ಧಾರವಾಡ,ಜೂ.19: ನಾಟಕಗಳು ಜೀವನ ಕಲೆ ಕಲಿಸುವ ಪ್ರಬಲ ಮಾಧ್ಯಮ. ಅದು ಮನುಷ್ಯನ ಮನಸ್ಸಿನ ಕಲ್ಮಶವನ್ನು ಕಳೆದು ಚಿತ್ತಶುದ್ಧಿ ಮಾಡುವದೃಶ್ಯಕಾವ್ಯಎಂದುಜೆ.ಎಸ್.ಎಸ್‍ಕಾಲೇಜಿನಕನ್ನಡ ವಿಭಾಗದ ಮುಖ್ಯಸ್ಥರಾದಡಾ.ಜಿನದತ್ತ ಹಡಗಲಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ.ಸಂಪಿಗೆ ತೋಂಟದಾರ್ಯದತ್ತಿಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ರಂಗಗೀತೆಗಳ ಕಾರ್ಯಕ್ರಮದಲ್ಲಿ `ರಂಗಭೂಮಿ ನಡೆದು ಬಂದದಾರಿ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ರಂಗ ಕಲೆಗೆ ಜಗತ್ತಿನಎಲ್ಲಾ ದೇಶಗಳಲ್ಲಿ ತನ್ನದೇಆದಗೌರವ ಸ್ಥಾನವಿದೆ.ಇದು ನಾಗರಿಕತೆಯ ಹುಟ್ಟಿನೊಂದಿಗೆ ಬೆಳೆದು ಬಂದಿದೆ.ಜಗತ್ತಿನ ಮಹಾನ್‍ದಾರ್ಶನಿಕರು, ಮುತ್ಸದಿಗಳೂ ಸಹ ರಂಗಭೂಮಿಯಿಂದ ಪ್ರಭಾವಿತರಾಗಿದ್ದಾರೆ. ರಂಗಕಲೆ ಭಾಷೆ ಸಂಸ್ಕøತಿಯನ್ನು ಮೀರಿದಕಲೆಯಾಗಿದೆ.ಕ್ರಿ.ಶ. 1045 ರಲ್ಲಿ ಶಾಸನದಲ್ಲಿ ನಾಟ್ಯಕಾವ್ಯದಲ್ಲಿ ಪ್ರಸ್ತಾಪವಿದೆ.ರಂಗಭೂಮಿಗೆ ಮೂಲ ಜಾನಪದರಂಗಭೂಮಿಯಾಗಿದೆ.ಇಂದಿಗೂ ವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಗಳು ಜನರಿಗೆ ಮನರಂಜನೆ, ಶಿಕ್ಷಣ ಹಾಗೂ ಸ್ಫೂರ್ತಿ ನೀಡುತ್ತಿರುವುದುಅಭಿನಂದನೀಯಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದ ಮಾತನಾಡಿದರು.ವೇದಿಕೆಯಲ್ಲಿ ಶಂಕರ ಕುಂಬಿ ಇದ್ದರು.ಗಾಯಕರು, ಸಂಗೀತ ಸಂಯೋಜಕರಾದರಾಘವಕಮ್ಮಾರ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.
ಶಂಕರ ಹಲಗತ್ತಿ ಸ್ವಾಗತಿಸಿದರು.ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ನಿಂಗಣ್ಣಕುಂಟಿ, ಜಿ.ಬಿ.ಹೊಂಬಳ, ಡಾ. ಪ್ರಕಾಶಗರುಡ, ಡಾ.ಶಶಿಧರ ನರೇಂದ್ರ, ಸುಮತಿದೇಸಾಯಿ, ಶಂಕರ ಮರೇದ ಸೇರಿದಂತೆ ಮುಂತಾದವರಿದ್ದರು.