಒಂದು ಶಕ್ತಿ ಇದೆ ಸಂಗೀತ ನಾಟಕ ನೃತ್ಯ ಇದರ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು ಮುಂದಿನ ಪೀಳಿಗೆಗೆ ಹೊಸ ಹೊಸ ವಿಷಯ ಮತ್ತು ಜವಾಬ್ದಾರಿಯನ್ನು ನೀಡಬೇಕು ಎಂದು ಡಿ. ಮಹೇಂದ್ರ ನಾಥ್ ವಕೀಲರು ಹೇಳಿದರು.
ವೇದಿಕೆ ಮೇಲೆ ಹಿರಿಯ ಕಲಾವಿದರಾದ ವೆಂಕೋಬ ಆಚಾರಿ ಲಾಲ್ ರೆಡ್ಡಿ ಉಪಸ್ಥಿತರಿದ್ದರು
ನಂತರ ಶ್ರೀ ಗುಡದೂರು ರಾಘವೇಂದ್ರ ಅವರು ಸುಗಮ ಸಂಗೀತವನ್ನು ನೆರವೇರಿಸಿಕೊಟ್ಟರು ತಬಲಾದಲ್ಲಿ ವಿಜಯಕುಮಾರ್ ಸಾತ್ ನೀಡಿದರು ನಂತರ ಅಭಿಷೇಕ್ ಕೆ ಸಿ ಸುಂಕಣ್ಣ ಸಂಗಡಿಗರಿಂದ ಸಮೂಹ ನೃತ್ಯ ವನ್ನು ನೆರವೇರಿಸಿಕೊಟ್ಟರು ಕಾರ್ಯಕ್ರಮದ ನಿರೂಪಣೆ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಸ್ವಾಗತ ರವಿಕಿರಣ್, ಪ್ರಾರ್ಥನೆ ವಿಷ್ಣು ಹಡಪದ,  ವಂದನಾರ್ಪಣೆ ಕಾಳಿಂಗ ನೆರವೇರಿಸಿದರು.