ನಾಟಕ ಕಲೆಯು ನಮ್ಮ ಬದುಕಿನ ಅವಿಭಾಜ್ಯ ಅಂಗ


ಸಂಜೆವಾಣಿ ವಾರ್ತೆ
ಸಂಡೂರು:ಡಿ:22: ನಾಟಕ ಕಲೆಯು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ, ಸಿನೆಮಾಗಳು ಅನೇಕ ಮರು ಚಿತ್ರಣಗಳ ಮೂಲಕ ತೋರಿಸುವಂತಹದ್ದು, ಅದರೆ ನಾಟಕ ನೇರವಾಗಿ ಪ್ರೇಕ್ಷಕನ ಎದುರಿಗೆ ಒಂದೇ ಬಾರಿ ತೋರಿಸುವ ಮೂಲಕ ಕಲೆಯ ಪ್ರದರ್ಶನದ ಜೊತೆಗೆ ಮೌಲ್ಯವನ್ನು ತಿಳಿಸುವಂತಹ ಬಹುದೊಡ್ಡ ಮಾಧ್ಯಮವಾಗಿದೆ ಎಂದು  ನಾಡೋಜ ವಿ.ಟಿ. ಕಾಳೇ ತಿಳಿಸಿದರು.
ಅವರು ಪಟ್ಟಣದ ಎ.ಪಿ.ಎಂ.ಸಿ. ಸರ್ಕಾರಿ ಪ್ರೌಢಶಾಲೆಯ ಅವರಣದಲ್ಲಿ ವೆಸ್ಕೋ ಗಣಿ ಕಂಪನಿ ಹಾಗೂ ಎಸ್.ಪಿ.ಎಸ್. ಬ್ಯಾಂಕ್ ಸಹಯೋಗದಲ್ಲಿ ಡಾ. ಚಂದ್ರಶೇಖರ್ ಕಂಬಾರ ರಚಿಸಿದ ಹುಲಿಯ ನೆರಳು , ನಿರ್ದೇಶನ ಕೆ.ಜಿ. ಕೃಷ್ಣಮೂರ್ತಿ ಮತ್ತು ಮೂಲ ಇಂಗ್ಲೀಷ್ ನಾಟಕವಾದ ಲೂಯಿ ನಕೋಶಿ ಎಂಬ ನಾಟಕದ ಅನುವಾದ ಮಾಡಿದ ನಟರಾಜ ಹೊನ್ನವಳ್ಳಿ, ಶ್ವೇತಾರಾಣಿ ಹೆಚ್.ಕೆ. ನಿರ್ದೇಶನದ ಆ ಲಯ ಈ ಲಯ ಎನ್ನುವ ಎರಡು ನಾಟಕ ಪ್ರದರ್ಶನಗಳನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನೀನಾಸಂ ಹೆಗ್ಗೋಡು(ಸಾಗರ) ಅಭಿನಯಿಸಿದ ಕಲಾವಿದರಾದ ವೇಣು ಬೊಮ್ಮನಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆ, ದೇವರಾಜ ತುಮಕೂರು ಜಿಲ್ಲೆ ಗುಬ್ಬಿ, ರಂಜಿತ್ ಶೆಟ್ಟಿ ಉಡುಪಿ, ಮದನ್ ಬೆಂಗಳೂರು, ಅಂಕಿತ ಸಾಗರ, ದುಂಡೇಶ್ ಹಿರೇಮಠ ಧಾರವಾಡ, ಮಮತ ಕಲ್ಮಕಾರ ದಕ್ಷಿಣ ಕನ್ನಡ, ಆಶೋಕ್ ಮೈಸೂರು, ಸಂಗೀತ ಧರ್ಮಸ್ಥಳ, ನವೀನ್ ರಂಗಭಾರತಿ ಹೂವಿನ ಹಡಗಲಿ, ಉತ್ತಮವಾದ ಪ್ರದರ್ಶನ ನೀಡಿದರು,
ವ್ಯವಸ್ಥಾಪಕರಾದ ಮಂಜುನಾಥ ಹಿರೇಮಠ ಅವರು ಉತ್ತಮ ರೀತಿಯಲ್ಲಿ ನಾಟಕದಲ್ಲಿ ಯಾವುದೇ ರೀತಿಯಲ್ಲಿ ಪ್ರೇಕ್ಷಕರಿಗೆ ಸಂತಸ ಉಂಟುಮಾಡುವ ರೀತಿಯಲ್ಲಿ ವ್ಯವಸ್ಥೆ ನಿರ್ವಹಿಸಿದ್ದರು.
ಆ ಲಯ ಈ ಲಯ ನಾಟಕವು ದಕ್ಷಿಣ ಅಫ್ರಿಕಾದ ಸ್ವಾತಂತ್ರ್ಯದ ಹೋರಾಟವನ್ನು ಮನೋಜ್ಞಾವಾಗಿ ಬಿತ್ತರಿಸಿದರು. ಬ್ಯಾಂಕಿನ ವ್ಯವಸ್ಥಾಪಕರಾದ ಕೆ.ಪ್ರಕಾಶ್, ಕಸಾಪ ಮಾಜಿ ಅಧ್ಯಕ್ಷ ಬಿ.ಅರ್. ಮಸೂತಿ, ಸದಸ್ಯರಾದ ಜಿ.ವೀರೇಶ್ ಇವರು ಎಲ್ಲಾ ಕಲಾವಿದರನ್ನು ಗೌರವಿಸಿ ಸನ್ಮಾನಿಸಿದರು. ಮಸೂತಿಯವರು ನಿರೂಪಿಸಿ ನಾಟಕದ ಮಹತ್ವವನ್ನು ತಿಳಿಸಿದರು.
ಪಟ್ಟಣದ ಎ.ಪಿ.ಎಂ.ಸಿ. ಸರ್ಕಾರಿ ಪ್ರೌಢಶಾಲೆಯ ಅವರಣದಲ್ಲಿ ವೆಸ್ಕೋ ಗಣಿ ಕಂಪನಿ ಹಾಗೂ ಎಸ್.ಪಿ.ಎಸ್. ಬ್ಯಾಂಕ್ ಸಹಯೋಗದಲ್ಲಿ ನೀನಾಸಂ ಹೆಗ್ಗೋಡು( ಸಾಗರ ಕಲಾವಿದರಿಂದ ಆ ಲಯ, ಈ ಲಯ ನಾಟಕವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕಲಾವಿದರನ್ನು ಪರಿಚಯಿಸಲಾಯಿತು.