ನಾಟಕಗಳು ಸಮಾಜದ ಸ್ವಾಸ್ಥ್ಯ ಶುಧ್ಧಗೊಳಿಸುವ ಸಾಧನೆ :ಬಿ ಡಿ ಪಾಟೀಲ

ಇಂಡಿ: ಜು.14:ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿ ಉಳಿದಿರುವುದು ಸಂತೋಷದ ಸಂಗತಿ. ನಾಟಕವು ಸಮಾಜದ ಸ್ವಾಸ್ಥ್ಯ ಶುಧ್ಧಗೋಳಿಸುವ ಸಾಧನೆ ಎಂದು ಜೆಡಿಎಸ್ ಮುಖಂಡ ಬಿ,ಡಿ,ಪಾಟೀಲ ಹೇಳಿದರು. ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಮರಗಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ ಬಡವನ ತಂಗಿ ಬಲು ಜಾಣೆ ಅರ್ಥಾತ್ ಧರ್ಮ ದಾರಿ ಬಿಟ್ಟಿಲ್ಲ ಎಂಬ ಸುಂದರ ಸಾಮಾಜೀಕ ನಾಟಕವನ್ನು ಉಧ್ಘಾಟಿಸಿ ಮಾತನಾಡಿದ ಅವರು ಗಾಂಧೀಜಿಯವರು ಸತ್ಯಹರಿಚಂದ್ರ ನಾಟಕವನ್ನು ನೋಡಿ ಆತ್ಮ ಸಾಕ್ಷಾತಾರವನ್ನು ಪಡೆದುಕೋಳ್ಳಲು ಸಾಧ್ಯವಾಯಿತು ಎಂದು ಹೇಳಿದರು. ರಂಗ ಸಜ್ಜಿಕೆಯ ಮೇಲೆ ಶ್ರೀಜಲದೇಶ್ವರ ಗದ್ದುಗೆ ಪೂಜಾರಿ ಹಿರಗಪ್ಪ ಪೂಜಾರಿ ಸಾನಿಧ್ಯ ವಹಿಸಿದ್ದರು. ಕಾಸುಗೌಡ ಮಲಕನಗೌಡ ಬಿರಾದಾರ ಸಭೆಯ ಅಧ್ಯಕ್ಷತೆ ವಹಿಸಿದರು. ಅಜೀತ ಕದಂ, ಯಲಪ್ಪ ಪೂಜಾರಿ, ಧರ್ಮರಾಜ ಮದರಕಂಡಿ, ಸಿದ್ದು ದಶವಂತ, ಹಣಮಂತ ಹೋನ್ನಳ್ಳಿ, ಸಿದ್ದು ಬಿರಾದಾರ, ಮಲ್ಲಪ್ಪ ಕಾಂಬಳೆ, ಹುಸೇನಸಾಬ ಅಹಿರಸಂಗ, ಜಗುಗೌಡ ಪಾಟೀಲ, ಮಂಜುಗೌಡ ಪಾಟೀಲ, ಮಚ್ಚು ಕದಂ, ಶ್ರೀಮಂತ ಕಾಂಬಳೆ, ಸೋಮು ಆಳೂರ, ಸೈಫನ್ ಶೇಖ, ಯಲ್ಲಪ್ಪ ಹರಳಯ್ಯ, ವಿಲಾಸ ಹಕ್ಕಿ, ಸೋಮು ಜಂಗಲಗಿ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತಿ ಇದ್ದರು.