ನಾಟಕಗಳ ಪ್ರದರ್ಶನಕ್ಕೇಕೆ ಅಡ್ಡಿ

ಬಳ್ಳಾರಿ ಮಾ 30 : ನಗರ ಪ್ರದೇಶದ ಸಿನಿಮಾ ಮಂದಿರಗಳಲ್ಲಿ ಶೇ 100 ಪ್ರೇಕ್ಷಕರಿಗೆ ಅವಕಾಶವಿದೆ. ಆದರೆ ಕೋವಿಡ್ ನೆಪ ಹೇಳಿ ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸುವುದನ್ನು ಪ್ರಶ್ನಿಸಿ‌ ಇಂದು ಜಿಲ್ಲಾಡಳಿತಕ್ಕೆ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಮನವಿ ಸಲ್ಲಿಸಿದೆ. ನಾಟಕ ಏರ್ಪಡಿಸುವ ಕಲಾವಿದರಲ್ಲಿ ನಿಯಮಾವಳಿಗಳ ಗೊಂದಲಗಳಿಂದ ಅನುಮಾನ ಆತಂಕ ಮನೆಮಾಡಿವೆ. ಕೆಲವರು ಅನಿಶ್ಚಿತತೆಯಿಂದ ನಾಟಕ ಯೋಜನೆಯನ್ನು ಕೈಬಿಟ್ಟಿದ್ದಾರೆ. ಕೆಲವು ಗ್ರಾಮಗಳಲ್ಲಿ ಅಧಿಕಾರಿಗಳು ಏಕಾಏಕಿ ನಾಟಕ ರದ್ದುಮಾಡಿದ ಕಾರಣ ಕಲಾವಿದರು ಅಪಾರ ನಷ್ಟಕ್ಕೀಡಾಗಿದ್ದಾರೆ. ಈ ಗೊಂದಲ ನಿವಾರಿಸಲು ಜಿಲ್ಲಾಧಿಕಾರಿಗಳು ಸಿನಿಮಾ ಪ್ರದರ್ಶನಕ್ಕೆ ಇರುವ ನಿಯಮ ವನ್ನೇ ನಾಟಕಗಳಿಗೂ ಅಳವಡಿಸಬೇಕು ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲ ಕೆ ‌ ಜಗದೀಶ್, ಅಭಿನಯ ಕಲಾಕೇಂದ್ರ, ಹೊನ್ನೂರು ಸ್ವಾಮಿ, ಹುಲಿಕುಂಟೆ ರಾಯ ತೊಗಲುಗೊಂಬೆ ಕಲಾತಂಡ, ಡಿ ‌ಗಂಗಾಧರ, ವಿಕಾಸ ಕಲಾಸಂಘ, ಕೊಳಗಲ್ಲು, ವಿಷ್ಣು ಹಡಪದ, ರಂಗಜಂಗಮ, ಡಿ.ಕಗ್ಗಲ್, ನಾಗರಾಜ, ರಂಗಕಹಳೆ, ಮಿಂಚೇರಿ ಇವರು ಇದ್ದರ