ನಾಟಕ ಅಕಾಡೆಮಿ ವತಿಯಿಂದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ನಾಟಕ ಸ್ಪರ್ಧೆ

ಕಲಬುರಗಿ.ಸೆ.15: ನಗರದ ರಂಗಾಯಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ನಾಟಕ ಸ್ಪರ್ಧೆಯನ್ನು ಸರಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರಾಜು ಮೋದಿ ಅವರು ಉದ್ಘಾಟಿಸಿ ಮಾತನಾಡುತ್ತಾ ನಾಟಕ ಅನ್ನುವುದು ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದು ಇದು ನಮ್ಮ ಜೀವನದ ಮೇಲೆ ಪರಿಣಾಮ ಬಿರುವ ಕ್ಷೇತ್ರದ ಪ್ರಮುಖ ಆಯಾಮವಾಗಿದೆ ಎಂದು ಮಕ್ಕಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಟಕ ಅಕಾಡೆಮಿ ಸದಸ್ಯರಾದ ಪ್ರವೀಣ ನಾಯಕ ಅವರು ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ರಂಗಭೂಮಿ ಪರಿಕಲ್ಪನೆ ಮೂಡಿಸುವುದರ ಮೂಲಕ ಮಕ್ಕಳಲ್ಲಿ ವಿದ್ಯಾಬ್ಯಾಸ ಜೋತೆಗೆ ಕಲಿಕಾ ರಂಗವಾಗಿ ನಾಟಕ ಅಭ್ಯಾಸವು ಬಹಳ ಮುಖ್ಯವಾಗಿದೆ ಎಂದು ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ, ಅಕಾಡೆಮಿ ಪ್ರಶಸ್ತಿ ಪುರಸ್ಕøತೆ ಸೀತಾ ಮಲ್ಲಾಬಾದಿ, ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ನಾಶಿ ಅವರು ಉಪಸ್ಥಿತರಿದ್ದರು. .ಶಾಂತಲಿಂಗಯ್ಯ ಮಠಪತಿ ಅವರು ನಿರೂಪಿಸಿದರು.