ನಾಟಕದಿಂದ ಕಲಾವಿದರು ಬೆಳಕಿಗೆ ಬರುವರು: ಅಂಗಡಿ

ಬೀದರ್:ಮಾ.27: ಏಳು ದಿವಸಗಳ ನೇಪಥ್ಯ ನಾಟಕೋತ್ಸವವು ಜನಪದ ಮತ್ತು ರಂಗಭೂಮಿಯನ್ನು ಒಂದುಗೂಡಿಸಿದೆ. ಇದರಿಂದ ಸಾವಿರಾರು ಕಲಾವಿದರು ಬೆಳಕಿಗೆ ಬರುತ್ತಾರೆ. ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದು ಕಲ್ಯಾಣ ಕರ್ನಾಟಕದ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ತಿಳಿಸಿದರು.
ಜಾನಪದ ಕಲಾವಿದರ ಬಳಗ, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗುತ್ತಿರುವ ಏಳು ದಿವಸಗಳ ನೇಪಥ್ಯ ನಾಟಕೋತ್ಸವದ ನಾಲ್ಕನೇ ದಿವಸದ ಚೋರ ಚರಣದಾಸ ನಾಟಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿನ ಕಾಲದಲ್ಲಿ ಸಾವಿರಾರು ಸಂಘ-ಸಂಸ್ಥೆಗಳು ಹುಟ್ಟುತ್ತವೆ ಸಾಯುತ್ತವೆ. ಆದರೆ ವಿಜಯಕುಮಾರ ಸೋನಾರೆ ಕಟ್ಟಿದ ಜಾನಪದ ಕಲಾವಿದರ ಬಳಗವು ಕಲಾವಿದರ ಜೀವಾಳವಾಗಿದೆ. ಜನಪದ, ನಾಟಕ, ತತ್ವಪದ, ನೃತ್ಯಗಳನ್ನು ಒಂದೇ ವೇದಿಕೆ ಮೇಲೆ ತಂದು ಕಲೆಯನ್ನು ಪೆÇೀಷಣೆ ಮಾಡಲಾದ ಪರಿ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ ರಂಗಭೂಮಿ ಎಂದರೆ ಅದೊಂದು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಕಲೆಗೆ ಜಾತಿ ಮತ ಧರ್ಮಭೇದವಿಲ್ಲ. ಅಳವಿನಂಚಿನಲ್ಲಿರುವ ಕಲೆ ಮತ್ತು ಕಲಾವಿದರಿಗೆ ಆಶ್ರಯತಾಣವಾಗಿದೆ ಈ ನಾಟಕೋತ್ಸವ. ನಾಟಕಗಳಿಗೆ ನಾವು ಗೌರವ ಕೊಡುವುದೇ ಆದರೆ ಪ್ರತಿದಿನ ವೀಕ್ಷಣೆ ಮಾಡಬೇಕು. ನಾಟಕ ನೋಡುವುದರಿಂದ ಹೃದಯಾನಂದವಾಗುತ್ತದೆ. ಆಯಾ ದೇಶದ ಸಂಸ್ಕೃತಿ ಅನಾವರಣವಾಗುತ್ತದೆ ಎಂದು ಪ್ರತಿಪಾದಿಸಿದರು.
ನಾಲ್ಕನೇ ದಿವಸದ ನಾಟಕೋತ್ಸವವನ್ನು ಹೈದರಾಬಾದ ಪತ್ರಕರ್ತ ಮಲ್ಲಿಕಾರ್ಜುನ ಕಲ್ವಾ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಜೊತೆಗೆ ಬೆಂಗಳೂರಿನ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ಕಲಾವಿದರಾದ ಮಲ್ಲಿಕಾರ್ಜುನ ಕಲ್ವಾ ಹೈದರಾಬಾದ, ಮಲ್ಲಿಕಜಾನ್ ಶೇಖ್ ಮಹಾರಾಷ್ಟ್ರ, ಮೋಹನಕುಮಾರ ಬೆಂಗಳೂರು, ಲಲಿತಾ ಲೋಕಪವಾರ್, ಮಾರುತಿ ಝರೆಪ್ಪಾ ಆಣದೂರ, ಎಚ್‍ಕೆಇ ಸೊಸೈಟಿ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾದ ಡಾ. ರಜನೀಶ ವಾಲಿ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾದ ಡಾ.ಸಂಜೀವಕುಮಾರ ಅತಿವಾಳೆ, ಕಲಾವತಿ ಸೋನಾರೆ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಗುತ್ತಿದೆ. ಭಾಲ್ಕಿಯ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಸೋನಾರೆ ಎಕ್ಸ್ಪ್ರೆಸ್ ಪತ್ರಿಕೆ ಬಿಡುಗಡೆ ಮಾಡಿದರು. ಬೆಂಗಳೂರಿನ ನಿಸರ್ಗ ಹಾಗೂ ತಂಡದವರಿಂದ ಜಾನಪದ ಗಾಯನ ಜರುಗಿತು. ಬಳ್ಳಾರಿಯ ಮಯೂರಿ ಬಸವರಾಜ ಅವರಿಂದ ಶಾಸ್ತ್ರೀಯ ನೃತ್ಯ ಸಭೀಕರ ಗಮನ ಸೆಳೆಯಿತು.
ಕೊನೆಯಲ್ಲಿ ಹಬೀಬ್ ತನ್ವೀರ್ ರಚಿಸಿರುವ, ಮಂಡ್ಯ ರಮೇಶ ನಿರ್ದೇಶನಗೈದ ಚೋರ ಚರಣದಾಸ ನಾಟಕ ಪ್ರದರ್ಶನವು ಮಂಡ್ಯದ ನಟನಾ ತಂಡದ ಕಲಾವಿದರು ನೆರವೇರಿಸಿಕೊಟ್ಟರು. ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಿಸಿದರು. ಪಾರ್ವತಿ ಸೋನಾರೆ ವಂದಿಸಿದರು.